• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿರಿಯ ಕ್ರೀಡಾ ಪತ್ರಕರ್ತ ಡಿ. ಗರುಡ ನಿಧನ

|
Google Oneindia Kannada News

ಬೆಂಗಳೂರು, ನವೆಂಬರ್ 8: ಕನ್ನಡದ ಹಿರಿಯ ಕ್ರೀಡಾ ಪತ್ರಕರ್ತ ದಿಗಂಬರ ಯೋಗೇಶ ಗರುಡ (45) ಗುರುವಾರ ರಾತ್ರಿ 11.30ರ ಸುಮಾರಿಗೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸುಮಾರು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಗದುಗಿನ ಖ್ಯಾತ ನಾಟಕಕಾರ ಗರುಡ ಸದಾಶಿವರಾಯರ ಮೊಮ್ಮಗನಾಗಿದ್ದ ಡಿ. ಗರುಡ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರದಲ್ಲಿ ಪದವಿ ಪಡೆದಿದ್ದರು.

ಲಿಂಗೈಕ್ಯರಾದ ಕರಡಿ ಮಠದ ಶಂಕರಾನಂದ ಸ್ವಾಮೀಜಿಲಿಂಗೈಕ್ಯರಾದ ಕರಡಿ ಮಠದ ಶಂಕರಾನಂದ ಸ್ವಾಮೀಜಿ

ಸುಪ್ರಭಾತ ವಾಹಿನಿಯಲ್ಲಿ ಪತ್ರಿಕೋದ್ಯಮ ವೃತ್ತಿಗೆ ಕಾಲಿಟ್ಟಿದ್ದ ಅವರು ಬಳಿಕ ಪ್ರಜಾವಾಣಿ ಪತ್ರಿಕೆಯಲ್ಲಿ 12 ವರ್ಷ ಕ್ರೀಡಾ ವರದಿಗಾರರಾಗಿ, ವಿಜಯ ಕರ್ನಾಟಕದಲ್ಲಿ ಕ್ರೀಡಾ ಸಂಪಾದಕರಾಗಿ ಎರಡು ವರ್ಷ ಕೆಲಸ ಮಾಡಿದ್ದರು. ಬಳಿಕ ಸಿಡ್ನಿ ರೇಡಿಯೋಗೆ ಅರೆಕಾಲಿಕ ವರದಿಗಾರರಾಗಿದ್ದರು.

ಸುದ್ದಿವಾಹಿನಿಗಳು ಮತ್ತು ಆಕಾಶವಾಣಿಯ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು, ಭರತನಾಟ್ಯ ನೃತ್ಯಪಟು ಹಾಗೂ ರಂಗಕಲಾವಿದರು ಆಗಿದ್ದರು.

ಮಾಜಿ ಸಚಿವ ವೈಜನಾಥ್ ಪಾಟೀಲ್ ನಿಧನಮಾಜಿ ಸಚಿವ ವೈಜನಾಥ್ ಪಾಟೀಲ್ ನಿಧನ

ಯೋಗೇಶ ಗರುಡ ಅವರು ಪತ್ನಿ ಶೋಭಾ ಲೋಕನಾಥ್ ಮತ್ತು ಮಗಳು ತಪಸ್ಯಾ (5) ಅವರನ್ನು ಅಗಲಿದ್ದಾರೆ.

English summary
Senior sports journalist Digambar Yogesh Garuda passed away on Thursday night after illness. He was 45.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X