ರಾಮ್ ಮಾಧವ್ ಬಿಜೆಪಿಯಿಂದ ಆರ್‌ಎಸ್‌ಎಸ್‌ಗೆ ವಾಪಸ್
ಬೆಂಗಳೂರು, ಮಾರ್ಚ್ 21: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ್ ಮಾಧವ್ ಅವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. 2014ರಿಂದ ಅವರು ಬಿಜೆಪಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಬೆಂಗಳೂರು ನಗರದ ಹೊರವಲಯದ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ರಾಮ್ ಮಾಧವ್ ಅವರಿಗೆ ಅಖಿಲ ಭಾರತ ಕಾರ್ಯಕಾರಣಿ ಸದಸ್ಯ ಸ್ಥಾನ ನೀಡಲಾಗಿದೆ.
ಆರೆಸ್ಸೆಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ
ಆರ್‌ಎಸ್‌ಎಸ್ ಮೂಲಕ ಸಮಾಜ ಸೇವೆ ಆರಂಭಿಸಿದ್ದ ರಾಮ್ ಮಾಧವ್ ಅವರನ್ನು 2014ರಲ್ಲಿ ಬಿಜೆಪಿಗೆ ಕಳಿಸಲಾಗಿತ್ತು. ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ ನಿಧನ
ಶನಿವಾರ ನಡೆದ ಇದೇ ಸಭೆಯಲ್ಲಿ ಶಿವಮೊಗ್ಗದ ಸೊರಬ ಮೂಲದ ದತ್ತಾತ್ರೇಯ ಹೊಸಬಾಳೆ ಅವರನ್ನು ಆರ್‌ಎಸ್ಎಸ್‌ನ ಸರಕಾರ್ಯವಾಹರಾಗಿ ನೇಮಕ ಮಾಡಲಾಗಿದೆ. ಅವರು ಇಷ್ಟು ದಿನ ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹರಾಗಿದ್ದರು.
ಕಾಳಹಸ್ತಿ ದೇಗುಲ ಸ್ವಾಮಿಗೆ ನಾಮ ಹಾಕಿದ ನಕಲಿ ಆರ್‌ಎಸ್ಎಸ್ ಲೀಡರ್!
ಇದೇ ಸಭೆಯಲ್ಲಿ ಸುನೀಲ್ ಅಂಬೇಡ್ಕರ್‌ರನ್ನು ಅಖಿಲ ಭಾರತ ಪ್ರಚಾರ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅಲೋಕ್ ಅವರನ್ನು ಅಖಿಲ ಭಾರತ್ ಪ್ರಚಾರ್ ಸಹ ಮುಖ್ಯಸ್ಥರಾಗಿ ನೇಮಿಸಲಾಗಿದೆ.