ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ್ದ ಶಶಿಕಲಾಗೆ ಹಿನ್ನಡೆ
ಬೆಂಗಳೂರು, ಡಿ. 6: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿ ತಿರಸ್ಕೃತಗೊಂಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ನಾಲ್ಕು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದ್ದು, 10 ಕೋಟಿ ರೂ ದಂಡವನ್ನು ಆಕೆ ನ್ಯಾಯಾಲಯಕ್ಕೆ ಕಟ್ಟಬೇಕಿತ್ತು. ಇತ್ತೀಚೆಗೆ ದಂಡವನ್ನು ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಕೋರ್ಟಿಗೆ ಪಾವತಿಸಿದ್ದಾರೆ. ದಂಡ ಪಾವತಿಸಿರುವುದರಿಂದ ನಿಗದಿಯಂತೆ ಜನವರಿ 27, 2021ರಂದು ಬಿಡುಗಡೆಯಾಗಬಹುದು.
ಆದರೆ, ನಿಗದಿತ ದಿನಾಂಕಕ್ಕೂ ಮುನ್ನವೇ ಜೈಲಿನಿಂದ ಶಶಿಕಲಾ ಬಿಡುಗಡೆ ಬಯಸಿದ್ದರು. ಬಿಡುಗಡೆ ಆಗಬೇಕಿರುವ ದಿನದ ಹಿಂದಿನ 135 ದಿನಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಈ ರೀತಿ ಅವಧಿಗೂ ಮುನ್ನ ಬಿಡುಗಡೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಜೈಲಿನ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಯಾವ ಆಧಾರದ ಮೇಲೆ ಅರ್ಜಿ ಹಾಕಲಾಗಿತ್ತು
ಈ ಕುರಿತಂತೆ ಜೈಲಿನ ಅಧಿಕಾರಿಗಳಿಗೆ ಶಶಿಕಲಾ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರವನ್ನು ಉನ್ನತಾಧಿಕಾರಿಗಳ ಅವಗಹನೆಗೆ ಕಳಿಸಲಾಗಿದ್ದು, ಈ ಬಗ್ಗೆ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಕರ್ನಾಟಕದ ಕಾರಾಗೃಹ ನಿಯಮಾವಳಿಗಳ ಪ್ರಕಾರ, ಪ್ರತಿ ತಿಂಗಳು ಸನ್ನಡತೆ ಆಧಾರ ಮೇಲೆ ಮೂರು ದಿನಗಳ ಅವಧಿ ಕಡಿತ ಸಾಧ್ಯತೆಯಿದೆ. ಶಶಿಕಲಾ ಅವರು ಸದ್ಯ 43 ತಿಂಗಳ ಜೈಲುವಾಸ ಪೂರೈಸಿದ್ದು, 135 ದಿನಗಳ ಅವಧಿ ಕಡಿತಕ್ಕೆ ಅರ್ಹರಾಗಿದ್ದಾರೆ ಎಂದು ಶಶಿಕಲಾ ಪರ ವಕೀಲ ಎನ್ ರಾಜ ಸೆಂತೂರ್ ಪಾಂಡಿಯನ್ ಹೇಳಿದ್ದಾರೆ.

ಜೈಲಿನ ಅಧಿಕಾರಿಗಳು ಅನುಸರಿಸಿದ ಕ್ರಮವೇನು?
ಶಶಿಕಲಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು, ನೀವು ಜೀವಾವಧಿ ಶಿಕ್ಷೆಗೆ ಒಳಗಾದವರೇ, ನಿಮ್ಮನ್ನ ಅವಧಿಗೂ ಮುನ್ನ ಬಿಡುಗಡೆ ಮಾಡಲು ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ, ಕೇವಲ ಜೀವಾವಧಿ ಶಿಕ್ಷೆಗೆ ಒಳಪಡಿಸಿದವರಿಗೆ ಮಾತ್ರ ಅವರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಆದ್ರೆ ನಿಮಗೆ ಜೀವಾವಧಿ ಶಿಕ್ಷೆ ಪ್ರಕಟಿಸಿಲ್ಲ ಹೀಗಾಗಿ ಅವಧಿಗೂ ಮುನ್ನವೇ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಜೈಲಿನ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಶಶಿಕಲಾ ಅವರ ಅರ್ಜಿಯನ್ನು ಗೃಹ ಇಲಾಖೆಗೆ ಕಳಿಸಿ, ಕಾನೂನಿನಲ್ಲಿ ಈ ಬಗ್ಗೆ ಅವಕಾಶವಿದೆಯೇ, ಕರ್ನಾಟಕದ ಕಾರಾಗೃಹ ನಿಯಮಾವಳಿಯನ್ನು ಪರಿಶೀಲನೆ ನಡೆಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಜೈಲಿನ ನಿಯಮ ಏನು ಹೇಳುತ್ತದೆ?
