ಕಸ ನಿರ್ವಹಣೆ ಶುಲ್ಕ ನಿಯಮ ಜಾರಿ ಅನುಷ್ಠಾನ ಸದ್ಯಕ್ಕಿಲ್ಲ: ಬಿಬಿಎಂಪಿ ಆಯುಕ್ತ

ಬೆಂಗಳೂರು, ಡಿಸೆಂಬರ್ 18: ನಗರದಲ್ಲಿ ಕಸ ನಿರ್ವಹಣೆಗಾಗಿ ಜನರಿಂದ ಬಳಕೆದಾರರ ಸೇವಾ ಶುಲ್ಕವನ್ನು ವಿದ್ಯುತ್ ಬಿಲ್ ಜತೆಗೆ ಸಂಗ್ರಹಿಸುವ ವಿವಾದಾತ್ಮಕ ನಿರ್ಧಾರವನ್ನು ಸದ್ಯಕ್ಕೆ ಅನುಷ್ಠಾನಗೊಳಿಸುವುದಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಈಗಾಗಲೇ ಹಲವು ತೆರಿಗೆ, ಶುಲ್ಕಗಳಿಂದ ತತ್ತರಿಸಿರುವ ಜನತೆಗೆ ಕಸ ಬಳಕೆದಾರರ ಸೇವಾ ಶುಲ್ಕದ ಬರೆಯನ್ನು ಎಳೆಯಲು ಬಿಬಿಎಂಪಿ ಇತ್ತೀಚೆಗೆ ಪ್ರಸ್ತಾವನೆ ತಯಾರಿಸಿತ್ತು. ವಿದ್ಯುತ್ ಬಿಲ್ ಜತೆಗೆ ಕಸ ಬಳಕೆದಾರರ ಸೇವಾ ಶುಲ್ಕ ಸಂಗ್ರಹಕ್ಕೆ ಉದ್ದೇಶಿಸಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತು. ರಾಜಕೀಯ ಪಕ್ಷಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದವು.

ಕಟ್ಟಡಗಳ ಗಾತ್ರಕ್ಕೆ ಅನುಗುಣವಾಗಿ ಸಾರ್ವಜನಿಕರಿಂದಲೇ ಕಸ ನಿರ್ವಹಣೆ ಶುಲ್ಕ ಸಂಗ್ರಹಿಸುವ ಕುರಿತು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.

 Service Charge For Waste Collection Will Not Be Implemented Soon: BBMP

ಕಸ ಬಳಕೆದಾರರ ಸೇವಾ ಶುಲ್ಕ ಸಂಗ್ರಹ ಮಾಡುವುದು ಇನ್ನೂ ಪ್ರಸ್ತಾವದ ಹಂತದಲ್ಲಿತ್ತು. ಇದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಸದ್ಯಕ್ಕೆ ಇದು ಜಾರಿಯಾಗುವುದಿಲ್ಲ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.

2019ರ ಜುಲೈ 30ರಂದು ಪಾಲಿಕೆ ಸಭೆಯಲ್ಲಿ ಬಿಬಿಎಂಪಿ ಪೌರ ಕಸ ನಿರ್ವಹಣೆ ಉಪ ನಿಯಮಗಳನ್ನು ಅಂಗೀಕರಿಸಿದಾಗ ರಾಜ್ಯಪತ್ರದಲ್ಲಿ 2020ರ ಜೂನ್ 4ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಪ್ರತಿನಿತ್ಯ 100 ಕೆಜಿಗಿಂತ ಕಡಿಮೆ ಕಸ ಉತ್ಪಾದಿಸುವ ಮನೆಗಳು, ಕಟ್ಟಡ ಸಮುಚ್ಚಯಗಳು ಹಾಗೂ 5000 ಚದರ ಅಡಿಗಿಂತ ಕಡಿಮೆ ಇರುವ ವಾಣಿಜ್ಯ ಕಟ್ಟಡಗಳಿಗೆ ಶುಲ್ಕ ನಿಗದಿಮಾಡಲಾಗಿದೆ. ಮನೆಗಳಿಂದ 200 ರೂ ಮತ್ತು ವಾಣಿಜ್ಯ ಸಂಕೀರ್ಣಗಳಿಂದ 500 ರೂ. ಶುಲ್ಕ ಸಂಗ್ರಹಿಸಲು ತೀರ್ಮಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+