ಗೌರಿ ಲಂಕೇಶ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಹಾಸ್ಯಾಸ್ಪದ: ಸನಾತನ ಸಂಸ್ಥೆ
ಬೆಂಗಳೂರು, ಡಿಸೆಂಬರ್ 4: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆ ಪ್ರಕಟಿಸಿದ ಕೃತಿಯನ್ನು ಓದಿ ಹಂತಕರು ಹತ್ಯೆಗೈದಿದ್ದಾರೆ ಎಂದು ಎಸ್‌ಐಟಿ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಸನಾತನ ಸಂಸ್ಥೆ ಆರೋಪಿಸಿದೆ.
ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ನಡೆಸುತ್ತಿರುವ ತನಿಖೆಗೆ ಯಾವುದೇ ಹುರುಳಿಲ್ಲ ಎಂದು ಸನಾತನ ಸಂಸ್ಥೆ ವಾಗ್ದಾಳಿ ನಡೆಸಿದೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ವಕ್ತಾರ ಚೇತನ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಪ್ರೆಸ್‌ನೋಟ್ ಒಂದನ್ನು ನೀಡಿದೆ.

ಅದರಲ್ಲಿ ಸನಾತನ ಸಂಸ್ಥೆ ಪ್ರಕಡಿಸಿದ ಕೃತಿ ಕ್ಷಾತ್ರಧರ್ಮ ಸಾಧನೆ ಹಂತಕರು ಓದಿದ್ದರು. ಅದರಿಂದಲೇ ಹತ್ಯೆ ಮಾಡಿದ್ದಾರೆ ಎಂದು ಎಸ್‌ಐಟಿ ಹೇಳಿಕೊಂಡಿದೆ ಇದು ಅತ್ಯಂತ ಹಾಸ್ಯಾಸ್ಪದ ಸನಾತನ ಸಂಸ್ಥೆ ಹಾಗೂ ಕೃತಿಗಳು ಹಾಗೂ ಸಿದ್ಧಾಂತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.











Click it and Unblock the Notifications