ಆರ್‌ಆರ್ ನಗರ ಉಪಚುನಾವಣೆ: ಸ್ಯಾಂಡಲ್‌ವುಡ್‌ನಿಂದ ಅಚ್ಚರಿ ಹೆಸರು

Recommended Video

      ಬಿಜೆಪಿಗೆ ಬೆಂಬಲಿಸಿದ ಮುನಿರತ್ನಗೆ ಬಂಪರ್ ಆಫರ್..?

      ಬೆಂಗಳೂರು, ಸೆಪ್ಟೆಂಬರ್ 02: ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಸ್ಯಾಂಡಲ್‌ವುಡ್‌ನಿಂದ ಅಚ್ಚರಿಹ ಹೆಸರೊಂದು ತೇಲಿ ಬಂದಿದೆ.

      ಆರ್‌ಆರ್‌ ನಗರ ಶಾಸಕರಾಗಿದ್ದ ಮುನಿರತ್ನ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಅನರ್ಹಗೊಂಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಅತ್ತಿತ್ತ ಆದಲ್ಲಿ ತಮ್ಮ ಕ್ಷೇತ್ರಕ್ಕೆ ಯಾರನ್ನು ತಮ್ಮ ಪ್ರತಿನಿಧಿಯಾಗಿ ನಿಲ್ಲಿಸುವುದು ಎಂಬ ಗೊಂದಲದಲ್ಲಿ ಅವರು ಇದ್ದಾರೆ.

      ಸುಪ್ರೀಂಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದಲ್ಲಿ ಮುನಿರತ್ನ ಅವರು ತಮ್ಮ ಆಪ್ತ ಗೆಳೆಯ, ಸಂಬಂಧಿ ರಾಕ್‌ಲೈನ್ ವೆಂಕಟೇಶ್ ಅವರಿಗೆ ರಾಜರಾಜೇಶ್ವರಿ ನಗರ ಉಪಚುನಾವಣೆಯ ಟಿಕೆಟ್ ಕೊಡಿಸಲು ನಿಶ್ಚಯಿಸಿದ್ದಾರೆ ಎನ್ನಲಾಗಿದೆ.

      ಕಾಂಗ್ರೆಸ್ ನಿಂದ ಅನರ್ಹಗೊಂಡಿರುವ ಅವರು, ಈಗಾಗಲೇ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯರುಗಳ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬಿಜೆಪಿ ಟಿಕೆಟ್ ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಆದರೆ ಸುಪ್ರೀಂಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದಲ್ಲಿ ತಮ್ಮ ಕ್ಷೇತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಅವರಿಗೆ ಟಿಕೆಟ್ ಕೊಡಿಸುವ ಇರಾದೆ ಮುನಿರತ್ನಗೆ ಇದೆಯಂತೆ.

      ರಾಕ್‌ಲೈನ್‌ಗೆ ರಾಜಕೀಯ ಅನುಭವ ಕಡಿಮೆ

      ರಾಕ್‌ಲೈನ್‌ಗೆ ರಾಜಕೀಯ ಅನುಭವ ಕಡಿಮೆ

      ಸಿನಿಮಾ ನಿರ್ಮಾಪಕರಾಗಿರುವ ರಾಕ್‌ಲೈನ್ ವೆಂಕಟೇಶ್ ಅವರ ರಾಜಕೀಯ ಅನುಭವ ದೊಡ್ಡದಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರ ಪರ ಪ್ರಚಾರ ಮಾಡಿದ್ದಾರೆ ಮತ್ತು ಚುನಾವಣೆ ರಾಜಕೀಯವನ್ನು ಹತ್ತಿರದಿಂದ ಗಮನಿಸಿದ್ದಾರೆ ಬಿಟ್ಟರೆ ಹೆಚ್ಚಿನ ರಾಜಕೀಯ ಅನುಭವ ಅವರಿಗಿಲ್ಲ.

