ರಾಜಾಜಿನಗರದಲ್ಲಿ ಜ್ಯುವೆಲ್ಲರಿ ದರೋಡೆಗೆ ಯತ್ನ, ಗಾಳಿಯಲ್ಲಿ ಗುಂಡು

ಬೆಂಗಳೂರು, ಫೆಬ್ರವರಿ 19: ನಗರದ ರಾಜಾಜಿನಗರದ ಚೆಮ್ಮನೂರು ಜ್ಯುವೆಲ್ಸ್ ಅನ್ನು ದರೋಡೆ ಮಾಡಲು ಕಳ್ಳರು ಯತ್ನ ನಡೆಸಿದ್ದು ಈ ಸಂದರ್ಭ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಬಂದಿದ್ದ ದರೋಡೆಕೋರರನ್ನು ತಡೆಯಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ, ಇದನ್ನು ನೋಡಿದ ದರೋಡೆಕೋರರು ಭಯಗೊಂಡು ಸ್ಥಳದಿಂದ ಪೇರಿ ಕಿತ್ತಿದ್ದಾರೆ.

ಮೊದಲು ಒಬ್ಬ ಭದ್ರತಾ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ, ಇದನ್ನು ಕಂಡ ಮತ್ತೊಬ್ಬ ಸೆಕ್ಯುರಿಟಿ ಕೂಡಲೇ ಬಂದೂಕು ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಕಳ್ಳರತ್ತ ಗುರಿ ಹಿಡಿದಿದ್ದಾನೆ ಇದನ್ನು ಕಂಡು ಕಳ್ಳರು ಪರಾರಿ ಆಗಿದ್ದಾರೆ.

Security guard air fire to prevent robbery

ದರೋಡೆಕೊರರ ಹಲ್ಲೆಯಿಂದ ಒಬ್ಬ ಸೆಕ್ಯುರಿಟಿ ತೀವ್ರ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಠೋರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+