• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ರಿಸ್‌ಮಸ್‌, ಹೊಸವರ್ಷಕ್ಕೆ ತರಹೇವಾರಿ ಕಲಾಕೃತಿಗಳು ಒಂದೇ ಸೂರಿನಡಿ

|

ಬೆಂಗಳೂರು, ಡಿಸೆಂಬರ್ 21: ನಗರದಲ್ಲಿ ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ಮನೆ ಹಾಗೂ ಮನಗಳನ್ನು ಆಲಂಕರಿಸಲು ಹಾಗೂ ಆಂಟಿಕ್ ಮಣ್ಣಿನಿಂದ ಮಾಡಿದ ಆಭರಣಗಳು, ಖಾದಿ ಹಾಗೂ ಕಾಟನ್ ಸೀರಗೆಳು, ಕುಸುರಿ ಕೆಲಸ ಮಾಡಿರುವ ಬಣ್ಣ ಬಣ್ಣದ ಬಳೆಗಳು, ಸರಗಳು ಹೀಗೆ ಎಲ್ಲವೂ ಒಂದೇ ಸೂರಿನಡಿಯಲ್ಲಿ ದೊರಕಿಸಿ ಕೊಡುವ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿರುವ ಅರ್ಬನ್ ಬಜಾರ್ ಗೆ ನಟಿ ಪದ್ಮಾ ವಾಸಂತಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ದೇಶದ ಕರಕುಶಲಕಾರರ ಕೈಚಳಕವನ್ನು ಒಂದೇ ವೇದಿಕೆಯ ಅಡಿಯಲ್ಲಿ ನೋಡುವ ಅವಕಾಶ ಇಲ್ಲಿ ಒದಗಿಬಂದಿದೆ. ಒಬ್ಬರಿಗಿಂತಾ ಒಬ್ಬರು ಅಂದವಾದ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಚರ್ಮದಲ್ಲಿ ಅಂದವಾಗಿ ನಿರ್ಮಿಸಿರುವ ಆಂಧ್ರಪ್ರದೇಶದ ಪಪೇಟ್ ಕಲಾಕೃತಿಯಂತೂ ಎಲ್ಲರ ಗಮನ ಸೆಳೆಯುವಂತಿದೆ ಎಂದರು.

ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಮಾತನಾಡಿ, ದೇಶದ ಕಲಾಕಾರರ ಕಲಾಕೃತಿಗಳಿಗೆ ವೇದಿಕೆ ಒದಗಿಸುವ ಕಾರ್ಯವನ್ನು ಚಿತ್ರಕಲಾ ಪರಿಷತ್ ನಡೆಸುತ್ತಾ ಬಂದಿದೆ. ಈ ಕಾರ್ಯ ಇಂತಹ ಪ್ರದರ್ಶನ ಹಾಗೂ ಮಾರಾಟ ಮೇಳದ ಮೂಲಕ ಮುಂದುವರೆಯಲಿವೆ ಎಂದರು.

ಆಳ್ವಾಸ್ ನಲ್ಲಿ ಕ್ರಿಸ್ಮಸ್‌ ಸಂಭ್ರಮ:ವಿಭಿನ್ನ ರೀತಿಯ ದೀಪಾಲಂಕಾರ

ಚಿತ್ತಾರ ಸಂಸ್ಥೆಯು ಗ್ರಾಂಡ್ ಫ್ಲೀ ಮಾರ್ಕೇಟ್ ಸಹಯೋಗದೊಂದಿಗೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ "ಅರ್ಬನ್ ಬಜಾರ್" ಹೆಸರಿನ ವಸ್ತು ಪ್ರದರ್ಶನವನ್ನು ಆಯೋಜಿಸಿದೆ. ಡಿಸೆಂಬರ್ 21 ರಿಂದ ಡಿಸೆಂಬರ್ 30 ರ ವರೆಗೆ ನಡೆಯಲಿರುವ ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ವಿವಿಧ ಭಾಗಗಳಲ್ಲಿರುವ ಕರಕುಶಲ ಕರ್ಮಿಗಳು ತಯಾರಿಸಿರುವ ಉತ್ಪನ್ನಗಳು ದೊರೆಯಲಿವೆ.

10 ದಿನಗಳ ಕಾಲ ನಡೆವ ಪ್ರದರ್ಶನ

10 ದಿನಗಳ ಕಾಲ ನಡೆವ ಪ್ರದರ್ಶನ

10 ದಿನಗಳ ಕಾಲ ನಡೆಯಲಿರುವ ಈ ಮೇಳವು ಬೆಳಿಗ್ಗೆ 11 ಗಂಟೆಯಿಂದ ಆರಂಭವಾಗಿ ಸಂಜೆ 7.30 ರ ವರೆಗೆ ನಡೆಯಲಿದೆ. ಅಲ್ಲದೆ ಪ್ರತಿ ದಿನ ಗ್ರಾಹಕರ ಮನರಂಜಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ಹಾಗೂ ಕಶಲ ಕರ್ಮಿಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅರ್ಬನ್ನ ಬಜಾರನ್ನು ಆಯೊಜಿಸಲಾಗಿದ್ದು, ನೂರಕ್ಕೂ ಹೆಚ್ಚು ಕರಕುಶಲಕರ್ಮಿಗಳ ಮಳಿಗೆಗಳು ಇವೆ.

