ಸಿದ್ದರಾಮಯ್ಯ ಬೆಂಗಳೂರು ಪ್ರದಕ್ಷಿಣೆ ಮುಖ್ಯಾಂಶಗಳು

ಬೆಂಗಳೂರು, ಜೂ. 22 : ವಿಶ್ವಯೋಗ ದಿನದಂದು ಯೋಗ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಮಯದಲ್ಲಿ ಭರವಸೆ ನೀಡಿದರು.

ಪ್ರತಿವಾರ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಈ ಬಾರಿ ಭಾನುವಾರ ನಗರ ಪ್ರದಕ್ಷಿಣೆ ಮಾಡಿದರು. ಗೃಹ ಕಚೇರಿ ಕೃಷ್ಣಾದಿಂದ ಹೊರಟ ಅವರು, ಫ್ರೀಡಂಪಾರ್ಕ್, ಲಾಲ್‌ಬಾಗ್, ಎಂಎಂ ರಸ್ತೆ, ಕಾಚರಕನಹಳ್ಳಿ ಕೆರೆ ಪ್ರದೇಶ, ಲಿಂಗರಾಜಪುರ, ಬಾಣಸವಾಡಿ ಕೆರೆ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. [ಮೇ 30ರ ನಗರ ಪ್ರದಕ್ಷಿಣೆ ಮುಖ್ಯಾಂಶಗಳು]

siddaramaiah

ಬೆಂಗಳೂರು ರೌಂಡ್ಸ್ ಮುಖ್ಯಾಂಶಗಳು

* ಬಿಡಿಎ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಬಿಡಿಎಗೆ ಸೇರಿದ ಸುಮಾರು 3,699 ಎಕರೆ ಭೂಮಿ ಅತಿಕ್ರಮಣವಾಗಿದೆ. ಈ ಪ್ರದೇಶದಲ್ಲಿ ಸುಮಾರು 30 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಜನರು ವಾಸ ಮಾಡುತ್ತಿದ್ದು, ಅವರನ್ನು ತೆರವುಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಸಕ್ರಮಗೊಳಿಸಲಾಗುವುದು ಎಂದರು. [ಜೂನ್ 15ರ ನಗರ ಪ್ರದಕ್ಷಿಣೆಯಲ್ಲಿ ಏನಾಯ್ತು?]

* ಸಿದ್ದರಾಮಯ್ಯ ಅವರು ಲಾಲ್‌ ಬಾಗ್‌ಗೆ ಭೇಟಿ ನೀಡಿದಾಗ ಪಾರ್ಕ್‌ನಲ್ಲಿ ಮೂಲ ಸೌಕರ್ಯ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 29 ಕೋಟಿ ಅನುದಾನ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಕುರಿತು ಪ್ರಸ್ತಾವನೆ ಸಲ್ಲಿಸಲು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

* ಕಾಚರಕನಹಳ್ಳಿ ಕೆರೆ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಕೆರೆ ವ್ಯಾಪ್ತಿಗೆ ಸುಮಾರು 57 ಎಕರೆ ಪ್ರದೇಶ ಸೇರುತ್ತದೆ. ಇದರ ವ್ಯಾಪ್ತಿಯಲ್ಲಿ ದೇವಾಲಯ, ಸಮುದಾಯ ಭವನ, ಶಾಲೆಗಳಿವೆ ಅವುಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

* ನಗರೋತ್ಥಾನ ಯೋಜನೆಯಡಿ ಫ್ರೀಡಂಪಾರ್ಕ್‌ ಬಳಿ ನೆಲದಡಿ ಮೂರು ಅಂತಸ್ತಿನ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+