ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸು ಎಂದು ಶೋಭಾ ಕರಂದ್ಲಾಜೆ
ಬೆಂಗಳೂರು,
ಡಿಸೆಂಬರ್ 2: ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸು ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ. id="toptextpromo"> id='are-slot-1' class='oiad oi-axt oiadv'>ಸೋಮವಾರ
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರೇ ನಿಮ್ಮನ್ನ ಸಿಎಂ ಅಂತಾ ಒಪ್ಪಿಕೊಳ್ಳಲಿ ಇದು ನಿಮಗೆ ಸವಾಲ್,ಖರ್ಗೆ ಒಪ್ಕೊತ್ತಾರಾ ? ಪರಮೇಶ್ವರ್ ನಿಮ್ಮನ್ನ ಸಿಎಂ ಅಂತಾ ಒಪ್ಕೊತ್ತಾರಾ ಡಿಕೆ ಶಿವಕುಮಾರ್ ನಿಮ್ಮನ್ನ ಒಪ್ಕೊತ್ತಾರಾ ? ಹೇಳಿ ಸುಳ್ಳು ಹೇಳಿ ಯಾಕೆ ಜನರ ದಿಕ್ಕು ತಪ್ಪಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು. id='are-slot-2' class='oiad oi-axt oiadv'>
ಬಿಜೆಪಿ ಸರ್ಕಾರವನ್ನು ಗಟ್ಟಿಗೊಳಿಸುವ ಚುನಾವಣೆ ಇದು
ಬಿಜೆಪಿ ಸರ್ಕಾರವನ್ನು ಗಟ್ಟಿಗೊಳಿಸುವ ಚುನಾವಣೆ ಇದಾಗಲಿದೆ, 15ಕ್ಕೆ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದಶಕಗಳ ಕಾಲದ ಬಳಿಕ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.

ಬಿಜೆಪಿ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ
ಈ ಮೊದಲು ಕೇಂದ್ರ, ರಾಜ್ಯದಲ್ಲಿ ತದ್ವಿರುದ್ಧ ಪಕ್ಷಗಳು ಅಧಿಕಾರದಲ್ಲಿದ್ದವು, ಈ ಬಾರಿ ಒಂದೇ ಪಕ್ಷ ಅಧಿಕಾರದಲ್ಲಿರೋ ಕಾರಣ ರಾಜ್ಯದ ಅಭಿವೃದ್ಧಿವಾಗುತ್ತೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚೀನಾಕ್ಕೆ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬರುವಂತೆ ಪ್ರಧಾನಿ ಮೋದಿ ಆಹ್ವಾನಿಸಿದ್ದರು, ಆದರೆ ಅಂದು ಸಿದ್ದರಾಮಯ್ಯ ಹೋಗಲಿಲ್ಲ. ಅದನ್ನು ಸಿದ್ದರಾಮಯ್ಯ ರಾಜಕೀಯ ದೃಷ್ಟಿಯಿಂದಲೇ ನೋಡಿದ್ರು ಎಂದು ಹೇಳಿದರು.

ಸಿದ್ದರಾಮಯ್ಯ ಪ್ರತಿಪಕ್ಷ ಸ್ಥಾನ ಉಳಿಸಿಕೊಳ್ಳಲು ಹರಸಾಹಸ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದು ಬಿಟ್ಟುಬಿಡಿ. ಅವರು ಪ್ರತಿಪಕ್ಷ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.ಕಾಂಗ್ರೆಸ್ ನವರಿಗೆ ಸಿಹಿ ಸುದ್ದಿ ಅಂದ್ರೆ ಸಿದ್ದರಾಮಯ್ಯರನ್ನ ಕೆಳಗಿಳಿಸಿ ಮನೆಗೆ ಕಳುಹಿಸೋದೇ ಸಿಹಿ ಸುದ್ದಿ,ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವ್ರು ಚುನಾವಣೆ ಬಳಿಕ ಸಿಹಿ ಸುದ್ದಿ ಬರುತ್ತೆ ಅಂತಾ ಹೇಳಿದ್ದಾರೆ.
ಸಿದ್ದರಾಮಯ್ಯ ಆಡಳಿತ ಅಂದ್ರೆ ಜಾತಿ ರಾಜಕಾರಣ ಅಂತ ಅರ್ಥ,ಧರ್ಮ ಒಡೆಯೋ ಕೆಲಸ ಮಾಡಿದ್ರು.ಹೆಚ್ ಡಿ ಕುಮಾರಸ್ವಾಮಿ ಕೂಡ ಅದನ್ನೇ ಮುಂದುವರೆಸಿದ್ದರು ಎಂದರು.

ಸಿದ್ದರಾಮಯ್ಯಗೆ ಸಿಎಂ ಆಗುವ ಹಗಲು ಕನಸು
ಸಿದ್ದರಾಮಯ್ಯ ಅವರು 60 ಮಂದಿ ಶಾಸಕರನ್ನಿಟ್ಟುಕೊಂಡು ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.












Click it and Unblock the Notifications