ಬೆಂಗಳೂರಿನ ಸಾರಕ್ಕಿ ನಿವಾಸಿ ಕಾಣೆ: ಇವರ ಸುಳಿವು ಸಿಕ್ಕರೆ ಮಾಹಿತಿ ಕೊಡಿ !

ಬೆಂಗಳೂರು, ಮೇ 6: ಜೆ.ಪಿ.ನಗರದ ಸಾರಕ್ಕಿ ನಿವಾಸಿ ಎಚ್‌.ಎಸ್. ಭಾಸ್ಕರ್ ಎಂಬುವರು ಏ. 25 ರಂದು ಕಾಣೆಯಾಗಿದ್ದು, ಈವರನ್ನು ಕಂಡರೆ ಮಾಹಿತಿ ನೀಡಿ ಎಂದು ಅವರ ಪುತ್ರ ಮನವಿ ಮಾಡಿದ್ದಾರೆ.

68 ವರ್ಷ ವಯಸ್ಸಿನ ಭಾಸ್ಕರ್ ಸಾರಕ್ಕಿಯಲ್ಲಿ ವಾಸವಾಗಿದ್ದರು. ಏ. 25 ರಂದು ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಸು ಬಂದಿರುವುದಿಲ್ಲ. ಕರ್ನಾಟಕದ ಕೊಲ್ಲೂರುನಿಂದ ಕೇರಳಕ್ಕೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರು. ಕನ್ನಡ, ಇಂಗ್ಲೀಷ್ , ಹಿಂದಿ, ತೆಲಗು ಮತ್ತು ತಮಿಳು ಭಾಷೆ ಮಾತನಾಡುತ್ತಾರೆ. ಐದು ಅಡಿ ಎತ್ತರ ಇರುವ ಭಾಸ್ಕರ್‌ ಅವರಿಗೆ ಗೋಚರವಾದ ಸೋರಿಯಾಸ್ ಗುರುತುಗಳಿವೆ. ಭಾಸ್ಕರ್ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದಾರೆ ಎಂದು ಅವರ ಬಗ್ಗೆ ಅವರ ಪುತ್ರ ನವನೀತ್ ಭಾಸ್ಕರ್ ವಿವರ ನೀಡಿದ್ದಾರೆ. ಭಾಸ್ಕರ್ ಕಾಣೆಯಾಗಿರುವ ಬಗ್ಗೆ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಕೇಸು ಸಹ ದಾಖಲಾಗಿದೆ.

Bengaluru sarakki resident Bhaskar missing

ಭಾಸ್ಕರ್ ಅವರನ್ನು ಹುಡುಕಲು ನಮಗೆ ಸಹಾಯ ಮಾಡಿ. ಭಾಸ್ಕರ್ ಅವರನ್ನು ಕಂಡರೆ ಮಾಹಿತಿ ನೀಡಿ. ಅವರು ಮನೆಗೆ ಬಾರದ ಕಾರಣ ಅವರ ಪತ್ನಿ, ಪುತ್ರ, ಹೆಣ್ಣು ಮಕ್ಕಳು ಮತ್ತು ಮೊಮ್ಮಗಳು ಅವರನ್ನು ನೆನದು ಕಣ್ಣೀರು ಹಾಕುತ್ತಿದ್ದಾರೆ. ಈ ಚಿತ್ರದಲ್ಲಿರುವ ಭಾಸ್ಕರ್ ಅವರನ್ನು ಕಂಡರೆ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮೊಬೈಲ್ ನಂಬರ್: 9972943045

Recommended Video

      ಸೋಲು ಗೆಲುವು ಏನೇ ಆಗ್ಲಿ ಆಟಗಾರರಿಗೆ ಮಾತ್ರ ಫ್ರಾಂಚೈಸಿಗಳಿಂದ ರಾಯಲ್ ಆತಿಥ್ಯ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+