Bengaluru: ವಿಧಾನಸೌಧಕ್ಕೆ ಬಂದಿದ್ದ ಮಹಿಳೆ ಬ್ಯಾಗ್‌ನಲ್ಲಿ ಚಾಕು ಪತ್ತೆ

ಬೆಂಗಳೂರು, ಜುಲೈ 10: ವಿಧಾನಮಂಡಲ ಜಂಟಿ ಅಧಿವೇಶನದೊಳಕ್ಕೆ ಬಜೆಟ್ ಮಂಡನೆ ದಿನವೇ (ಜುಲೈ 07) ಅನುಮಾನಾಸ್ಪದ ವ್ಯಕ್ತಿ ಆಗಮಿಸಿದ್ದ ಬೆನ್ನಲ್ಲೆ ಇಂದು ಮಹಿಳೆಯೊಬ್ಬಳು ವಿಧಾನಸೌಧಕ್ಕೆ ಚಾಕು ಇಟ್ಟುಕೊಂಡು ಬಂದಿದ್ದ ಘಟನೆ ನಡೆದಿದೆ. ಈ ಮೂಲಕ ಒಂದೇ ವಾರದಲ್ಲಿ ಎರಡು ಭಾರಿ ಭದ್ರತಾ ಲೋಪ ಉಂಟಾಗಿರುವುದು ಬೆಳಕಿಗೆ ಬಂದಿದೆ.

ಸೋಮವಾರ ಎಂದಿನಂತೆ ವಿಧಾನಸೌಧ ಕಾರ್ಯಕಲಾಪಗಳು ಆರಂಭವಾಗಿವೆ. ಈ ವೇಳೆ ವಿಧಾನನೌಧ ಪ್ರವೇಶಿಸಲು ಆಗಮಿಸಿದ ಮಹಿಳೆಯ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದ್ದು, ಆಕೆಯನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು ವಾಪಸ್ ಕಳುಹಿಸಿದ್ದಾರೆ.

Security Breach In Vidhana Soudha

ಮಹಿಳೆ ವಿಧಾನಸೌಧ ಆಗಮಿಸುತ್ತಿದ್ದ ಬ್ಯಾಗ್ ಸ್ಕಾನ್‌ಗೆ ಸಿಬ್ಬಂದಿ ಸೂಚಿಸಿದ್ದಾರೆ. ಅವರು ಸ್ಕಾನಿಂಗ್ ಮಷಿನ್‌ನಲ್ಲಿ ಬ್ಯಾಗ್ ಇಡುತ್ತಿದ್ದಂತೆ ಚಾಕು ಇರುವುದು ಗೊತ್ತಾಗಿದೆ. ಕೆಲ ಕಾಲ ಸಿಬ್ಬಂದಿಯಲ್ಲಿ ಆತಂಕ ಉಂಟಾಗಿತ್ತು ಎನ್ನಲಾಗಿದೆ. ಚಾಕು ತಂದಿದ್ದ ಮಹಿಳೆ ಯಾರು?, ಯಾವ ಉದ್ದೇಶದಿಂದ ಹೀಗೆ ನಿಯಮ ಮೀರಿ ವಿಧಾನಸೌಧಕ್ಕೆ ಪ್ರವೇಶ ಬಯಸಿದ್ದಳು ಎಂಬ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚೆಗಷ್ಟೇ ಅಧಿವೇಶನದಲ್ಲಿ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆ ದಿನವೇ ಅನಾಮಿಕ ವ್ಯಕ್ತಿಯೊಬ್ಬರು ಶಾಸಕರ ಆಸನದಲ್ಲಿ ಕುಳಿತು ಎದ್ದು ಹೋಗಿದ್ದರು. ಅವರು 15 ನಿಮಿಷ ಸದನ ಒಳಗಿದ್ದರು. ಅ ಪರಿಚಿತ ವ್ಯಕ್ತಿ ಡಿಕೆ ಶಿವಕುಮಾರ್ ಅವರಿಗೆ ಬಜೆಟ್ ಬಗ್ಗೆ ಶುಭ ಕೋರಿದ್ದರು ಎನ್ನಲಾಗಿದೆ. ಅಂದು ಸಹ ಉಂಟಾಗಿದ್ದ ಭದ್ರತಾ ಲೋಪವಾಗಿದ ಸೋಮವಾರ ಮತ್ತೆ ಮರುಕಳಿಸಿದೆ.

ವಿಧಾನಸೌಧದೊಳಕ್ಕೆ ರಾಜಕಾರಣಿಗಳು, ಪೊಲೀಸರ ಓಡಾಟ ಸಾಮಾನ್ಯವಾಗಿರುತ್ತದೆ. ಸಾರ್ವಜನಿಕರಿಗೆ ಐಡಿ ಕಾರ್ಡ್, ಸಂಘ ಸಂಸ್ಥೆಗಳ ನಿಯೋಗಕ್ಕೆ ಮೊದಲೇ ನೀಡಿದ್ದ ಅನುಮತಿ, ಅಗತ್ಯ ದಾಖಲೆ ಆಧಾರದಲ್ಲಿ ಒಳಬಿಡಲಾಗುತ್ತದೆ. ಪತ್ರರ್ಕತರಿಗೆ ವಿಧಾನಸೌಧ ಪ್ರವೇಶಕ್ಕೆ ವಿಶೇಷ ಪ್ರವೇಶ ಕಾರ್ಡ್ ನೀಡಲಾಗುತ್ತದೆ. ಇಷ್ಟೆಲ್ಲ ಭದ್ರತೆ ಇದ್ದರೂ ಅನಾಮಧೇಯ ವ್ಯಕ್ತಿ ಒಳಬಂದು ಹೋಗಿದ್ದ. ಈ ಘಟನೆ ಸಾಕಷ್ಟು ಚರ್ಚೆ ಆಯಿತು.

ಈ ಘಟನೆ ಬೆನ್ನಲ್ಲೆ ವಿಧಾನಸೌಧದ ಬಿಗಿ ಭದ್ರತೆ ಒದಗಿಸಲಾಯಿತು. ಅದರ ಬೆನ್ನಲ್ಲೆ ಮಹಿಳೆಯ ಚಾಕು ಹಿಡಿದು ಒಳಬರಲು ಯತ್ನಿಸಿದ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+