ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 30 ಕೆಜಿ ಗಾಂಜಾ

ಬೆಂಗಳೂರು, ಸೆ. 22: ಸಂಜಯನಗರ ಪೊಲೀಸ್ ಠಾಣೆ ಪಿಎಸ್‍ಐ ರೂಪ ಕೆ.ಎಸ್ ಹಾಗೂ ತಂಡದವರು ನಡೆಸಿದ ಕಾರ್ಯಾಚರಣೆಯಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧಿಸಲಾಗಿದೆ. ಬಂಧಿತನಿಂದ ಸುಮಾರು 30.23 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಸೋಮವಾರದಂದು ಸಂಜಯನಗರ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್‍ಐ ರೂಪ ಕೆ.ಎಸ್. ರವರಿಗೆ ಸಂಜಯನಗರ ಠಾಣಾ ಸರಹದ್ದಿನ ಭೂಪಸಂದ್ರ, 1ನೇ ಕ್ರಾಸ್, ಮೋಹನ್‍ರಾಜ್‍ಲೇಔಟ್, ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಒಬ್ಬ ಆಸಾಮಿಯು ಮಾದಕ ವಸ್ತು ಗಾಂಜಾವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದು ಮಾಹಿತಿ ಸಿಕ್ಕಿದೆ.

ಮಾಹಿತಿಯನ್ನು ಖಚಿತ ಪಡಿಸಿಕೊಂಡು ರೂಪ ಮತ್ತು ಸಿಬ್ಬಂದಿಯವರುಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಗಾಂಜಾ ಎಂಬ ಮಾದಕ ವಸ್ತುವನ್ನು ತಮ್ಮ ವಶದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Sanjay Nagar Police arrested a person and seized 30 KG Ganja

ಬಂಧಿತನನ್ನು ಭೂಪಸಂದ್ರ ನಿವಾಸಿ ಶಬ್ಬಿರ್ ಖಾನ್ ಅಲಿಯಾಸ್ ಶಬ್ಬಿರ್( 34 ವರ್ಷ) ಎಂದು ಗುರುತಿಸಲಾಗಿದ್ದು, ಆತನ ಮಾಹಿತಿ ಮೇರೆಗೆ ಆರೋಪಿಗಳಾದ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೂಲದ ಭೀಮಣ್ಣ(28) ಹಾಗೂ ಎಸ್. ನನ್ನರಾವ್( 24) ಎಂಬುವರುಗಳನ್ನು ದಸ್ತಗಿರಿ ಮಾಡಿ ಸದರಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 9.06 ಲಕ್ಷ ಮೌಲ್ಯದ 30.23 ಕೆ.ಜಿ. ತೂಕದ ಗಾಂಜಾ ಮತ್ತು 500 ನಗದು ಹಣವನ್ನು ಹೆಬ್ಬಾಳದ ಎಸ್ಟೀಮ್ ಮಾಲ್ ಹತ್ತಿರ ವಶಪಡಿಸಿಕೊಳ್ಳುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಸದರಿ ಆರೋಪಿಗಳು ಮೂಲತಃ ವಿಶಾಖಪಟ್ಟಣಂ, ಆಂಧ್ರಪ್ರದೇಶ ರಾಜ್ಯದವರಾಗಿದ್ದು, ಓರಿಸ್ಸಾ ರಾಜ್ಯದಿಂದ ಗಾಂಜಾ ಸೊಪ್ಪನ್ನು ಕಡಿಮೆ ಬೆಲೆಗೆ ತೆಗೆದುಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.

Recommended Video

      Namma Metro ಕೊರೊನ ನಂತರ ಕೆಲವು ಮಹತ್ವದ ನಿರ್ಧಾರ ಕೈಗೊಂಡಿದೆ | Oneindia Kannada

      ಈ ಪ್ರಕರಣದಲ್ಲಿ ಶ್ರೀಮತಿ ರೀನಾ ಸುವರ್ಣ, ಜೆ.ಸಿ.ನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಬಾಲಾಜಿ ವಿ., ಪೊಲೀಸ್ ಇನ್ಸ್ ಪೆಕ್ಟರ್, ಸಂಜಯನಗರ ಪೊಲೀಸ್ ಠಾಣೆ, ಪಿಎಸ್‍ಐ ರೂಪ ಕೆ.ಎಸ್, ಲೋಕೇಶ., ಶಿವಮೂರ್ತಿ ಎ.ಎಸ್.ಐ. ಮತ್ತು ಸಿಬ್ಬಂದಿಗಳಾದ ಮಂಜಣ್ಣ ಹೆಚ್.ಸಿ 8265, ಟಿಪ್ಪು ಸುಲ್ತಾನ್ ಹೆಚ್.ಸಿ 10253. ಗುರುರಾಜ್ ಪಿ.ಸಿ 11902, ತಿಮ್ಮೇಶ ಪಿ.ಸಿ 8438, ಪಾಂಡುರಂಗ ಪಿ.ಸಿ 14226, ಮಲ್ಲಪ್ಪ ಕಡ್ಲಿ ಪಿ.ಸಿ 18887, ರಕ್ಷಿತ್ ಪಿ.ಸಿ 14149 ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+