ಕಾರು ಪೂಲಿಂಗ್ ಬಗ್ಗೆ ಮಾಹಿತಿ ಬೇಕೆ? ವೆಬ್ಸೈಟ್ ನೋಡಿ
ಬೆಂಗಳೂರು, ಜ. 27 : ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಸಿಲುಕಿದ ಜನರು ಕಾರ್ ಪೂಲಿಂಗ್ ಬಗ್ಗೆ ಕೇಳಿರುತ್ತಾರೆ. ಸದ್ಯ, ಇದಕ್ಕಾಗಿ ವೆಬ್ಸೈಟ್ವೊಂದು ಆರಂಭವಾಗಿದೆ. ಇದರ ನೆರವು ಪಡೆದು ಜನರು ಕಾರು ಪೂಲಿಂಗ್ ಮಾದರಿಯಲ್ಲಿಯೇ ಪ್ರಯಾಣ ಮಾಡಬಹುದು.
letsride.in. ಎಂಬ ವೆಬ್ಸೈಟ್ ಆರಂಭಗೊಂಡಿದ್ದು ಈ ವೆಬ್ಸೈಟ್ಗೆ ಭೇಟಿ ನೀಡಿ ಜನರು ತಮ್ಮ ಮಾರ್ಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಹುಡುಕಿಕೊಳ್ಳಬಹುದು, ಅವರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಬಹುದು ನಂತರ ಇಬ್ಬರು ಒಪ್ಪಿಗೆ ನೀಡಿದರೆ ಪ್ರಯಾಣ ಮಾಡಬಹುದಾಗಿದೆ. [ಕಾರ್ ಪೂಲಿಂಗ್ ಬಗ್ಗೆ ನೀವೇನಂತೀರಿ?]

ಪುಣೆ, ಮುಂಬೈ, ಹೈದರಾಬಾದ್ ಮುಂತಾದ ನಗರಗಳಲ್ಲಿ ಈ ತಾಣ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ ಸುಮಾರು 3 ಸಾವಿರ ಜನರು ಈಗಾಗಲೇ ಈ ತಾಣಕ್ಕೆ ಸೇರಿದ್ದಾರೆ. ಜನರಿಗೆ ಮತ್ತಷ್ಟು ಹತ್ತಿರವಾಗಲು ಈ ವೆಬ್ಸೈಟ್ ಶೀಘ್ರದಲ್ಲೇ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದೆ. [ಕಾರ್ ಪೂಲಿಂಗ್ ಮಾಡಿ ಇಂಧನ ಉಳಿಸಿ]
ಈ ವೆಬ್ಸೈಟ್ ಸಂಸ್ಥಾಪಕರಲ್ಲಿ ಒಬ್ಬರಾದ ರಾಜ್ ಕುಮಾರ್ ಮುಂಡೇಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಜನರು ಸಂಚಾರ ದಟ್ಟಣೆಯಲ್ಲಿ ಗಂಟೆಗಟ್ಟಲೆ ಸಿಲುಕುತ್ತಾರೆ.
ಇಂತಹ ಜನರಿಗೆ ನೆರವಾಗಲು ಈ ವೆಬ್ಸೈಟ್ ಆರಂಭಿಸಲಾಗಿದೆ. ಈ ಸೈಟ್ಗೆ ಭೇಟಿ ನೀಡಿ ಜನರು ಕಾರು, ಬೈಕ್ ಅಥವಾ ಆಟೋದಲ್ಲಿ ಜತೆಯಲ್ಲಿ ಪ್ರಯಾಣಿಸಬಹುದು. ಶೀಘ್ರದಲ್ಲೇ ನಾವು ಮೊಬೈಲ್ ಅಪ್ಲಿಕೇಶನ್ ಆರಂಭಿಸಲಿದ್ದೇವೆ ಎಂದು ಮಂಡೇಲ್ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9049351066 ನಂಬರ್ಗೆ ಕರೆ ಮಾಡಬಹುದಾಗಿದೆ.
-
Anusha Rai: ಬಿಗ್ಬಾಸ್ ಬೆಡಗಿ ಅನುಷಾ ರೈ ಮನೆಗೆ ಬಂತು ಐಷಾರಾಮಿ ಫಾರ್ಚೂನರ್ ಕಾರು, ಫೋಟೋಸ್ ಇಲ್ಲಿವೆ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ









Click it and Unblock the Notifications