ಬೆಂಗಳೂರು:ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ

ಬೆಂಗಳೂರು, ಆ.5:17 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಆಕೆಯ ಇಬ್ಬರು ಸಹೋದರ ಸಂಬಂಧಿಗಳೇ ಸತತ ಎರಡು ವರ್ಷಗಳಿಂದ ಅತ್ಯಾಚಾರ ನಡೆಸಿರುವ ಘಟನೆ ನಾಗವಾರದಲ್ಲಿ ಬೆಳಕಿಗೆ ಬಂದಿದೆ.

ಬಾಲಕಿಯ ಸಂಬಂಧಿಗಳಾದ ಮುದಾಸಿರ್ (20) ಹಾಗೂ ಮತ್ತೊಬ್ಬ ಬಾಲಾರೋಪಿ ವಿರುದ್ಧ ಬಾಲಕಿಯ ಅಜ್ಜ ಸೋಮವಾರ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಲಕಿ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದು, ಬಹಳ ದಿನಗಳಿಂದ ನಡೆಯುತ್ತ ಬಂದಿರುವ ಕೃತ್ಯ ಪೋಷಕರ ಗಮನಕ್ಕೆ ಬಂದಿರಲಿಲ್ಲ. ಕುಟುಂಬದ ಸದಸ್ಯರೊಬ್ಬರು ಇಬ್ಬರ ಕೃತ್ಯವನ್ನು ನೋಡಿ ಬಾಲಕಿಯ ಅಜ್ಜನಿಗೆ ತಿಳಿಸಿದ್ದರು. ಬಾಲಕಿಯ ಮೇಲೆ ಹುಡುಗರು ಅತ್ಯಾಚಾರ ನಡೆಸುತ್ತಿರುವುದನ್ನು ದೃಢಪಡಿಸಿಕೊಂಡ ಮೇಲೆ ಪೊಲೀಸರಿಗೆ ಅಜ್ಜ ದೂರು ನೀಡಿದ್ದಾರೆ.

rape

ಘಟನಾ ಸ್ಥಳವು ದೇವರ ಜೀವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುತ್ತದೆ. ನಾವು ದೂರು ದಾಖಲಿಸಿಕೊಂಡು ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಿದ್ದೇವೆ ಎಂದು ಕಾಡುಗೊಂಡನಹಳ್ಳಿ ಪೊಲೀಸರು ಹೇಳಿದ್ದಾರೆ.[ಲಿಫ್ಟ್‌ನಲ್ಲಿ ಉದ್ಯೋಗಿಗೆ ಮುತ್ತು ಕೊಟ್ಟ ಸಾಫ್ಟ್‌‌ವೇರ್‌ ಸಿಇಒ]

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಅತ್ಯಾಚಾರ ಆರೋಪ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ 376ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+