ಬಯಲುಸೀಮೆ ನೀರಾವರಿ ಯೋಜನೆಗಳ ಸತ್ಯ ಶೋಧನೆಯ ಅನಾವರಣ
ಬೆಂಗಳೂರು, ಏಪ್ರಿಲ್ 06: ಶಾಶ್ವತ ನೀರಾವರಿ ಹೋರಾಟ ಸಮಿತಿ ಸತ್ಯ ಶೋಧನೆಯ ಅನಾವರಣ ಜನ ಜಾಗೃತಿ ಅಭಿಯಾನವನ್ನು ಏಪ್ರಿಲ್ 7ರಂದು ಬೆಳಗ್ಗೆ 10ಗಂಟೆಗೆ ಶಿವಾನಂದ ವೃತ್ತದಲ್ಲಿರುವ ಗಾಂಧೀ ಭವನದಲ್ಲಿ ಆಯೋಜಿಸಿದೆ.
ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಬರಡಾಗಿ ಅಪಾಯದಲ್ಲಿವೆ ಆದರೆ ಸರ್ಕಾರಗಳು ಯೋಜನೆಗಳ ಹೆಸರಲ್ಲಿ ಲೂಟಿ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿವೆ. ಸತ್ಯ ಶೋಧನೆಯ ಅನಾವರಣ ಜನ ಜಾಗೃತಿ ಅಭಿಯಾನ ಹಾಗೂ ಪವರ್ ಪಾಯಿಂಟ್ ಪ್ರೆಸೆಂಟೇಶನ್ ನಡೆಯಲಿದೆ.

ಈಗಾಗಲೇ ಕೋಲಾರದ ಪತ್ರಕರ್ತರ ಭವನದಲ್ಲಿ ಸಮಾವೇಶವನ್ನು ಮುಗಿಸಿದ್ದು, ಏಪ್ರಿಲ್ 9ರಂದು ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದೆ ಇನ್ನು ಏಪ್ರಿಲ್ 11ರಂದು ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಸಮಾವೇಶ ನಡೆಯಲಿದೆ.











Click it and Unblock the Notifications