KSRTC:ಅಪಘಾತ ರಹಿತ ಚಾಲಕರಿಗೆ 'ಸುರಕ್ಷಾ ಚಾಲಕ' ಪ್ರಶಸ್ತಿ
ಬೆಂಗಳೂರು, ಜನವರಿ 22: ಐದು ವರ್ಷಗಳಲ್ಲಿ ಅಪಘಾತ ರಹಿತ ಚಾಲನೆ ಮಾಡಿದ 588 ಕೆಎಸ್ ಆರ್ ಟಿಸಿ ಚಾಲಕರಿಗೆ ಸುರಕ್ಷಾ ಚಾಲಕ ಎಂಬ ಪ್ರಶಸ್ತಿ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಸಿದೆ.
ನಿಮದಿಂದ ಲಾಂಛನ ಒಳಗೊಂಡ 32 ಗ್ರಾಂ ಬೆಳ್ಳಿ ಪದಕ, 2ಸಾವಿರ ರೂ ನಗದು, ಪ್ರಶಂಸಾ ಪತ್ರ ಹಾಗೂ ಮಾಸಿಕ 50 ರೂ ಪ್ರೋತ್ಸಾಹ ಭತ್ಯೆ ನೀಡಲಾಗುತ್ತದೆ. ಜನವರಿ 26 ರಂದು ಆಯಾ ವಿಭಾಗಗಳಲ್ಲಿ ಪದಕ ಪ್ರದಾನ ಮಾಡಲು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಆದೇಶಿಸಿದ್ದಾರೆ ಎಂದು ನಿಗಮ ತಿಳಿಸಿದೆ.

ರಾಮನಗರ ವಿಭಾಗದ 35 ಚಾಲಕರು, ತುಮಕೂರಿನ 35 , ಕೋಲಾರ 58, ಚಿಕ್ಕಬಳ್ಳಾಪುರ 40, ಮೈಸೂರು ನಗರ 16, ಮೈಸೂರು ಗ್ರಾಮಾಂತರ 138, ಮಂಡ್ಯ 23, ಚಾಮರಾಜನಗರ 27, ಹಾಸನ 129, ಚಿಕ್ಕಮಗಳೂರು 16, ಮಂಗಳೂರು 1, ಪುತ್ತೂರು 13, ದಾವಣಗೆರೆ ಶಿವಮೊಗ್ಗ ಸೇರಿ 52 ಚಾಲಕರು ಸುರಕ್ಷಾ ಚಾಲಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ನಿಗಮ ತಿಳಿಸಿದೆ.












Click it and Unblock the Notifications