Get Updates
Get notified of breaking news, exclusive insights, and must-see stories!

‘ಸಮುದಾಯ ಸುಗ್ಗಿ’ – ರಂಗಶಂಕರದಲ್ಲಿ 4 ನಾಟಕಗಳು

ಬೆಂಗಳೂರು, ಡಿ.11: ಸಮುದಾಯ' ಹವ್ಯಾಸಿ ರಂಗ ತಂಡ ಗಿರೀಶ್ ಕಾರ್ನಾಡ್ ವಿರಚಿತ ತುಘಲಕ್ ನಾಟಕದ ಯಶಸ್ಸಿನ ನಂತರ ಡಿಸೆಂಬರ್ 11 ರಿಂದ 14 ರ ವರೆಗೆ,'ಪಂಪ ಭಾರತ' ನಾಟಕ ಹಾಗೂ ಇತ್ತೀಚೆಗೆ ಪುನರುಜ್ಜೀವನ ಗೊಳಿಸಿದ 'ಕತ್ತಲೆ ದಾರಿ ದೂರ', ಮತ್ತು ಸಮುದಾಯದ ಧಾರವಾಡ ಘಟಕದ ಇತ್ತೀಚಿನ ಪ್ರಯೋಗವಾದ 'ದೇವರ ಹೆಣ' ನಾಟಕಗಳನ್ನು ಪ್ರದರ್ಶಿಸಲಿದೆ.

ಸಾಮಾಜಿಕ ಚಳವಳಿ ಮತ್ತು ಹೋರಾಟಗಳಿಗೆ ಸಾಂಸ್ಕೃತಿಕ ಆಯಾಮದ ಬದಲಾದ ಮಾದರಿಗಳನ್ನು ಕಟ್ಟಿಕೊಟ್ಟ ಸಂಘಟನೆಯೇ 'ಸಮುದಾಯ'. ತುರ್ತು ಪರಿಸ್ಥಿತಿಯ ಸಾಮಾಜಿಕ ತುರ್ತಿನಲ್ಲಿ ಜನಪರ ಹಾಗೂ ಪ್ರಜಾಪ್ರಭುತ್ವವಾದೀ ಚಿಂತಕರು ನಿರಂತರ ಚಳವಳಿಗಳ ಮೂಲಕ ಹೋರಾಟದ ಬೇರನ್ನು ಗಟ್ಟಿಗೊಳಿಸಿದ್ದಾರೆ.

Kattele daari doora

1975 ರಿಂದ ಸತತವಾಗಿ ಹಲವು ಪ್ರಮುಖ ನಾಟಕಗಳಾದ 'ಹುತ್ತವ ಬಡಿದರೆ ', 'ತಾಯಿ', 'ಕುರಿ', 'ಸಂಕ್ರಾಂತಿ', 'ಮಹಾಚೈತ್ರ', 'ಕತ್ತಲೆದಾರಿದೂರ', 'ರುಡಾಲಿ', 'ಪಂಪಭಾರತ', 'ಜುಗಾರಿಕ್ರಾಸ್' ಹಾಗೂ ಇನ್ನು ಹತ್ತು ಹಲವು ವಿನೂತನ ನಾಟಕಗಳನ್ನು ಪ್ರಯೋಗಿಸಿರುವ ಸಮುದಾಯ ಕನ್ನಡರಂಗಭೂಮಿಯಲ್ಲಿ ತನ್ನದೇ‌ ಆದ ಛಾಪನ್ನು ಮೂಡಿಸಿದೆ.

Devara Hena

ನಿರಂತರವಾದ ಜನಸಂಸ್ಕೃತಿ ಜಾಥಾಗಳು, ವಿಚಾರ ಸಂಕಿರಣಗಳು, ಬೀದಿನಾಟಕಗಳು, ರಂಗತರಬೇತಿ ಕಾರ್ಯಾಗಾರಗಳು ಹಾಗೂ ಇತರೆ ಸಾಮಾಜಿಕ ಚಿಂತನೆಗಳುಳ್ಳ ಚಟುವಟಿಕೆಗಳು ಮುಖ್ಯ ಹೋರಾಟವನ್ನು ಶಕ್ತಗೊಳಿಸಿವೆ.

Tughalag

* 11 ಡಿಸೆಂಬರ್ 2014 : ಗುರುವಾರ, ಕತ್ತಲೆ ದಾರಿ ದೂರ ಸಂಜೆ 7:30 ಕ್ಕೆ

*12 ಡಿಸೆಂಬರ್ 2014 :
ಶುಕ್ರವಾರ, ದೇವರ ಹೆಣ (ಪ್ರಸ್ತುತಿ : ಸಮುದಾಯ , ಧಾರವಾಡ ) ಸಂಜೆ 7:30 ಕ್ಕೆ

Pampa Bharata

* 13 ಡಿಸೆಂಬರ್ 2014 : ಶನಿವಾರ, ತುಘಲಕ್ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 7:30 ಕ್ಕೆ

* 14 ಡಿಸೆಂಬರ್ 2014 : ಭಾನುವಾರ, ಪಂಪ ಭಾರತ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 7:30 ಕ್ಕೆ

ಟಿಕೆಟ್ ಗಾಗಿ ಸಂಪರ್ಕಿಸಿ ಸಂಖ್ಯೆ: 99001 82400. ವೆಬ್ ಸೈಟ್ ನಲ್ಲಿ ಬುಕ್ ಮಾಡಲು ಬುಕ್ ಮೈಶೋ ಕ್ಲಿಕ್ ಮಾಡಿ ಅಥವಾ ರಂಗಶಂಕರ.ಆರ್ಗ್ ನಿಂದ ಪಡೆಯಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+