ಬ್ರಿಟಿಷರಿಗೇ ಹೆದರದ ಕಾಂಗ್ರೆಸ್ ‘ಪುಟ್ಗೋಸಿ’ ಬಿಜೆಪಿಗರಿಗೆ ಹೆದರಬೇಕಾ?: ಶಿವರಾಜ ತಂಗಡಗಿ

ಬೆಂಗಳೂರು: ಸಚಿವ ಬಿ.ನಾಗೇಂದ್ರ ಮತ್ತು ವಾಲ್ಮೀಕಿ ಹಗರಣ ಪ್ರಕರಣವು ಕರ್ನಾಟಕದ ಅಧಿವೇಶನ ನಡೆಯದಿರಲು ಕಾರಣವಾಗಿತ್ತು, ಜೊತೆಗೆ ರಾಜ್ಯ ರಾಜಕೀಯದಲ್ಲಿ ಹೆಚ್ಚು ಚರ್ಚೆ ಆಗುತ್ತಿತ್ತು. ಇದೀಗ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಅದಾದ ಬಳಿಕವೂ ಇದೇ ವಿಚಾರ ಮತ್ತೆ ಚರ್ಚೆ ಆಗುತ್ತಲೇ ಇದೆ. ಇದೀಗ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೋರ್ವ ಸಚಿವ ಶಿವರಾಜ ತಂಗಡಗಿ ಅವರು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ದಶಕಗಳ ಕಾಲ ದೇಶ ಆಳಿದ ಕಾಂಗ್ರೆಸ್ ಪಕ್ಷ ಬ್ರಿಟಿಷರಿಗೇ ಹೆದರಿಲ್ಲ. ಇನ್ನು ಬಿಜೆಪಿಯವರು ಯಾವ ಪುಟ್ಗೋಸಿ? ಎಂದು ಅವರು ಕಿಡಿ ಕಾರಿದ್ದಾರೆ. ಯಾರಿಗೂ ಹೆದರಿ ಬಿ.ನಾಗೇಂದ್ರ ಅವರು ಸಚಿವ‌ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಅವರು ತಮ್ಮ ನಡೆ ಸಮರ್ಥಿಸಿಕೊಂಡರು.

Shivraj Tangadagi Hits Back at BJP Over The B Nagendra Resignation Challenges Leaders on Elections

ತಾಕತ್ತಿದ್ದರೆ ಜನತಾ ನ್ಯಾಯಾಲಯದ ಮುಂದೆ ಬರಲಿ ಎಂದು ನಾಗೇಂದ್ರ‌ ಅವರು ಬಿಜೆಪಿ ಅವರಿಗೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ‌ಚುನಾವಣೆಗೆ ಹೆದರಲ್ಲ, ಚುನಾವಣೆಗೆ ಬರುವ ತಾಕತ್ತು ರಾಜ್ಯ ಬಿಜೆಪಿ‌ ನಾಯಕರಿಗೂ ಇದೆಯೇ? ಎಂದು ಪ್ರಶ್ನಿಸಿದರು. ಜೊತೆಗೆ ಜೆಡಿಎಸ್, ಬಿಜೆಪಿ ನಾಯಕರ ಮೇಲಿನ ಕೇಸ್‌ಗಳ ಕುರಿತು ಮಾತನಾಡಿದರು.

ಕುಮಾರಸ್ವಾಮಿ, ಜನಾರ್ಧನ್ ರೆಡ್ಡಿ ಮೇಲಿನ ಕೇಸ್‌ಗಳು ಗೊತ್ತಿವೆ!

ಕೇಂದ್ರ‌ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ‌ ಯಾವ ಯಾವ ಪ್ರಕರಣಗಳು ಇದೆ ಎಂಬುದು ಪ್ರಧಾನಿ ಅವರಿಗೆ ತಿಳಿದಿಲ್ಲವೇ? ಶಾಸಕ‌‌ ಜನಾರ್ಧನ್ ರೆಡ್ಡಿ ಅವರ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಯಾವ ತೀರ್ಪು ನೀಡಿತ್ತು ಎಂಬುದು ತಿಳಿದಿಲ್ಲವೇ? ಬಿಜೆಪಿಯವರು ಇವರಿಬ್ಬರ ರಾಜೀನಾಮೆಯನ್ನು ಪಡೆಯುತ್ತಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.‌ ಅಷ್ಟು ಮಾತ್ರವಲ್ಲ ದೇಶದಲ್ಲಿನ ಒಂದಿಬ್ಬರು ಬಿಜೆಪಿಗರ ಮೇಲೆ‌ ಅಚ್ಯಾಚಾರದ ಆರೋಪ‌‌ ಇದೆ ಎಂದು ಸಚಿವರು ದೂರಿದರು.

