ಭಾರತೀಯ ಅಂಚೆ ಚೀಟಿಗಳ ಮೇಲೆ ಕಾಫಿಯ ಘಮ
ಕಾಫಿಯ ಸ್ಟ್ಯಾಂಪ್ ಗಳು 100 ರೂಪಾಯಿ ಮುಖಬೆಲೆಯ ಸ್ಟ್ಯಾಂಪ್ ಗಳಾಗಿವೆ. ಅಂಚೆ ಚೀಟಿಯ ಮೇಲೆ ಕಾಫಿಯ ಬೀಜಗಳು ಹಾಗೂ ಕಾಫಿ ಗ್ಲಾಸಿನಿಂದ ಹಬೆ ಮೇಲೇರುತ್ತಿರುವ ಚಿತ್ರವನ್ನು ಮುದ್ರಿಸಲಾಗಿದೆ.
ಬೆಂಗಳೂರು, ಏಪ್ರಿಲ್ 23: ಇನ್ನು ಮುಂದೆ ನಿಮ್ಮ ಪ್ರೀತಿ ಪಾತ್ರರಿಗೆ ಕಾಫಿಯ ಘಮವನ್ನೂ ಕಳುಹಿಸಬಹುದು. ಹೇಗೆ ಅಂತೀರಾ? ಅದಕ್ಕಾಗಿ ಅಂಚೆ ಇಲಾಖೆ ಕಾಫಿ ಸುವಾಸನೆ ಭರಿತ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮನ್ ಹಾಗೂ ಮನೋಜ್ ಸಿನ್ಹಾ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿಯ ಚಿತ್ರವಿರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು. [ಕರ್ನಾಟಕದಾದ್ಯಂತ ಅಂಚೆ ಕಚೇರಿಯಲ್ಲಿ 1048 ಹುದ್ದೆಗಳಿವೆ, ಅರ್ಜಿ ಹಾಕಿ]

ಈ ಸ್ಟ್ಯಾಂಪ್ ಗಳು 100 ರೂಪಾಯಿ ಮುಖಬೆಲೆಯ ಸ್ಟ್ಯಾಂಪ್ ಗಳಾಗಿವೆ. ಸ್ಟ್ಯಾಂಪಿನ ಮೇಲೆ ಕಾಫಿಯ ಬೀಜಗಳು ಹಾಗೂ ಕಾಫಿ ಗ್ಲಾಸಿನಿಂದ ಹಬೆ ಮೇಲೇರುತ್ತಿರುವ ಚಿತ್ರವನ್ನು ಮುದ್ರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತರುವ ಮೊದಲ ಕಾಫಿ ಚಿತ್ರವಿರುವ ಸ್ಟ್ಯಾಂಪ್ ಇದಾಗಿದೆ. ಕಾಫಿ ಬೋರ್ಡ್ ಸಹಯೋಗದಲ್ಲಿ ಈ ಅಂಚೆ ಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿದೆ.

ಈ ವಿಶಿಷ್ಟ ಅಂಚೆ ಚೀಟಿಗಳನ್ನು ಆನ್ಲೈನ್ ಮುಖಾಂತರವೂ ಖರೀದಿ ಮಾಡಬಹುದು. ಆನ್ಲೈನ್ ಮೂಲಕ ಖರೀದಿ ಮಾಡಲು ಇಚ್ಚಿಸುವವರು ಇಲ್ಲಿಂದ ಖರೀದಿ ಮಾಡಬಹುದು.












Click it and Unblock the Notifications