Get Updates
Get notified of breaking news, exclusive insights, and must-see stories!

SM Krishna Birthday: 'ಮಿಸ್ ಯೂ ಗುರುಗಳೇ', ಹಿರಿಯ ಮುತ್ಸದ್ಧಿ ಸ್ಮರಿಸಿದ ನಾಯಕರು..

ಬೆಂಗಳೂರು, ಮೇ 01: ಮುತ್ಸದ್ಧಿ ಹಿರಿಯ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು ಆಗಿ ಸೇವೆ ಸಲ್ಲಿಸಿದ್ದ ದಿವಂಗತ ಎಸ್‌.ಎಂ.ಕೃಷ್ಣ ಅವರು (S.M.Krishna) ನಾಲ್ಕುವರೆ ತಿಂಗಳಾಗಿವೆ. ಇಂದು ಏಪ್ರಿಲ್ 01 ಎಸ್‌ ಎಂ ಕೃಷ್ಣ ಅವರ ಜನ್ಮದಿನ. ಹೀಗಾಗಿ ಸರಳ ಸಜ್ಜನಿಕೆಯ ರಾಜಕಾರಣಿಯೊಂದಿಗಿನ ಒಡನಾಟವನ್ನು ಅನೇಕ ರಾಜಕಾರಣಿಗಳು ಸ್ಮರಿಸಿದ್ದಾರೆ. ಜನ್ಮ ದಿನಕ್ಕೆ ಶುಭಕೋರಿದ್ದಲ್ಲದೇ, ನಿಮ್ಮ ಜೀವನ, ಸಾಧಣೆ, ರಾಜಕಾರಣ ಅದೆಷ್ಟೋ ಜನರಿಗೆ ಮಾದರಿ ಎಂದು ಹಾಡಿ ಹೊಗಳಿದ್ದಾರೆ.

ಎಸ್‌.ಎಂ.ಕೃಷ್ಣ ಅವರು ಕಳೆದ ವರ್ಷಾಂತ್ಯದಲ್ಲಿ 2024ರ ಡಿಸೆಂಬರ್ 10ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ತಮ್ಮ 92 ನೇ ವಯಸ್ಸಿನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಸಂಬಂಧ ಚಿಕಿತ್ಸೆಗಾಗಿ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ದುರದೃಷ್ಟವಶಾತ್ ಅವರಿಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಂದು ರಾಜ್ಯ ರಾಜಕಾರಣ ಹಿರಿಯ ರಾಜಕೀಯ ಜೀವವನ್ನು ಕಳೆದುಕೊಂಡಿತ್ತು.

S M Krishna s Birthday All Politicians Remember His life Contribution to Politics and IT sector

1932 ರಂದು ಮೇ 1 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ಭೇಟಿ ನೀಡಿದರು. ಅವರ ಹುಟ್ಟೂರಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ. ಇಂದು ಅವರ ಜನ್ಮದಿನವಾಗಿದ್ದು, ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ನೇರವೇರಿಸಿದ್ದಾರೆ.

ದೂರದೃಷ್ಟಿಯ ನಾಯಕನ ಜೀವನ ಮಾದರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಐಟಿ, ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಭದ್ರ ಬುನಾದಿ ಒದಗಿಸಿ ಬೆಂಗಳೂರನ್ನು ಎಸ್ ತಂತ್ರಜ್ಞಾನದ ತವರಾಗಿಸಿದ ಮೇಧಾವಿ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರು. ಮಾಜಿ ಮುಖ್ಯಮಂತ್ರಿ ಎಂ.ಎಂ. ಜನ್ಮದಿನದ ಸಂದರ್ಭದಲ್ಲಿ ನನ್ನ ನಮನಗಳು. ಕೃಷ್ಣರವರ ದೂರದೃಷ್ಟಿಯ ನಾಯಕತ್ವ, ಮುತ್ಸದ್ಧಿತನ ಎಲ್ಲಾ ಆಡಳಿತಗಾರರಿಗೂ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.

ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಎಸ್‌.ಎಂ. ಕೃಷ್ಣ ಅವರ ಕುರಿತು ಒಂದಷ್ಟು ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಪದ್ಮಭೂಷಣ ಎಸ್. ಎಂ. ಕೃಷ್ಣ ಅವರ ಜನ್ಮದಿನಂದು ಗೌರವದಿಂದ ಅವರನ್ನು ಸ್ಮರಿಸುತ್ತೇನೆ ಎಂದು ತಿಳಿಸಿದ್ದಾರೆ.