ಬಿಜೆಪಿ‌ ನಾಟಕ‌ ಕಂಪನಿ‌ ಇದ್ದಂತೆ

ನಾಗೇಂದ್ರ‌ ಅವರಿಗೆ ವಿಶೇಷ ತನಿಖಾ ತಂಡ ಕ್ಲೀನ್ ಚೀಟ್ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಪುನಃ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ ನೀಟ್‌ ವಿಚಾರದಲ್ಲಿ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟ ಕಾರಣಕ್ಕೆ ಜಿದ್ದಿನಿಂದ ರಾಜ್ಯದಲ್ಲಿ ಸದನ ನಡೆಯದಂತೆ ಬಿಜೆಪಿಯವರು ರಾಜಕೀಯ ನಾಟಕ ಮಾಡಿದರು ಎಂದು ಅವರು ವಿವರಿಸಿದರು.

ದಲಿತರ ಏಳಿಗೆ ಸಹಿಸಲ್ಲ

ಕೇಂದ್ರದಿಂದ ಹಿಡಿದು ರಾಜ್ಯದವರೆಗಿನ‌ ಎಲ್ಲಾ ಬಿಜೆಪಿಗರು ನಾಟಕ ಕಂಪನಿಯವರು. ನಾಯಕ ಸಮುದಾಯದವರು ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ‌ ನಡೆಸಿದರು.‌ ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಬಿಜೆಪಿಗರು. ಇವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ. ಬಿಜೆಪಿಯವರು ದಲಿತ ಸಮುದಾಯದ ಏಳ್ಗೆಯನ್ನು ಸಹಿಸಲ್ಲ. ನಾಗೇಂದ್ರ ವಿರುದ್ಧ ಅದೇ ನಡೆಯನ್ನು ಅನುಸರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದರು. ದಲಿತ ಸಮುದಾಯದವರ ಕಣ್ಣೊರೆಸುವ ಸಲುವಾಗಿ ಛಲವಾದಿ‌ ನಾರಾಯಣ ಸ್ವಾಮಿ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕನ್ನಾಗಿ ಮಾಡಿದ್ದಾರೆ‌. ಮುಂದೆ ನಾರಾಯಣ ಸ್ವಾಮಿ ಅವರ ಖುರ್ಚಿಯನ್ನು ಶುದ್ಧೀಕರಣ ಮಾಡುವುದರಲ್ಲಿ ಯಾವುದೇ ಆಶ್ಚರ್ಯ ನನಗಿಲ್ಲ ಎಂದು ಲೇವಡಿಮಾಡಿದರು.

ಬಿಜೆಪಿಯದ್ದು ಪಶ್ಚಾತಾಪದ ಯಾತ್ರೆ

ಮುಡಾ‌ ಪ್ರಕರಣದಲ್ಲಿ ಬಿಜೆಪಿಯವರು ಪಾದಯಾತ್ರೆ ಕೈಗೊಂಡು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‌ಅವರ ತೇಜೋವಧೆಗೆ ಯತ್ನಿಸಿದರು.‌ ಕೊನೆಗೆ ಪ್ರಕರಣ ಏನಾಯಿತು ಎಂಬುದು ರಾಜ್ಯದ ಜನತೆಗೆ ತಿಳಿದಿದೆ.‌ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರು ಗಣಿಲೂಟಿ ಮಾಡಿದವರು. ಇವರ ನೇತೃತ್ವದಲ್ಲಿ ಬಿಜೆಪಿ‌ ಪಾದಯಾತ್ರೆ ಕೈಗೊಂಡಿದ್ದು, ಇದು ನಿಜಕ್ಕೂ ಪಶ್ಚಾತ್ತಾಪದ‌‌ ಯಾತ್ರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+