ಜಲಮಂಡಳಿ ನೌಕರರ ಸಂಘದ ಚುನಾವಣೆಯಲ್ಲಿ ರುದ್ರೇಗೌಡ ತಂಡಕ್ಕೆ ಜಯ
ಬೆಂಗಳೂರು, ಅಕ್ಟೋಬರ್ 7: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ರುದ್ರೇಗೌಡ ನೇತೃತ್ವದಲ್ಲಿ ಉದಯ ಸೂರ್ಯ ತಂಡದ ಎಲ್ಲರೂ ಜಯ ಸಾಧಿಸಿದ್ದಾರೆ. ಕಳೆದ ಅವಧಿಯಲ್ಲಿ ಸೋಲನುಭವಿಸಿದ್ದ ರುದ್ರೇಗೌಡ ಅವರು ಈ ಬಾರಿ ಸುಲಭವಾದ ಜಯ ದಾಖಲಿಸಿದ್ದಾರೆ.
ಜಲಮಂಡಳಿ ನೌಕರರ ಅನುಕೂಲದ ಸಲುವಾಗಿ ಹಲವು ಯೋಜನೆಗಳ ಬಗ್ಗೆ ಅವರು ಈಗಾಗಲೇ ಪ್ರಸ್ತಾವ ಮಾಡಿದ್ದಾರೆ. ಅದರಲ್ಲೂ ವೇತನ ಪರಿಷ್ಕರಣೆ, ಸಿಬ್ಬಂದಿ ನೇಮಕಾತಿ ಹಾಗೂ ಪಿಂಚಣಿ ನಿಧಿ ಸ್ಥಾಪನೆ ಪ್ರಮುಖವಾದವು. ನೌಕರರ ಸಂಘದಲ್ಲಿ ಜಯ ಗಳಿಸಿದವರ ಹೆಸರು, ಹುದ್ದೆ ಹಾಗೂ ಪಡೆದ ಮತಗಳ ವಿವರ ಇಂತಿದೆ.

ರುದ್ರೇಗೌಡ- ಅಧ್ಯಕ್ಷ 1194
ಎಸ್.ಜಿ.ಮುರಳಿ- ಉಪಾಧ್ಯಕ್ಷ 1223
ಎ.ಗೋವಿಂದರಾಜು- ಪ್ರಧಾನ ಕಾರ್ಯದರ್ಶಿ 1150
ಕೂಡಲ ಸಂಗಪ್ಪ- ಜಂಟಿ ಕಾರ್ಯದರ್ಶಿ 1181
ಎಚ್.ಬೈಲಾಂಜನೇಯ- ಸಂಘಟನಾ ಕಾರ್ಯದರ್ಶಿ 1253
ಎಸ್.ರವಿಚಂದ್ರ- ಖಜಾಂಚಿ 1229
ಕಾರ್ಯಕಾರಿ ಸಮಿತಿ ಸದಸ್ಯರ ವಿವರ:
ಟಿ.ಭರತ್ ಕುಮಾರ್ 1192
ಎಸ್.ಸಿ.ಚಂದ್ರಮೋಹನ್ 1201
ಗಿರಿಗೌಡ 1153
ಎಸ್.ಗೋವರ್ಧನ್ 1185
ಜಿ.ಮಹೇಂದ್ರ ರಾಜು 1157
ಬಿ.ಮಹೇಶ್ 1144
ಮುನಿರೆಡ್ಡಿ1173
ಸಿ.ಪ್ರಶಾಂತ್ 1180
ರಾಮಲಿಂಗ 1141
ಸಿ.ರಮೇಶ್ 1149
ಸಿ.ರವಿಕುಮಾರ್ 1157
ಎಚ್.ರೂಪಾ 1168
ಬಿ.ಸಂದೀಪ್ 1119
ಎಚ್.ಆರ್.ತೇಜಸ್ ಕುಮಾರ್ 1169
ಜಿ.ವರದರಾಯಸ್ವಾಮಿ 1172












Click it and Unblock the Notifications