S M Krishna s Birthday All Politicians Remember His life Contribution to Politics and IT sector

ರಾಜಕಾರಣದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ವಿಧಾನಸಭೆಯ, ಸಚಿವರಾಗಿ, ಸ್ಪೀಕರ್ ಆಗಿ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ ಸೇರಿದಂತೆ ಹಲವು ಉನ್ನತ ಸ್ಥಾನಗಳನ್ನು ಏರಿದ್ದು ಅನೇಕರಿಗೆ ಮಾದರಿಯಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ಬಯಸಿ ಕೈಗೊಂಡ ಕಾರ್ಯಕ್ರಮಗಳು ಹಲವಷ್ಟಿವೆ. ರಾಜಧಾನಿಗೆ ಸಿಲಿಕಾನ್ ಸಿಟಿ, ಐಟಿ ಸಿಟಿ ಎಂಬ ಹಿರಿಮೆ ಬರಲು ಅವರ ಕೊಡುಗೆ ಅಪಾರ ಎಂದು ಹಾಡಿ ಹೊಗಳಿದರು.

ವೈಯಕ್ತಿಕವಾಗಿ ನಾನು ಅವರಿಂದ ಪ್ರೇರಿತನಾಗಿದ್ದೇನೆ. 1991ರಿಂದಲೂ ಎಸ್. ಎಂ. ಕೃಷ್ಣ ಅವರ ಒಡನಾಡಿಯಾಗಿದ್ದೆ. 1999ರಲ್ಲಿ ಕೆಪಿಸಿಸಿ ಅಧ್ಯಕ್ಷರಾದಾಗ ಅವರು ಹೆಚ್ಚಾಗಿ ತೊಡಗಿಸಿಕೊಂಡಿದ್ದೆ. ಪಾಂಚಜನ್ಯ ರಥಯಾತ್ರೆ ಕೈಗೊಂಡು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಆ ದಿನಗಳಲ್ಲಿ ಕಳೆದ ಕ್ಷಣಗಳು ಮರೆಯಲಾಗದು. ಅವರಲ್ಲಿ ಕಂಡ ಬುದ್ಧಿವಂತಿಕೆ ಮತ್ತು ಶಿಸ್ತಿನ ಮನೋಭಾವ, ದೂರದೃಷ್ಟಿ ನನಗೆ ನಿರಂತರ ಸ್ಫೂರ್ತಿಯಾಗಿದೆ ಎಂದು ಅವರೊಂದಿಗೆ ಒಡನಾಟ ಸ್ಮರಿಸಿದರು.

'ಮಿಸ್ ಯೂ ಗುರುಗಳೇ! ಎಂದ ಡಿಸಿಎಂ

ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಾಧನೆ ಮತ್ತು ಆದರ್ಶಕ್ಕೆ ಮತ್ತೊಂದು ಹೆಸರು ಎಸ್. ಎಂ. ಕೃಷ್ಣ ಅವರು. ಮುಖ್ಯಮಂತ್ರಿ, ಕೇಂದ್ರ ಮಂತ್ರಿ, ರಾಜ್ಯಪಾಲರಾಗಿ ಅವರು ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಬ್ರ್ಯಾಂಡ್ ಬೆಂಗಳೂರಿನ ಧ್ವನಿಯ ಹಿಂದೆ ಅವರು ಹಾಕಿಕೊಟ್ಟ ಭದ್ರ ಬುನಾದಿ ಇದೆ.

ಎಸ್‌.ಎಂ. ಕೃಷ್ಣ ಅವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ, ಪ್ರೇರಕ ಶಕ್ತಿಯಾಗಿದ್ದರು. ಗುರುಗಳಾಗಿ ಹಾಗೂ ತಂದೆಯ ಸ್ಥಾನದಲ್ಲಿದ್ದುಕೊಂಡು ನನಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಅವರ ನೆನಪು ಸದಾ ಶಾಶ್ವತ. ಅಜಾತಶತ್ರು ಎಸ್.ಎಂ. ಕೃಷ್ಣ ಅವರ ಜನ್ಮ ದಿನದಂದು ಗೌರವ ನಮನಗಳು. 'ಮಿಸ್ ಯೂ ಗುರುಗಳೇ! ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಐಟಿ, ಬಿಟಿ ವಲಯಕ್ಕೆ ಎಸ್‌ಎಂಕೆ ಕೊಡುಗೆ ಅಪಾರ

ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಅವರು ಸಹ ಸ್ಮರಿಸಿದ್ದು, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾದ ದಿ. ಎಸ್ ಎಂ ಕೃಷ್ಣ ರವರ ಜನ್ಮದಿನದಂದು ಭಾವಪೂರ್ಣ ನಮನಗಳು. ಮುತ್ಸದ್ಧಿ ರಾಜಕಾರಣಿಯಾಗಿ, ಕರ್ನಾಟಕದ ಐಟಿ, ಬಿಟಿ ವಲಯಕ್ಕೆ ಕೃಷ್ಣ ರವರು ನೀಡಿರುವ ಕೊಡುಗೆ ಗಮನಾರ್ಹ. ನಮ್ಮ ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ ಕೃಷ್ಣ ರವರ ದೂರದೃಷ್ಟಿಯ ಯೋಜನೆಗಳು ಪೂರಕ ಎಂದು ಅವರ ಸಾಧನೆ, ಕೊಡುಗೆ ಸ್ಮರಿಸಿದರು.

ಇನ್ನೂ ಮಾಜಿ ಗೃಹ ಸಚಿವ ಅರಗಾ ಜ್ಞಾನೇಂದ್ರ ಅವರು, ಮಾಜಿ ಕೇಂದ್ರ ಸಚಿವರು ಹಾಗೂ ನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್ ಎಂ ಕೃಷ್ಣ ಅವರ ಜನ್ಮದಿನದಂದು ಗೌರವ ನಮನಗಳು. ಆದರ್ಶ ರಾಜಕಾರಣಿ ಅವರು ಅನೇಕ ಜನಪರ ಯೋಜನೆಗಳ ಮೂಲಕ ನಾಡಿಗೆ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ ಎಂದರು. ಮಾಜಿ ಸಂಸದ ಪ್ರತಾಪ್ ಸಿಎಂ ಅವರು ಸಹ ದಿವಂಗತ ಎಸ್.ಎಂ. ಕೃಷ್ಣ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿಗಳು, ರಾಜಕೀಯ ಮುತ್ಸದ್ದಿಗಳೂ ಆಗಿದ್ದ ಎಸ್.ಎಂ.ಕೃಷ್ಣ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು. ರಾಜ್ಯದ ಅಭಿವೃದ್ಧಿಯಲ್ಲಿ ಶ್ರೀ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಅವರ ಜೀವನ ಮಾದರಿ ಎಂದು ಗೌರವಿಸಿದ್ದಾರೆ.

ಇನ್ನು ವಿಪಕ್ಷ ನಾಯಕ ಆರ್.ಅಶೋಕ್ ಅವರು ಎಸ್‌.ಎಂ.ಕೃಷ್ಣ ಅವರು ರಾಜ್ಯ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇಂದು ಅವರ ಜನ್ಮದಿನವಾಗಿದ್ದು, ಗೌರವಪೂರ್ವಕ ನಮನ ತಿಳಿಸಿದ್ದಾರೆ.

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು, ಮಾಜಿ ರಾಜ್ಯಪಾಲರು ಆಗಿದ್ದ ದಿವಂಗತ ಎಸ್.ಎಂ.ಕೃಷ್ಣ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹೌದು. ಕೇಂದ್ರದ ಮಾಜಿ ಮಂತ್ರಿಗಳು ಹೌದು. ಅವರ ಜನ್ಮದಿನದ ಈ ದಿನದಂದು ನನ್ನ ಭಾವಪೂರ್ಣ ನಮನಗಳು. ಸಜ್ಜನಿಕೆಯ ಸಾಕಾರಮೂರ್ತಿ ಅವರ ನಡೆನುಡಿ, ಆಡಳಿತ ಎಲ್ಲರಿಗೂ ಪ್ರೇರಣೆಯಾಗಿದೆ, ಶಕ್ತಿ ತುಂಬಿದೆ ಎಂದು ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+