ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೆಸ್ಸೆಸ್: ಉನ್ನತಮಟ್ಟದ ಮಹತ್ವದ ಸಭೆ ಮಾರ್ಚ್ 7ರಿಂದ

By Srinath
|
Google Oneindia Kannada News

ಬೆಂಗಳೂರು, ಮಾರ್ಚ್4- ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಉನ್ನತಮಟ್ಟದ, ಮಹತ್ವದ ಸಭೆ ಇದೇ ಮಾರ್ಚ್ 7ರಿಂದ ಮೂರು ದಿನಗಳ ಕಾಲ ಬೆಂಗಳೂರು ಹೆಬ್ಬಾಳದಲ್ಲಿರುವ ಥಣಿಸಂದ್ರದಲ್ಲಿ ನಡೆಯಲಿದೆ.

RSSನ ನೀತಿ ನಿರೂಪಣೆ ಜವಾಬ್ದಾರಿಯನ್ನು ನಿರ್ವಹಿಸುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ (ABPS) ಮೂರನೆಯ ವಾರ್ಷಿಕ ಮಹಾಸಭೆ ಇದಾಗಿದೆ. ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಾರ್ಚ್ 7,8 ಮತ್ತು 9ರಂದು ಈ ವಿಶೇಷ ಸಭೆ ನಡೆಯಲಿದೆ. ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ರಾವ್ ಭಾಗವತ್ ಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.

rss-akhil-bharatiy-pratinidhi-sabha-rashtrotthana-vidyakendra-banglore

ದೇಶಾದ್ಯಂತ ಇರುವ ಸಂಘದ ಶಾಖೆಗಳ ಮೂಲಕ ಆಯ್ಕೆಯಾಗಿರುವ ಪ್ರತಿನಿಧಿಗಳು, ಸಂಘದ ರಾಜ್ಯ ಮಟ್ಟದ ಹೊಣೆಗಾರಿಕೆಯ ಪದಾಧಿಕಾರಿಗಳು ಜತೆಗೆ ಸಂಘ ಪರಿವಾರದ 40ಕ್ಕೂ ಅಧಿಕ ಸಂಘಟನೆಗಳ ರಾಷ್ಟ್ರೀಯ ಸ್ತರದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಪ್ರಮುಖರೂ ಇದರಲ್ಲಿ ಭಾಗವಹಿಸಲಿದ್ದಾರೆ.

ದೇಶದ ಆಗುಹೋಗುಗಳನ್ನು ಪ್ರಭಾವಿಸುವ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ, ಸಭೆ ನಿರ್ಣಯ ಅಂಗೀಕರಿಸಲಿದೆ. ಸಮಾಜದ ನಾನಾ ಸ್ತರಗಳನ್ನು ಪ್ರತಿನಿಧಿಸಿ, ಸುಮಾರು 1400 ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
RSS Akhil Bharatiya Pratinidhi Sabha Annual meet March 7-9 at Rashtrotthana Vidyakendra Bangalore. RSS Sarasanghachalak Dr Mohan Rao Bhagwat and Sarakaryavah (General Secretary) Suresh Bhaiyyaji Joshi will chair the 3 day proceedings. RSS Sarasanghachalak Mohan Bhagwat will inaugurate the ABPS meet on March 7th, Friday at 8.30am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X