ಅಡುಗೆ ಚೆನ್ನಾಗಿಲ್ಲವೆಂಬ ಅವಹೇಳನಕ್ಕೆ ನೊಂದು ಬೆಂದುಹೋದ ಗೃಹಿಣಿ
ಬೆಂಗಳೂರು, ಸೆಪ್ಟೆಂಬರ್ 22: ಅಡುಗೆ ಚೆನ್ನಾಗಿಲ್ಲವೆಂದು ಪತಿ ಬೈದಿದ್ದಕ್ಕೆ ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ಗುರುವಾರ ನಡೆದಿದೆ.
ಜಯಲಕ್ಷ್ಮೀ(41) ಮೃತರು, ಅಡುಗೆ ಚೆನ್ನಾಗಿಲ್ಲ ಎಂದು ಪತಿ ನಾಗರಾಜ್ ಹೇಳಿದ್ದಕ್ಕೆ ಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇರೆಗೆ ನಾಗರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಜಯಲಕ್ಷ್ಮೀ ಹಾಗೂ ನಾಗರಾಜ್ ಮೂಲತಃ ಉತ್ತರ ಕರ್ನಾಟಕದ ರಾಯಚೂರಿನವರು, 2008ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ನಾಗರಾಜ್ ಡಿಜೆ ಹಳ್ಳಿಯಲ್ಲಿ ಹೇರ್ ಸಲೂನ್ ನಡೆಸುತ್ತಿದ್ದಾರೆ.

ನಾಗರಾಜ್ ನಿತ್ಯ ಸಣ್ಣಪುಟ್ಟ ವಿಚಾರಳನ್ನು ಇಟ್ಟುಕೊಂಡು ಜಯಲಕ್ಷ್ಮಿಗೆ ತೊಂದರೆ ಕೊಡುತ್ತಿದ್ದ, ಊಟದ ಸಂದರ್ಭದಲ್ಲಿ ಪಾತ್ರೆಗಳನ್ನು ಬಿಸಾಡಿ ನಿನಗೆ ಅಡುಗೆ ಮಾಡುವುದಾಗಲಿ ಅಥವಾ ಮಕ್ಕಳನ್ನು ನೋಡಿಕೊಳ್ಳೋಕು ಬರೋದಿಲ್ಲ ಎಂದು ನಿಂದಿಸುತ್ತಿದ್ದ ಎಂದು ಜಯಲಕ್ಷ್ಮೀ ಪೋಷಕರು ದೂರಿದ್ದಾರೆ.
ಹಾಗೆಯೇ ಗುರುವಾರ ಅಡುಗೆ ವಿಚಾರವಾಗಿ ಜಗಳ ನಡೆದಿತ್ತು ಆಕೆ ತೀವ್ರವಾಗಿ ನೊಂದಿದ್ದಳು. ಬಳಿಕ ನಾಗರಾಜ್ ಸಲೂನ್ ಗೆ ಹೋಗಿದ್ದ, ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿರುವ ಸಂದರ್ಭ ನೋಡಿ ಜಯಲಕ್ಷ್ಮೀ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications