ಕೆಂಪೇಗೌಡ ಏರ್‌ಪೋರ್ಟ್‌ಲ್ಲಿ ಕೊರಿಯಾ ಪ್ರಜೆಯಿಂದ ಅಧಿಕಾರಿ ಮೇಲೆ ಹಲ್ಲೆ
ಬೆಂಗಳೂರು, ಡಿಸೆಂಬರ್ 20: ಕ್ಷುಲ್ಲಕ ಕಾರಣಕ್ಕೆ ಏರ್‌ಪೋರ್ಟ್ ವಲಯ ಅಧಿಕಾರಿ ಮೇಲೆ ದಕ್ಷಿಣ ಕೊರಿಯಾದ ಪ್ರಜೆಯೊಬ್ಬ ಹಲ್ಲೆ ನಡೆಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹೊರಗೆ ಕಳುಹಿಸದೆ ಸುಮಾರು ಮೂರು ತಾಸು ಕೂರಿಸಿದ್ದ ಕಾರಣ ಕೋಪಗೊಂಡ ದಕ್ಷಿಣ ಕೊರಿಯಾದ ಪ್ರಜೆ ಏರ್‌ಪೋರ್ಟ್ ವಲಯ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾನೆ. ಆತನನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಸಿಯೋಗಾನ್ ಪಾರ್ಕ್ ಬಂಧಿತ ಆರೋಪಿ, ವಿಮಾನ ನಿಲ್ದಾಣದ ವಲಯ ಅಧಿಕಾರಿ ಸೈನಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾನೆ. ಕೈಎಗೆ ಸಂಜೆ 7.30ರ ಸುಮಾರಿಗೆ ಬಂದಿಳಿದಿದ್ದ ಆರೋಪಿ ನಿಲ್ದಾಣದಿಂದ ಹೊರಗೆ ಬರುತ್ತಿದ್ದ, ಅವರನ್ನು ತಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ನಿಗದಿತ ಶುಲ್ಕ ಪಾವತಿಸಿ ವೀಸಾವನ್ನು ತೆಗದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆರೋಪಿ ಶುಲ್ಕ ಪಾವತಿಗಾಗಿ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದ ಕಾರ್ಡ್ ಕೆಲಸ ಮಾಡಿರಲಿಲ್ಲ.
ವಿಮಾನ ನಿಲ್ದಾಣದಿಂದ ಹೊರಗೆ ಹೋಗಿ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿದ್ದ, ಆದರೆ ರಾತ್ರಿ 11ರವರೆಗೂ ಆತನನ್ನು ವಿಮಾನ ನಿಲ್ದಾಣದಿಂದ ಹೊರಗಡೆ ಹೋಗಲು ಬಿಟ್ಟಿರಲಿಲ್ಲ ಇದಕ್ಕೆ ಕೋಪಗೊಂಡ ಆತ ವಲಯ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾನೆ.












Click it and Unblock the Notifications