ತಂತ್ರಜ್ಞಾನ ಉಪನ್ಯಾಸಕರಿಗೊಂದು ವೃತ್ತಿ ಕೌಶಲ್ಯ ಒಡಂಬಡಿಕೆ
ಬೆಂಗಳೂರು, ಅಕ್ಟೋಬರ್, 31: ಶ್ರೀ ಮಧ್ವ ವಾದಿರಾಜ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ಬೆಂಗಳೂರಿನ ರಾಚನಿಕ ವಿನ್ಯಾಸ ಸಲಹಾ ಸಂಸ್ಥೆ ಸಹಯೋಗದಲ್ಲಿ ಅಕ್ಟೋಬರ್ 30, ಶುಕ್ರವಾರದಂದು ಸಂಸ್ಥೆಯ ಶೈಕ್ಷಣಿಕ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಸಮಾರಂಭ ಏರ್ಪಡಿಸಿತ್ತು. ಇದರಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಒಡಂಬಡಿಕೆಗೆ ಸಹಿಹಾಕಿದರು.
ಶೈಕ್ಷಣಿಕ ಉದ್ದೇಶ ಹೊಂದಿರುವ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್ ಮೆಂಟ್ ಸಂಸ್ಥೆ ಒಡಂಬಡಿಕೆಯಲ್ಲಿ ಕೆಲವು ನಿಗದಿತ ತಂತ್ರಾಂಶದ ತರಬೇತಿ ಮತ್ತು ಮಾರ್ಗದರ್ಶನಗಳ ಮಾಹಿತಿ ಇದೆ. ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದರಲ್ಲಿರುವ ಮಾಹಿತಿ ಪಡೆದು ತಮ್ಮ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಬಹುದು ಎಂದು ಎಫ್.ಇ. ಡಿಸೈನ್ಸ್ ಸಂಸ್ಥೆಯ ಅಮರನಾಥ್ ಮಾಹಿತಿ ನೀಡಿದರು.[ಕೌಶಲ್ಯ ವೃದ್ಧಿ ಸ್ವಾವಲಂಬನ್ ಯೋಜನಾ ಮಾರ್ಗಸೂಚಿ ಪ್ರಕಟ]

ಬೆಂಗಳೂರಿನಲ್ಲಿರುವ ಎಫ್.ಇ. ಡಿಸೈನ್ಸ್ ಸಂಸ್ಥೆಯು ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಚಲಿತದಲ್ಲಿರುವ ಸ್ಪೇನ್ ದೇಶದ "ಸೈಪ್" ಮತ್ತು ಸ್ವಿಜಲ್ರ್ಯಾಂಡ್ ದೇಶದ "ಕ್ಯುಬಸ್" ಎಂಬ ವಿನ್ಯಾಸ ವಿವರಣಾ ತಂತ್ರಾಂಶಗಳನ್ನು ಹೊಂದಿದ್ದು, ಭಾರತದ ಏಕೈಕ ಅಧಿಕೃತ ವಿತರಕ ಮತ್ತು ತರಬೇತಿ ಸಂಸ್ಥೆಯಾಗಿದೆ. ಹಾಗಾಗಿ ಸಂಸ್ಥೆಯ ಬೆಳವಣಿಗೆಗೆ ಅನುಕೂಲವಾಗಲೆಂದು ಈ ಒಡಂಬಡಿಕೆ ಜಾರಿಗೆ ತರಲಾಗುತ್ತಿದೆ.
ಈ ಒಡಂಬಡಿಕೆಯು ವಿಶೇಷ ತಾಂತ್ರಿಕ ವಿಷಯಗಳಲ್ಲಿ ಅತಿಥಿ ಉಪನ್ಯಾಸಗಳ ಆಯೋಜನೆ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಕೇಂದ್ರಗಳ ಭೇಟಿ, ತಾಂತ್ರಿಕ ತರಬೇತಿ ಮತ್ತು ಶೈಕ್ಷಣಿಕ ಯೋಜನೆಗಳಿಗೆ ಸಹಾಯಹಸ್ತ ಮುಂತಾದ ಅಂಶಗಳನ್ನು ಒಳಗೊಂಡಿದೆ.[ವಿದೇಶ ವ್ಯಾಸಂಗಕ್ಕೆ ತೆರಳುವ ಅಲ್ಪಸಂಖ್ಯಾತರಿಗೆ ಶಿಷ್ಯವೇತನ]
ಈ ಸಮಾರಂಭದಲ್ಲಿ ಎಫ್.ಇ. ಡಿಸೈನ್ಸ್ ಸಂಸ್ಥೆಯ ಅಮರನಾಥ್ ಎಸ್. ಎನ್. ಮತ್ತು ಪದ್ಮಶ್ರೀ, ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್ ಪ್ರತಿನಿಧಿಗಳಾದ ರಾಘವೇಂದ್ರ ತಂತ್ರಿ, ನಿರ್ದೇಶಕರಾದ ಡಾ.ರಾಧಾಕೃಷ್ಣ ಎಸ್. ಐತಾಳ್, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಶೈಕ್ಷಣಿಕ ಡೀನ್ ಡಾ. ಎ ಗಣೇಶ್, ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ರಾಧೇಶ್ಯಾಮ್ ಇನ್ನಿತರರು ಉಪಸ್ಥಿತರಿದ್ದರು.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 104 ಕೋಟಿ ರೂ. ವೆಚ್ಚದಲ್ಲಿ ಉಚಿತ ಶೂ, ಸಾಕ್ಸ್ ವಿತರಣೆಗೆ ಸರ್ಕಾರದ ಆದೇಶ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ -
ಏಪ್ರಿಲ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ: 9ನೇ ತರಗತಿಯ ಪರಿಷ್ಕೃತ NCERT ಪಠ್ಯಪುಸ್ತಕ ವಿಳಂಬ, ಹೆಚ್ಚಾದ ಗೊಂದಲ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಉನ್ನತ ಶಿಕ್ಷಣದಲ್ಲಿ 'ಕೇಂದ್ರೀಕರಣ'ದ ಆತಂಕ: ಉದ್ದೇಶಿತ VBSA ಮಸೂದೆ 2025ರ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ












Click it and Unblock the Notifications