ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ವಾಹನಗಳಲ್ಲಿ ಮನಸೋ ಇಚ್ಛೆ ಮಕ್ಕಳನ್ನು ತುಂಬಿದ್ರೆ ಏನಾಗುತ್ತೆ ಗೊತ್ತಾ?

|
Google Oneindia Kannada News

ಬೆಂಗಳೂರು, ಜೂನ್ 21: ಶಾಲಾ ಬಸ್‌ಗಳಲ್ಲಿ ಬೇಕಾಬಿಟ್ಟಿ ಮಕ್ಕಳನ್ನು ತುಂಬಿಸಿಕೊಳ್ಳುತ್ತಿದ್ದಾರೆ, ಅದು ಅಪಘಾತಕ್ಕೂ ಎಡೆಮಾಡಿಕೊಡುತ್ತದೆ ಎನ್ನುವ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಂತಹ ವಾಹನಗಳ ಪರ್ಮಿಟ್ ರದ್ದುಗೊಳಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಶಾಲೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು ಒದಗಿಸುವ ಖಾಸಗಿ ವಾಹನಗಳ ಮಾಲೀಕರ ಜೊತೆ ಸಂಬಂಧಪಟ್ಟ ಎಲ್ಲಾ ಸಂಚಾರ ಠಾಣೆಗಳ ಅಧಿಕಾರಿಗಳು ಸಭೆ ನಡೆಸಿದ್ದಾರೆ.ಮಕ್ಕಳ ಸುರಕ್ಷತೆ ಕುರಿತಾಗಿ ಪಾಲಿಸಬೇಕಾದ ಕ್ರಮಗಳು ಕುರಿತು ತಿಳಿಸಲಾಗಿದೆ.

ಬಾಲಕನ ಮೇಲೆ ಸ್ಕೂಲ್ ಬಸ್ ಹತ್ತಿಸಿದ್ದ ಚಾಲಕನ ಬಂಧನ ಬಾಲಕನ ಮೇಲೆ ಸ್ಕೂಲ್ ಬಸ್ ಹತ್ತಿಸಿದ್ದ ಚಾಲಕನ ಬಂಧನ

ನಿಗದಿತ ವೇಗದಲ್ಲಿ ವಾಹನಗಳನ್ನು ಚಲಾಯಿಸಬೇಕು, ವಾಹನ ಸೀಟ್ ಸಾಮರ್ಥ್ಯ ಮೀರಿ ಮಕ್ಕಳನ್ನು ಕರೆದೊಯ್ಯಬಾರದು, ವಾಹನಗಳಲ್ಲಿ ಮಕ್ಕಳ ಪಿಕಪ್, ಡ್ರಾಪ್ ವೇಳೆ ಅವರನ್ನು ಇಳಿಸುವ ಅಟೆಂಡರ್ ಅನ್ನು ನಿಯೋಜಿಸಿಕೊಳ್ಳಬೇಕು. ವಾಹನಕ್ಕೆ ಶಾಲಾ ಮಕ್ಕಳ ವಾಹನ ಫಲಕ ಅಳವಡಿಸಿಕೊಂಡಿರಬೇಕು ಈ ನಿಯಮಗಳನ್ನು ಚಾಲಕರು ಪಾಲಿಸಲೇಬೇಕು.

School vehicle permit will be cancelled if they have more children

ಸಾಮರ್ಥ್ಯ ಮೀರಿ ಮಕ್ಕಳನ್ನು ಸಾಗಿಸುವ ಶಾಲಾ ವಾಹನಗಳಿಗೆ 500 ರೂ ದಂಡ ವಿಧಿಸಲಾಗುತ್ತದೆ. ಪುನರಾವರ್ತನೆ ಮಾಡಿದರೆ ವಾಹನ ಪರ್ಮಿಟ್ ರದ್ದುಗೊಳಿಸಲಾಗುತ್ತದೆ.
ಕಳೆದ ಒಂದು ವಾರದಿಂದ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿ ನೂರಾರು ಕೇಸುಗಳನ್ನು ದಾಖಲಿಸಲಾಗಿದೆ.

ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೇಸುಗಳನ್ನು ದಾಖಲಿಸುವುದು ಮುಂದುವರೆದಿದೆ. ಸಾಮರ್ಥ್ಯಕ್ಕೂ ಮೀರಿ ಮಕ್ಕಳನ್ನು ಸಾಗಿಸುವ ವಾಹನಗಳ ಮೇಲೆ ದಂಡ ವಿಧಿಸಲಾಗುತ್ತದೆ.

English summary
Traffic police issued a warning that if the school vehicle carrying more students then permit will be canceled immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X