• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಡ್ತಿ ಮೀಸಲಾತಿ ಕಾಯ್ದೆ: ಎಸ್ಸಿ-ಎಸ್ಟಿ ನೌಕಕರ ಅಂತಿಮ ಹೋರಾಟ

|

ಬೆಂಗಳೂರು, ಸೆ.25: ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಕಿತ ದೊರೆತರೂ ಕೂಡ ಸರ್ಕಾರ ಜಾರಿಗೊಳಿಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಹೋರಾಟಕ್ಕೆ ಎಸ್‌ಸಿ, ಎಸ್‌ಟಿ ನೌಕರರು ನಿರ್ಧರಿಸಿದ್ದಾರೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಕುಮಾರಸ್ವಾಮಿ ತವರು ಕ್ಷೇತ್ರದಿಂದಲೇ ಹೋರಾಟ ಆರಂಭಿಸಲು ನೌಕರರು ಸಿದ್ಧತೆ ನಡೆಸಿದ್ದಾರೆ, ಹಾಸನ ರಾಮನಗರದಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ, ಅಕ್ಟೋಬರ್ ಮೊದಲ ವಾರದಲ್ಲಿ ಹೋರಾಟವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಡ್ತಿ ಮೀಸಲಾತಿ ವಿಳಂಬಕ್ಕೆ ಸಮ್ಮಿಶ್ರ ಸರ್ಕಾರ ಹೊಣೆ: ವೀರಯ್ಯ ಆರೋಪ

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಹಾಸನದಲ್ಲಿ ಸಚಿವ ರೇವಣ್ಣ ಹಾಗೂ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಹೋರಾಟ ನಡೆಸಲಿದ್ದಾರೆ. ರಾಷ್ಟ್ರಪತಿಗಳಿಂದ ಕಾಯ್ದೆ ಅಂಗೀಕಾರವಾಗಿದ್ದರೂ ಕುಮಾರಸ್ವಾಮಿ ಅದನ್ನು ಜಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಾಯ್ದೆ ಜಾರಿಗೆ ದಲಿತ ಸಚಿವರು ಮುಂದಾಗಿದ್ದರೂ ಸಿಎಂ ಅದರ ಕಡೆಗೆ ಗಮನಹರಿಸುತ್ತಿಲ್ಲ ಹಾಗಾಗಿ ಅವರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವುದಾಗಿ ನೌಕರರು ತಿಳಿಸಿದ್ದಾರೆ.

ಎಸ್‌ಸಿ ಎಸ್‌ಟಿ ನೌಕರರಿಗೆ ಆಗಿರುವ ಅನ್ಯಾಯವನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ, ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಗೀಕಾರ ಸಿಕ್ಕಿದೆ ಹಾಗಾಗಿ ಇವತ್ತೇ ಇಲ್ಲವೇ ನಾಳೆ‌ಯೇ ಜಾರಿಯಾಗಬಹುದು ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಭರವಸೆ ನೀಡಿದ್ದರು.

English summary
Seeking protection act implementation of reservation in promotion, scheduled caste and tribe employees have decided to hold a decisive agitation against the state government in October first week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X