ಸಂಚಾರ ಮುಕ್ತಗೊಳಿಸುವ ಸಾಧ್ಯತೆ: ಬಿಎಂಆರ್ಸಿಎಲ್ ಗೆ ಇಲ್ಲ ಸ್ಪಷ್ಟತೆ
ಬೆಂಗಳೂರು, ಫೆಬ್ರವರಿ 3 : 2018-19 ನೇ ಸಾಲಿನಲ್ಲಿ ನಮ್ಮ ಮೆಟ್ರೋದ 12.80 ಕಿ,ಮೀ ಉದ್ದದ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಕೇಂದ್ರ ಬಜೆಟ್ ನಲ್ಲಿ ಉಲ್ಲೇಖಿಸಲಾಗಿದ್ದರೂ ಅದು ಈ ವರ್ಷ ಪೂರ್ಣಗೊಳ್ಳುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಕೇಂದ್ರ ಬಜೆಟ್ ನಲ್ಲಿ ದೇಶದಲ್ಲಿ ಒಟ್ಟು 190 ಕಿ.ಮೀ ಉದ್ದದ ನಮ್ಮ ಮೆಟ್ರೋ ಮಾರ್ಗಗಳು ರೈಲು ಸೇವೆಗೆ ಸಿಗಲಿದೆಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಬೆಂಗಳೂರು ಮೆಟ್ರೋ ಎರಡನೇ ಹಂತದ ಯೋಜನೆಯ ೧೨.೮೦ ಕಿ.ಮೀ ಉದ್ದದ ಮಾರ್ಗವೂ ಸೇರಿದೆ. ಆದರೆ, ಈ ಅವಧಿಯಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳಲಿವೆಯೇ ಹೊರತು ವಾಣಿಜ್ಯ ಸಂಚಾರಕ್ಕೆ ದೊರೆಯುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ ಶಿಪ್ ವರೆಗಿನ 6.5 ಕಿ.ಮೀಮಾರ್ಗ, ಹಾಗೂ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ 6.45 ಕಿ.ಮೀ ಮಾರ್ಗವನ್ನು 2018ರ ಅಂತ್ಯ ಅಥವಾ ಆರ್ಥಿಕ ವರ್ಷವಾದ ೨೦೧೯ರ ಮಾರ್ಚ್ ಅಂತ್ಯಕ್ಕೆ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಅಂದಾಜಿಸಲಾಗಿದೆ.

ಈ ಅಂದಾಜಿನ ಮೇಲೆ ಬಜೆಟ್ ನಲ್ಲಿ12 ಕಿ.ಮೀ ಮಾರ್ಗವನ್ನು ಸಂಚಾರ ಮುಕ್ತ ಗೊಳಿಸುವ ಕುರಿತು ಉಲ್ಲೇಖಿಸಲಾಗಿದೆ. ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಯಲಚೇನಹಳ್ಳಿ-ಅಂಜನಾಪುರ ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಿದ್ದಾಗ 2018ರ ಅಂತ್ಯಕ್ಕೆ ಈ ಮಾರ್ಗದಲ್ಲಿ ಸೇವೆ ಆರಂಭಿಸಲಾಗುವುದು ಎಂದು ಹೇಳಿದ್ದರು.












Click it and Unblock the Notifications