ಕರ್ನಾಟಕದ ಕಾರಾಗೃಹ ನಡಾವಳಿ ನಿಯಮಗಳ ಪ್ರಕಾರ ಜೀವಾವಧಿ ಶಿಕ್ಷೆಗೆ ಒಳಗಾಗದವರಿಗೆ ಮಾತ್ರ ಈ ರೀತಿ ಬಿಡುಗಡೆ ಮಾಡಬಹುದು..
ಪುರುಷರಿಗೆ 15 ವರ್ಷ, ಮಹಿಳೆಯರಿಗೆ 9-10 ವರ್ಷ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಅವರ ಸನ್ನಡತೆ ಆಧರಿಸಿ ಹಿರಿಯ ಅಧಿಕಾರಿಗಳಿಗೆ ಅಲ್ಲಿನ ಕಿರಿಯ ಅಧಿಕಾರಿಗಳು ಮಾಹಿತಿ ರವಾನಿಸಬೇಕು. ಹಿರಿಯ ಅಧಿಕಾರಿಗಳು ಅದನ್ನೆಲ್ಲಾ ಪರಿಶೀಲಿಸಿ ಅವಧಿಗೂ ಮುನ್ನ ರಿಲೀಸ್ ಮಾಡಬಹುದಾ ಎಂದು ತೀರ್ಮಾನಿಸುತ್ತಾರೆ.
ಆದರೆ, ಶಶಿಕಲಾ ಅರ್ಜಿಯನ್ನು ಹಿರಿಯ ಅಧಿಕಾರಿಗಳು ತಿರಸ್ಕರಿಸಿರುವುದರಿಂದ ನಿಗದಿ ಮಾಡಿರುವ ಅವಧಿ ಪೂರೈಸಿದ ಬಳಿಕವಷ್ಟೇ ಶಶಿಕಲಾ ಬಿಡುಗಡೆಗೊಳ್ಳಲಿದ್ದಾರೆ.
Recommended Video

ಶಶಿಕಲಾ ಆಪ್ತರ ಬಿಡುಗಡೆ ಯಾವಾಗ?
ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹ 2014ರ ಸೆಪ್ಟೆಂಬರ್ ನಲ್ಲಿ ಸ್ಪೆಷಲ್ ಟ್ರಯಲ್ ಕೋರ್ಟ್ ನ್ಯಾ. ಜಾನ್ ಮೈಕೇಲ್ ಕನ್ಹಾ ಐಪಿಸಿ ಸೆಕ್ಷನ್ 109ರಡಿ ಜೆ ಜಯಲಲಿತಾ, ಶಶಿಕಲಾ, ಸುಧಾಕರನ್, ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಶಶಿಕಲಾ ದತ್ತು ಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು. ಈಗ 10 ಕೋಟಿ ರು ದಂಡ ಪಾವತಿಸಿದ ಬಗ್ಗೆ ನ್ಯಾಯಾಲಯದಿಂದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪತ್ರ ತಲುಪಿದ ಬಳಿಕ ಬಿಡುಗಡೆ ಕುರಿತ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕೃತವಾಗಿ ಮಾಹಿತಿ ಬಂದಿದೆ. ಶಶಿಕಲಾ, ವಿಎನ್ ಸುಧಾಕರನ್, ಜೆ ಇಳವರಸಿ ಅವರಿಗೂ 10ಕೋಟಿ ಪ್ಲಸ್ 10 ಸಾವಿರ ರು ದಂಡ ವಿಧಿಸಲಾಗಿದ್ದು, ಅವರು ಕೂಡಾ ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹರಾಗುತ್ತದೆ
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications