ಜೆಪಿ ನಗರದ ಶಿರಡಿ ಸಾಯಿ ಬಾಬ ದೇವಸ್ಥಾನದಲ್ಲಿ ಗುರುಪೌರ್ಣಮಿ

ಬೆಂಗಳೂರು ಜುಲೈ 26: ಪುಟ್ಟೇನಹಳ್ಳಿ ಮುಖ್ಯರಸ್ತೆ ಜೆ ಪಿ ನಗರ 6 ನೇ ಹಂತದಲ್ಲಿರುವ ಶ್ರೀ ಸತ್ಯಗಣಪತಿ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಜುಲೈ 27 ರಂದು ವಿಜ್ರಂಭಣೆಯಿಂದ ಗುರುಪೌರ್ಣಮಿಯನ್ನು ಆಚರಿಸಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತಿದೆ.

ಶಿರಡಿ ಸಾಯಿ ಬಾಬಾ ಅವರ ಸನ್ನಿಧಾನ ಹೊರತುಪಡಿಸಿದರೆ ಬೆಂಗಳೂರು ನಗರದಲ್ಲೇ ಅತ್ಯಂತ ವಿಭಿನ್ನ ಹಾಗೂ ವಿಶೇಷವಾದ ಅಲಂಕಾರವನ್ನು ಈ ದೇವಸ್ಥಾನದಲ್ಲಿ ಮಾಡಲಾಗಿದೆ.

Sai Baba Temple in JP Nagar Guru Purnima

ಗುರುಪೌರ್ಣಿಮೆಯನ್ನು ವಿಶೇಷವಾಗಿ ಆಚರಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ದೇವಸ್ಥಾನದಲ್ಲಿ ಬೇರೆ ಯಾವ ದೇವಸ್ಥಾನದಲ್ಲೂ ಸಾಟಿಯಿಲ್ಲದ ರೀತಿಯಲ್ಲಿ ಅಲಂಕಾರ ಮಾಡವುದು ನಮ್ಮ ಉದ್ದೇಶವಾಗಿದೆ ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮ ಮೋಹನ ರಾಜ್ ತಿಳಿಸಿದರು.

ತೆಂಗಿನ ಕಾಯಿ, ಫಲ ಪುಷ್ಪಾದಿಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿದೆ. 20 ಕ್ಕೂ ಹೆಚ್ಚು ಕಲಾವಿದರು ಕಳೆದ 7 ದಿನಗಳಿಂದ ಈ ಅಲಂಕಾರವನ್ನು ಮಾಡುತ್ತಿದ್ದು, ಬೇರೆ ಯಾವುದೇ ದೇವಸ್ಥಾನಕ್ಕೂ ಸಾಟಿಯಿಲ್ಲದ ರೀತಿಯಲ್ಲಿ ಅಲಂಕಾರವನ್ನು ಮಾಡಲಾಗಿದೆ ಎಂದರು.

ಜುಲೈ 26 ರಂದು ಗುರುವಾರ ಬೆಳಿಗ್ಗೆ 6 ಗಂಟೆಗೆ ಸಾಮೂಹಿಕ ಅಭಿಷೇಕದಿಂದ ವಿಶೇಷ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಜುಲೈ 27 ಶುಕ್ರವಾರ ಮುಖ್ಯದಿನವಾದ ಅಂದು ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ ನಡೆಯಲಿದೆ. ಮೃತ್ಯಂಜಯ ಹೋಮ ಹಾಗೂ ಸಾಯಿನಾಥ ಹೋಮವನ್ನೂ ಆಯೋಜಿಸಲಾಗಿದ್ದು, ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+