ವಿಡಿಯೋ: ಮಕ್ಕಳ ಆಸ್ಪತ್ರೆಯಲ್ಲಿ ಅಚ್ಚರಿ, ಸಾಂತಾಕ್ಲಾಸ್ ಆಗಿ ಒಬಾಮಾ!

ದೇಶದ ಎಲ್ಲ ರಾಜ್ಯಗಳ ಕಲಾವಿದರು ಭಾಗಿ

ದೇಶದ ಎಲ್ಲ ರಾಜ್ಯಗಳ ಕಲಾವಿದರು ಭಾಗಿ

ಈ ಬಜಾರ್ ನಲ್ಲಿ ದೇಶದ ಮೂಲೆ ಮೂಲೆಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಒರಿಸ್ಸಾ, ರಾಜಸ್ತಾನ್, ಟ್ರೈಬಲ್ ಇನ್ನಿತರೆ ಆಭರಣಗಳು. ವುಡನ್ ಫೌಂಟೇನ್, ವುಡನ್ ವಾಚಗಳು, ವುಡನ್ ಡ್ರೈಫ್ರೂಟ ಬಾಕ್ಸ್‌ಗಳು. ತರತರಹದ ಪಿಂಗಾಣಿ ವಸ್ತುಗಳು, ಎಲ್ಲಾ ರಾಜ್ಯಗಳ ಕಲಾವಿದರು ನಿರ್ಮಿಸಿರುವ ತರತರಹದ ಸೀರೆಗಳು, ಎಲ್ಲಾ ತರಹದ ಕುರ್ತಿಗಳು. ಕಲಾಂಕರಿ, ಕೊಲ್ಕೊತ್ತಾ ಬ್ಯಾಗಗಳು, ಕನ್ನೂರ್ ಕಾಟನ್ ಕರ್ಟನ್‍ಗಳು, ತರತರಹದ ಬೆಡ್ ಶೀಟ್‌ಗಳು ಈ ಬಾರಿಯ ಹೈಲೈಟ್.

'ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು'

ಹಲವು ವಿದದ ಕಲಾಕೃತಿಗಳು

ಹಲವು ವಿದದ ಕಲಾಕೃತಿಗಳು

ಅಲ್ಲದೆ, ಇಲ್ಲಿ ಹುಲ್ಲಿನ ಆಂಧ್ರಪ್ರದೇಶದ ಪಪೆಟ್‌ಗಳು, ಹಾಸು, ಬೆಳ್ಳಿಯ ಸೂಕ್ಷ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಾಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ. ಪುರಾನಾ ಸಾಹು ಅವರ ಕಣ್ಮನಸೆಳೆಯುವ ಪುರಾತನ ಹಿತ್ತಾಳೆಯ ಕರಕುಶಲವಸ್ತುಗಳು. ಅಲ್ಲದೆ ಅವರ ಸೌರ ಚಿತ್ರಕಲಾಕೃತಿಗಳು ಇಲ್ಲಿ ಲಭ್ಯ. ಪೌರ್ಣ ಚಂದ್ರ ಮೊಹಪಾತ್ರ ಅವರ ಬೆಳ್ಳಿಯ ಆಭರಣಗಳು ಆಧುನಿಕತೆಯ ಹಿನ್ನಲೆಯಲ್ಲಿ ಪುರಾತನ ಸೊಬಗನ್ನು ಬಿಂಬಿಸಲಿವೆ. ಪೆಂಡೆಟ್‌ಗಳು, ಬಳೆಗಳು, ಹೇರ್ ಪಿನ್‌ಗಳು ಅಲ್ಲದೆ ಮುತ್ತಿನ ಆಭರಣದ ಕುಂಕುಮ ಬಾಕ್ಸ್‌ಗಳು ಇಲ್ಲಿ ಲಭ್ಯವಿವೆ.

ಕ್ರಿಸ್‌ಮಸ್ ರಜೆ : ಕೆಎಸ್ಆರ್‌ಟಿಸಿಯಿಂದ 550 ಹೆಚ್ಚುವರಿ ಬಸ್

ಉತ್ಪಾದಕರಿಂದ ಗ್ರಾಹಕರಿಗೆ

ಉತ್ಪಾದಕರಿಂದ ಗ್ರಾಹಕರಿಗೆ

ಇದಲ್ಲದೆ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್‍ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್‍ಗಳು ಮತ್ತು ಬೆಡ್‍ಶೀಟ್‍ಗಳನ್ನು ಈ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿ ಮಾರಾಟ ಮಾಡುವರು. ಈ ವಸ್ತುಗಳನ್ನು ಉತ್ವಾದಕರೆ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿರುವುದರಿಂದ ವಸ್ತುಗಳು ನ್ಯಾಯಯುತ ಬೆಲೆಯಲ್ಲ್ಲಿ ದೊರಕಲಿವೆ.

English summary
Shopping options for Christmas and New year at urban bazar. It opened today in Benaluru's Chitrakala Parishad. Actress Padma Vasanthi inagurated the shops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X