ಹೆಬ್ಬಾಳ ಫ್ಲೈಓವರ್‌ನಲ್ಲಿ ಸರಣಿ ಅಪಘಾತ: 10ಕ್ಕೂ ಹೆಚ್ಚು ಕಾರುಗಳು ಜಖಂ
ಬೆಂಗಳೂರು, ಫೆಬ್ರವರಿ 21: ಹೆಬ್ಬಾಳ ಮೇಲ್ಸೇತುವೆ ಮೇಲೆ ಸರಣಿ ಅಪಘಾತ ಸಂಭವಿಸಿದ್ದು, ವಾಹನಗಳನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಮಾರ್ಗದಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದೆ.
ಮಧ್ಯಾಹ್ನ 12 ಗಂಟೆಯ ಬಳಿಕ ಈ ಮಾರ್ಗದಲ್ಲಿ ವಾಹನಗಳು ಹೆಚ್ಚು ಸಂಚರಿಸಲು ಆರಮಭಿಸಿದ್ದವು ಆದರೆ ಸಂಜಯನಗರದಿಂದ ಬರುವ ಮಾರ್ಗದಿಂದ ಬಂದ ಕಾರು ಅಡ್ಡವಾಗಿ ಸಂಚರಿಸಿದ ಕಾರಣ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಕಾರುಗಳು ಜಖಂ ಆಗಿವೆ. ಬೆನ್ಝ್ ಇನ್ನಿತರೆ ದುಬಾರಿ ಕಾರುಗಳಿಗೆ ಹಿಂಭಾಗ ಹಾಗೂ ಮುಂಭಾಗ ತೀವ್ರ ಹಾನಿಯಾಗಿದೆ.
ಅದು ಮೊದಲೇ ಆಕ್ಸಿಡೆಂಟ್ ಝೋನ್ ಎಂದೇ ಗುರುತಿಸಲಾಗಿದ್ದ ಪ್ರದೇಶವಾಗಿದೆ. ಇದರ ಮಧ್ಯೆ 10ಕ್ಕೂ ಹೆಚ್ಚು ವಾಹನಗಳಿಗೆ ಅಪಘಾತವಾಗಿರುವ ಕಾರಣ ಟ್ರಾಫಿಕ್ ಜಾಂ ಉಂಟಾಗಿದೆ.