ಬೆಂಗಳೂರು ಶೇಷಾದ್ರಿಪುರಂನ ಪ್ರಸಿದ್ಧ ಬೇಕರಿ ಮಾಲೀಕ ಕೊರೊನಾಗೆ ಬಲಿ
ಬೆಂಗಳೂರು, ಜುಲೈ 28: ಬೆಂಗಳೂರು ಶೇಷಾದ್ರಿಪುರಂನ ಪ್ರಸಿದ್ಧ ಬೇಕರಿಯೊಂದರ ಮಾಲೀಕ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಗ್ರಾಹಕರಲ್ಲಿ ಆತಂಕ ಹೆಚ್ಚಿದೆ.
ಯಾಕೆಂದರೆ ಅನಾರೋಗ್ಯ ಎಂದು ಅವರು ಆಸ್ಪತ್ರೆ ಸೇರುವವರೆಗೂ ಸಾಕಷ್ಟು ಮಂದಿ ಬೇಕರಿಗೆ ಭೇಟಿ ನೀಡಿದ್ದರು. ಶನಿವಾರ ಅವರು ಸಾವನ್ನಪ್ಪಿದ್ದಾರೆ.
50 ವರ್ಷದ ಬೇಕರಿ ಮಾಲೀಕ ಜುಲೈ 18 ರಂದು ಕೊನೆಯದಾಗಿ ಅವರು ಬೇಕರಿಗೆ ಬಂದಿದ್ದರು. ಅಂದೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪತ್ನಿಗೂ ಕೂಡ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊರೊನಾ ವೈರಸ್ ದೃಢಪಟ್ಟ ಬಳಿಕ ಅವರಿಗೆ ನ್ಯುಮೋನಿಯಾ ಇದೆ ಎಂದು ವೈದ್ಯರು ಹೇಳಿದ್ದರು. ಅವರ ಪರಿಸ್ಥಿತಿ ಗಂಭೀರವಾಗಿತ್ತು. ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕಾರ್ಪೊರೇಟರ್ ಸಂಪತ್ ಕುಮಾರ್ ತಿಳಿಸಿದ್ದಾರೆ.
ಮಹಿಳೆಯೊಬ್ಬರು ಬ್ರೆಡ್ ತರಲು ವಾರಕ್ಕೆ ಎರಡು ಬಾರಿ ಆ ಬೇಕರಿಗೆ ಹೋಗುತ್ತಿದ್ದರು. ಐದು ದಿನಗಳ ಹಿಂದೆ ಹೋಗಿದ್ದೆ ಆದರೆ ಬೇಕರಿ ತೆರೆದಿರಲಿಲ್ಲ. ಬಳಿಕ ಭಾನುವಾರ ಬೆಳಗ್ಗೆ ಅವರು ಮೃತಪಟ್ಟಿರುವುದಾಗಿ ಮಾಹಿತಿ ಬಂದಿತ್ತು.
ಅಲ್ಲಿ ಖರೀದಿಸಿದ್ದ ಬೇಕರಿ ಉತ್ಪನ್ನದಿಂದಲೂ ಸೋಂಕು ಬಂದಿರಬಹುದು ಎಂದು ಗ್ರಾಹಕರು ಆತಂಕಕ್ಕೊಳಗಾಗಿದ್ದಾರೆ.ಮತ್ತೋರ್ವ ಗ್ರಾಹಕ ಮಾತನಾಡಿ, ಬೇಕರಿ ಮಾಲೀಕರಿಗೆ ಕೊರೊನಾ ಸೋಂಕಿದೆ ಎಂದು ತಿಳಿದ ಬಳಿಕ ಬೇಕರಿಯನ್ನು ಸ್ಯಾನಿಟೈಸ್ ಮಾಡಿಲ್ಲ. ಮತ್ತೊಂದು ಬಾಗಿಲಿನಲ್ಲಿ ಬೇಕರಿ ಉತ್ಪನ್ನಗಳನ್ನು ನೀಡಲಾಗುತ್ತಿದೆ ಎಂದು ದೂರಿದರು.
ಬಿಬಿಎಂಪಿ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಇರಲಿಲ್ಲ. ಆ ಬೇಕರಿ ಸುತ್ತಮುತ್ತಲಿನ ಪ್ರದೇಶಗಳನ್ನು ಕೂಡಲೇ ಸ್ಯಾನಿಟೈಸ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಷ್ಟು ಬೇಗ ಬೇಕರಿ ಮಾಲಿಕನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಸೋಮವಾರ ಕನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ.
ಒಂದೇ ದಿನ 5324 ಪ್ರಕರಣಗಳು ಪ್ತತೆಯಾಗಿದ್ದವು. 75 ಮಂದಿ ಸಾವನ್ನಪ್ಪಿದ್ದರು. ಒಟ್ಟು 1953 ಮಂದಿ ಮೃತಪಟ್ಟಿದ್ದರು. 5324 ಮಂದಿ ಸೋಂಕಿತರಲ್ಲಿ 1470 ಮಂದಿ ಬೆಂಗಳೂರಿನವರಿದ್ದರು.












Click it and Unblock the Notifications