      ಆರ್.ಅಶೋಕ್‌ಗೆ ದೂರು ನೀಡಿದ್ದ ಮುನಿರತ್ನ

      ಆರ್.ಅಶೋಕ್‌ಗೆ ದೂರು ನೀಡಿದ್ದ ಮುನಿರತ್ನ

      ಆದರೆ ಆರ್‌ಆರ್‌ ನಗರ ಬಿಜೆಪಿಯಲ್ಲಿ ಈಗಾಗಲೇ ಮುನಿರತ್ನ ವಿರುದ್ಧ ಬಂಡಾಯ ಪ್ರಾರಂಭವಾಗಿದೆ. ಮುನಿರತ್ನ ಅವರನ್ನು ಸ್ಥಳೀಯ ಬಿಜೆಪಿ ನಾಯಕರು ಹತ್ತಿರ ಸೇರಿಸುತ್ತಿಲ್ಲ. ಇದೇ ವಿಷಯವಾಗಿ ಇತ್ತೀಚೆಗಷ್ಟೆ ಆರ್.ಅಶೋಕ್‌ಗೆ ಮುನಿರತ್ನ ದೂರು ನೀಡಿದ್ದರು. ಇದರ ಫಲವಾಗಿ ಒಬ್ಬ ಬಿಜೆಪಿ ಮುಖಂಡನನ್ನು ಪಕ್ಷದಿಂದ ಉಚ್ಚಾಟನೆ ಸಹ ಮಾಡಲಾಯಿತು. ಆದರೆ ಆ ಉಚ್ಚಾಟನೆ ಆದೇಶವನ್ನು ರದ್ದುಗೊಳಿಸಲಾಯಿತು.

      ಮುನಿರತ್ನ ಗೆ ಬಿಜೆಪಿಯಲ್ಲಿಯೇ ವಿರೋಧ

      ಮುನಿರತ್ನ ಗೆ ಬಿಜೆಪಿಯಲ್ಲಿಯೇ ವಿರೋಧ

      ಮುನಿರತ್ನಗೆ ಉಪಚುನಾವಣೆ ಟಿಕೆಟ್ ಕೊಡಬಾರದು ಎಂದು ಬಿಜೆಪಿಯಲ್ಲಿಯೇ ದ್ವನಿ ಎದ್ದಿದ್ದು, ಇಂತಹಾ ಸಮಯದಲ್ಲಿ ಮುನಿರತ್ನ ಅವರು ತಮ್ಮ ಬದಲಿಗೆ ಮತ್ತೊಬ್ಬರಿಗೆ ಟಿಕೆಟ್ ಕೊಡಿಸಲು ಮಾಡುವ ಪ್ರಯತ್ನ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂದು ಕಾದು ನೋಡಬೇಕಿದೆ.

      ಆರ್‌ಆರ್‌ ನಗರ ಕ್ಷೇತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿ

      ಆರ್‌ಆರ್‌ ನಗರ ಕ್ಷೇತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿ

      ಆರ್‌ಆರ್‌ ನಗರ ಕ್ಷೇತ್ರದ ಉಪಚುನಾವಣೆಗೆ ತಮಗೆ ಟಿಕೆಟ್ ನೀಡಬೇಕು ಎಂದು ಈಗಾಗಲೇ ಬಿಜೆಪಿಯ ಮುನಿರಾಜು ಗೌಡ ಬೇಡಿಕೆ ಇಟ್ಟಿದ್ದಾರೆ. ಕ್ಷೇತ್ರದ ಬಿಜೆಪಿ ಮುಖಂಡರು ಸಹ ಮುನಿರಾಜು ಗೌಡ ಪರವಾಗಿಯೇ ಇದ್ದಾರೆ. ಮುನಿರಾಜು ಗೌಡ ಅವರು ಕಳೆದ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಸೋಲುಂಡಿದ್ದಾರೆ. ಮುನಿರಾಜು ಗೌಡ, ಬಿ.ಎಲ್.ಸಂತೋಶ್‌ ಅವರಿಗೆ ಆಪ್ತರು ಎಂಬ ಸುದ್ದಿಯೂ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+