ಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣದ ಒಂದು ಪ್ರವೇಶದ್ವಾರ ಕೆಡವಲು ಸಿದ್ಧತೆ

ಬೆಂಗಳೂರು, ಜೂನ್ 27: ಆರ್‌ವಿ ರಸ್ತೆಯ ನಮ್ಮ ಮೆಟ್ರೋ ನಿಲ್ದಾಣದಲ್ಲಿರುವ ಎರಡು ದ್ವಾರಗಳ ಪೈಕಿ ಒಂದು ದ್ವಾರವನ್ನು ಒಂದು ತಿಂಗಳೊಳಗಾಗಿ ಕೆಡವಲಾಗುತ್ತಿದೆ.

ಆರ್‌ವಿ ರಸ್ತೆ ನಿಲ್ದಾಣದಲ್ಲಿ ಹಳದಿ ಮಾರ್ಗದ ಮೆಟ್ರೋ ಯೋಜನೆ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಬರುವ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತಿದೆ ಹೀಗಾಗಿ ಈಗಾಗಲೇ ಒಂದು ದ್ವಾರವನ್ನು ಕೆಡವಲಾಗುತ್ತಿದೆ.

ಬಿಎಂಆರ್‌ಸಿಎಲ್ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ತೆರಳುವ ನಿಲ್ದಾಣದಲ್ಲಿ ಈಗಿರುವ ನಿಲ್ದಾಣವನ್ನೇ ವಿಸ್ತರಿಸಲು ಮುಂದಾಗಿದೆ. ಅದರೊಂದಿಗೆ ವೆಚ್ಚ ಕೂಡ ಕಡಿಮೆಯಾಗಲಿದೆ. ಕಾಮಗಾರಿಯೂ ಬೇಗ ಮುಗಿಯಲಿದೆ.ಆರ್‌ವಿ ರಸ್ತೆಯಿಂದ ಸಿಲ್ಕ್‌ ಬೋರ್ಡ್‌ ಹಳದಿ ಮಾರ್ಗ 2021ಕ್ಕೆ ಮುಕ್ತಾಯಗೊಳ್ಳಲಿದೆ.

RV road metro station one entrance will be demolished

ಪ್ರತಿನಿತ್ಯವೂ 5 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ಮೆಟ್ರೋ ನಿಲ್ದಾಣದ ಮೂಲಕ ಸಂಚರಿಸುತ್ತಿದ್ದರು. ಹಸಿರು ಮಾರ್ಗ 2017ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ ಬಂದ್ ಆಗುವುದರಿಂದ ಪ್ರಯಾಣಿಕರು ಜಯನಗರ ಅಥವಾ ಬನಶಂಕರಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೆಟ್ರೋ ಹತ್ತಬೇಕಿದೆ.

ಆರ್‌ವಿ ರಸ್ತೆ ನಿಲ್ದಾಣದಲ್ಲಿ ಇಂಟರ್‌ಚೇಂಜ್ ನಿಲ್ದಾಣದ ಕಾಮಗಾರಿ ನಡೆಯುವ ಕಾರಣ ಈಗಿರುವ ಮೆಟ್ರೋ ನಿಲ್ದಾಣವನ್ನು ಅರ್ಧ ಕೆಡವಿ ಹೊಸದಾಗಿ ನಿಲ್ದಾಣ ನಿರ್ಮಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+