ಕನ್ನಡದಲ್ಲೇ ಸೇವೆ ನೀಡುವ 'ಶೆಲ್' ಉಳಿದವಕ್ಕೂ ಮಾದರಿಯಾಗಲಿ
ಬೆಂಗಳೂರು, ಜುಲೈ 6: ಜಗತ್ತಿನ ಅತ್ಯಂತ ಪ್ರಸಿದ್ಧ ಇಂಧನ ಕಂಪನಿಗಳಲ್ಲೊಂದಾದ ಶೆಲ್, ಕರ್ನಾಟಕದಲ್ಲಿ ಕನ್ನಡದಲ್ಲೇ ಸೇವೆ ನೀಡುತ್ತಿರುವುದು ಕನ್ನಡಿಗರ ಮನಸ್ಸನ್ನು ತಟ್ಟಿದೆ. ಬಹುಪಾಲು ಕನ್ನಡಿಗರು ಶೆಲ್ ಕಂಪನಿಯ ಕಾಯಂ ಗ್ರಾಹಕರಾಗುವುದಕ್ಕೂ ಇದೇ ಕಾರಣವಾಗಿದೆ.
ಶೆಲ್ ಕಂಪನಿ ಕರ್ನಾಟಕದಲ್ಲಿರುವ ತನ್ನ ಪೆಟ್ರೋಲ್ ಬಂಕ್ ಗಳಲ್ಲಿ ಇಂಗ್ಲಿಷ್ ಬದಲಾಗಿ ಕನ್ನಡದಲ್ಲೇ ಜಾಹಿರಾತು ನೀಡುತ್ತಿರುವುದು, ಮತ್ತು ತನ್ನ ಭಿತ್ತಿಪತ್ರದಲ್ಲಿಯೂ ಕನ್ನಡವನ್ನೇ ಉಪಯೋಗಿಸಿರುವುದು ಕನ್ನಡ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ಇದೀಗ ಶೆಲ್ ನಂತೆಯೇ ಬೇರೆ ಕಂಪನಿಗಳೂ ಕನ್ನಡದಲ್ಲೇ ಸೇವೆ ನೀಡಬೇಕೆಂಬ ಮನವಿಯೂ ಕೇಳಿಬರುತ್ತಿದೆ.

ಆರು ಕೋಟಿ ಕನ್ನಡ ಗ್ರಾಹಕರನ್ನು ತಲುಪಲು ತಮ್ಮ ಗ್ರಾಹಕ ಸೇವೆಗಳನ್ನು ಕನ್ನಡದಲ್ಲೇ ನೀಡುತ್ತಿರುವ ಶೆಲ್ ಪೆಟ್ರೊಲಿಯಂ ಸಂಸ್ಥೆಯ ಹೆಜ್ಜೆ ಶ್ಲಾಘನೀಯ ಎಂದು 'ಕನ್ನಡ ಗ್ರಾಹಕ' ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಈ ಟ್ವೀಟ್ ಗೆ ಹಲವರು ತಮ್ಮ ಬೆಂಬಲ ಸೂಚಿಸಿದ್ದಾರೆ.
6ಕೋಟಿ #ಕನ್ನಡ ಗ್ರಾಹಕರನ್ನ ತಲುಪಲು ತಮ್ಮ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ನೀಡುತ್ತಿರುವುದು ಶೆಲ್ ಪೆಟ್ರೋಲಿಯಂ ಸಂಸ್ಥೆಯಿಂದ ಸರಿಯಾದ ಹೆಜ್ಜೆ.#ServeInMyLanguage pic.twitter.com/7gARjNysYP
— KGK (@KannadaGrahaka) July 4, 2017
ಶೆಲ್ ಪೆಟ್ರೋಲ್ ಕಂಪನಿಯಂತೆ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಸಂಸ್ಥೆಗಳೂ ಕರ್ನಾಟಕದಲ್ಲಿ ಗ್ರಾಹಕರಿಗೆ ಕನ್ನಡದಲ್ಲೇ ಸೇವೆ ಒದಗಿಸಲಿ ಎಂದು ಮಂಜುನಾಥ್ ಬಿಲ್ಲವ ಎನ್ನುವವರೂ ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಶೆಲ್ ಪೆಟ್ರೋಲಿಯಂ ಸಂಸ್ಥೆಯಂತೆ ಕರ್ನಾಟಕದಲ್ಲಿ ಎಲ್ಲಾ ಪೆಟ್ರೋಲಿಯಂ ಸಂಸ್ಥೆಗಳು @karnataka_ioc @HPCL @BPCLimited ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿಒದಗಿಸಲಿ.
— Manjunath Billava (@Manju27486832) July 5, 2017
ಕರ್ನಾಟಕದ ಜನರಿಂದ ಆದಾಯ ಪಡೆಯುತ್ತಿರುವ ಕಂಪನಿಗಳು ಕನ್ನಡವನ್ನು ವ್ಯವಹಾರದ ಭಾಷೆಯನ್ನಾಗಿ ಮತ್ತು ಗ್ರಾಹಕ ಸೇವೆಗಾಗಿ ಬಳಸಬೇಕೆಂಬ ಕೂಗಿನ ಹಿಂದೆ, ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಉದ್ದೇಶವಿರುವುದು ಗಮನಾರ್ಹ.ಕರ್ನಾಟಕದಲ್ಲಿರುವ ಹ್ಯುಂಡೈ ಕಾರ್ ಸರ್ವಿಸ್ ಕೇಂದ್ರಗಳೂ ತಮ್ಮ ಅನಿಸಿಕೆ ಪತ್ರ (feedback form) ವನ್ನು ಕನ್ನಡದಲ್ಲೇ ಮುದ್ರಿಸಿ, ಕನ್ನಡ ಗ್ರಾಹಕರನ್ನು ಸೆಳೆದಿದೆ.
ಹಾಗೆಯೇ ಜರ್ಮನಿ ಮೂಲದ ಲುಫ್ತಾನ್ಸಾ ಏರ್ ಲೈನ್ಸ್ ಕಂಪನಿಯೂ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ, ಕನ್ನಡದಲ್ಲೇ ಸೇವೆ ಆರಂಭಿಸಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು.
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ!










Click it and Unblock the Notifications