ಪಿಯು ಪರೀಕ್ಷೆ: ಅರ್ಥಶಾಸ್ತ್ರ-ಭೌತಶಾಸ್ತ್ರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದೇನು?
ಬೆಂಗಳೂರು, ಮಾರ್ಚ್ 1 : ಒಂದೆಡೆ ತುಂಬಿದ ಆತ್ಮವಿಶ್ವಾಸ, ಆದರೂ ಸಮಯ ಸಾಕಾಗುತ್ತಿಲ್ಲ ಎಂಬ ದುಗುಡ, ಇನ್ನೊಂದೆಡೆ ಈಗಾಗಲೇ ಬರೆದ ಉತ್ತರ ಸರಿ ಇದೆಯಾ ಎಂಬ ಅನುಮಾನ. ಇನ್ನೂ ಸ್ವಲ್ಪ ಬರೆಯಬಹುದಿತ್ತು ಎಂಬ ಸ್ವಗತದ ಸಮಜಾಯಿಷಿ. ಹೊರಗೆ ಮಗಳನ್ನೇ ಎದುರು ನೋಡುತ್ತಾ ಕಾತುರದಿಂದ ಕಾಯುತ್ತಿರುವ ಪಾಲಕರ ಕಣ್ಗಳು....
ರಾಜ್ಯಾದ್ಯಂತ ಗುರುವಾರ ಆರಂಭಗೊಂಡಿದ್ದ ದ್ವಿತೀಯ ವರ್ಷದ ಪದವಿಪೂರ್ವ ಪರೀಕ್ಷೆಗಳ ಮೊದಲ ದಿನದ ಸಂದರ್ಭದಲ್ಲಿ ಕಂಡುಬಂದ ಕ್ಷಣಗಳಿವು. ಇಂದು ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಿಂದ ದುಗುಡ ಮಿಶ್ರಿತ ಸಂತಸ ಕಂಡುಬಂತು. ಕೆಲ ವಿದ್ಯಾರ್ಥಿಗಳು ತುಂಬಾ ಸಲೀಸಾಗಿತ್ತು ಎನ್ನುವಂತೆ ತಲೆ ಅಲ್ಲಾಡಿಸಿದರೆ ಇನ್ನೂ ಕೆಲವರು ಟೈಮೇ ಸಾಕಾಗಿಲ್ಲ ಮೇಡಂ ಎಂದು ಹೂಂಗುಟ್ಟಿದರು. ಇದೇ ಮೊದಲ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಂಡು ಬರಲಿಲ್ಲ.
ಮಾರ್ಚ್ 2 ರಂದು ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್ ಪರೀಕ್ಷೆಗಳು ನಡೆಯಲಿವೆ.

ವಿದ್ಯಾರ್ಥಿಗಳಿಗೆ ಒಂದೆಡೆ ಖುಷಿ, ಒಂದೆಡೆ ಆತಂಕ
ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಎನ್ನುವುದಕ್ಕಿಂತ ಪರೀಕ್ಷೆ ಮುಗಿದ ಮೇಲೆ ಪೋಷಕರ ಮಾತುಗಳನ್ನು ಹೇಗೆ ಎದುರಿಸಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿರುತ್ತದೆ. ಮಕ್ಕಳು ಬಂದ ಮೇಲೆ ಪ್ರಶ್ನೆಪತ್ರಿಕೆ ತೆಗೆದುಕೊಂಡು ದಾರಿ ಮಧ್ಯದಲ್ಲೇ ನಿಂತು ಪಶ್ನೆ ಕೇಳುವ ತಾಯಂದಿರು ಒಂದು ಕಡೆಯಾದರೆ, ಅಷ್ಟು ಓದಿದ್ದೆ ಆದರೂ ಯಾಕೆ ಬರೆಯಲು ಸಾಧ್ಯವಾಗಿಲ್ಲ ಎನ್ನುವ ಪೋಷಕರು ಇನ್ನೊಂದು ಕಡೆ ಇದೆಲ್ಲದರ ಮಧ್ಯೆ ನೀನು ಪಾಸ್ ಆದರೆ ಸಾಕು ಅದೇ ಸಂತೋಷ ಎನ್ನುವ ಪೋಷಕರೂ ಕೂಡ ಇದ್ದಾರೆ.

ಪರೀಕ್ಷೆ ವಿಷಯಬಿಟ್ಟು ಪೋಷಕರ ಬಳಿ ಬೇರೆ ಮಾತುಗಳೇ ಇಲ್ಲ
ಇನ್ನು ಪರೀಕ್ಷೆಗಳು ಮುಗಿಯುವವರೆಗೂ ವಿದ್ಯಾರ್ಥಿಗಳಿಗೆ ಪುಸ್ತಕ, ಅದರಲ್ಲಿರುವ ವಿಷಯ ಬಿಟ್ಟರೆ ಪೋಷಕರ ಬಳಿ ಮಾತನಾಡಲು ಏನೂ ವಿಷಯಗಳೇ ಇರುವುದಿಲ್ಲ, ಒಂದೊಂದು ಪರೀಕ್ಷೆಯು ಮುಗಿದಂತೆ ಮತ್ತೊಂದು ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ಗೊಂದಲದಲ್ಲೇ ಪರೀಕ್ಷೆಯನ್ನು ಬರೆಯುತ್ತಾರೆ.

ಎಷ್ಟೇನು ಕಷ್ಟವಿರಲಿಲ್ಲ ಅರ್ಥಶಾಸ್ತ್ರ ಸುಲಭ ಇತ್ತು
ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಮೊದಲ ದಿನದ ಪರೀಕ್ಷೆ ಮುಗಿಸಿ ಹೊರ ಬಂದ ಕಲಾ ವಿಭಾಗದ ವಿದ್ಯಾರ್ಥಿನಿ ತುಳಸಿ ತನ್ನ ಅನುಭವ ಹೇಳಿದ್ದು ಹೀಗೆ... ವಿಷಯ ಅಷ್ಟೇನೂ ಟಫ್ ಇರಲಿಲ್ಲ. ಆದರೆ ಸಮಯ ಸಾಕಾಗಲಿಲ್ಲ ಅನಿಸಿತು. ಆದರೂ ಎಲ್ಲಾ ಪ್ರಶ್ನೆಗಳಿಗೆತೃಪ್ತಿಕರವಾಗಿ ಬರೆದಿದ್ದೇನೆ. ಕೊನೆಯ ಉತ್ತರಕ್ಕೆ ಇನ್ನಷ್ಟು ಸಮಯ ಸಿಕ್ಕಿದ್ದರೆ ಮತ್ತಷ್ಟು ವಿವರವಾಗಿ ಬರೆಯ ಬಹುದಿತ್ತು ಎಂದಳು.

ಮುಂದಿನ ವಿಯಗಳೂ ಹೀಗೆ ಇದ್ದರೆ ಸಾಕಪ್ಪ
ಇನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರೇಚಲ್ ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡುತ್ತ, ನಾನು ಹೇಗೆ ಪ್ರಿಪೇರ್ ಆಗಿದ್ದೇನೋ ಅದೇ ರೀತಿಯ ಪ್ರಶ್ನೆಗಳಿದ್ದವು. ಟೈಮ್ ಮ್ಯಾನೇಜ್‌ಮೆಂಟ್ ಕೂಡ ಚೆನ್ನಾಗಿಯೇ ಮಾಡಿದ್ದೀನಿ. ಮೂರು ಪ್ರಶ್ನೆಗಳಿಗೆ ಬರೆಯುವಾಗ ಸ್ವಲ್ಪ ಟ್ ಇದೆ ಎನಿಸಿತು. ಅದನ್ನು ಬಿಟ್ಟರೆ ಉಳಿದೆಲ್ಲ 85 ಅಂಕಗಳಿಗೆ ಅತ್ಯಂತ ನಿಖರ ಉತ್ತರ ಬರೆದಿದ್ದೇನೆ. ಮುಂದಿನ ನಾಲ್ಕೂ ವಿಷಯಗಳೂ ಹೀಗೆ ಆಗಬೇಕು ಎಂದು ಪ್ರಾರ್ಥಿಸಿಕೊಳ್ಳುವೆ ಎಂದಳು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications