ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ: ರಸ್ತೆ ನಿರ್ಮಾಣವಲ್ಲ, ಕೆರೆಯ ಕಸ ಮತ್ತು ಹೂಳು ತೆಗೆಯುವ ಕೆಲಸ ಎಂದ ಬಿಬಿಎಂಪಿ
ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳಿಗೆ ಸಹಾಯ ಮಾಡಲು ಬಿಬಿಎಂಪಿಯು ಕೆರೆಯ ಮೂಲಕ 25 ಅಡಿ ಅಗಲದ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ
ಬೆಂಗಳೂರು, ಮಾರ್ಚ್. 22: ರಾಜರಾಜೇಶ್ವರಿ ನಗರದ ಹೊಸಕೆರೆಹಳ್ಳಿ ಕೆರೆಯ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ, ರಸ್ತೆ ನಿರ್ಮಾಣ ಮಾಡುತ್ತಿಲ್ಲ, ಕೆರೆಯ ಪುನಶ್ಚೇತನ ಯೋಜನೆ ನಡೆಯುತ್ತಿದೆ ಎಂದಿದೆ.
ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಚಿತ್ರ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಬಳಿಕ ಹೇಳಿಕೆ ನೀಡಿರುವ ಬಿಬಿಎಂಪಿ, ಕೆರೆಯ ಹೂಳು ತೆಗೆಯಲು ವಾಹನಗಳ ಓಡಾಟಕ್ಕೆ ಉಪಯೋಗವಾಗಲಿ ಎಂದು ತಾತ್ಕಾಲಿಕ ಮಣ್ಣಿನ ದಿಬ್ಬಗಳನ್ನು ರಚಿಸಲಾಗಿದೆ. ಹೂಳು ತೆಗೆದ ಬಳಿಕ ಆವರಣದಲ್ಲಿರುವ ತಾತ್ಕಾಲಿಕ ಮಣ್ಣಿನ ಗುಡ್ಡವನ್ನು ತೆಗೆಯಲಾಗುವುದು ಎಂದು ತಿಳಿಸಿದೆ.

"ಬಿಬಿಎಂಪಿಯು ಕೆರೆಯ ಮೇಲೆ 25 ಅಡಿ ಅಗಲದ ಮಣ್ಣಿನ ರಸ್ತೆಯನ್ನು ಹಾಕಿದ್ದು, ಕೆರೆಯ ಹೂಳು ತೆಗೆಯಲು ಮಾಡಲು ವಾಹನಗಳನ್ನು ಚಲಿಸಲು ಬಳಸಲಾಗುತ್ತಿದೆ. 'ಕೆರೆಯ ಆವರಣದೊಳಗೆ ಕಂಡುಬರುವ ಮಣ್ಣಿನ ಗುಡ್ಡವನ್ನು ವಾಹನಗಳು ಒಳಗೆ ಚಲಿಸಲು ನಿರ್ಮಿಸಲಾಗಿದೆ. ಕೆರೆಯ ಹೂಳು ತೆಗೆಯಲು ಈ ವಾಹನಗಳನ್ನು ಬಳಸಲಾಗುವುದು. ಹೂಳು ತೆಗೆದ ಬಳಿಕ ಆವರಣದಲ್ಲಿರುವ ತಾತ್ಕಾಲಿಕ ಮಣ್ಣಿನ ಗುಡ್ಡವನ್ನು ತೆಗೆಯಲಾಗುವುದು. ಕೆರೆಯ ಮೇಲೆ ಯಾವುದೇ ರಸ್ತೆ ನಿರ್ಮಾಣ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ" ಎಂದು ಬಿಬಿಎಂಪಿಯ (ಕೆರೆ ವಿಭಾಗ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊಸಕೆರೆಹಳ್ಳಿ ಕೆರೆಯ ಮಧ್ಯದಲ್ಲಿ ನೂರಾರು ಟ್ರಕ್‌ಗಳ ಮಣ್ಣು ಸುರಿಯಲಾಗಿದೆ ಎಂಬ ಆರೋಪ ಕೇಳಿ ಬಂದ ಒಂದು ದಿನದ ನಂತರ, ಕೆರೆಯ ಮೂಲಕ ರಸ್ತೆ ನಿರ್ಮಿಸುತ್ತಿರುವುದನ್ನು ಬಿಬಿಎಂಪಿ ಸಾರ್ವಜನಿಕವಾಗಿ ನಿರಾಕರಿಸಿದೆ. ಬಿಬಿಎಂಪಿಯು ನೈರುತ್ಯ ಬೆಂಗಳೂರಿನಲ್ಲಿರುವ ಕೆರೆಯ ಕಸ ಮತ್ತು ಹೂಳು ತೆಗೆಯಲು ತಾತ್ಕಾಲಿಕ ಮಣ್ಣಿನ ದಿಬ್ಬಗಳನ್ನು ಮಾತ್ರ ರಚಿಸುತ್ತಿದೆ ಎಂದು ಸ್ಥಳದಲ್ಲಿ ಪೋಸ್ಟರ್ ಹಾಕಿದೆ.

ಹೊಸಕೆರೆಹಳ್ಳಿ ಕೆರೆಯಿಂದ ಕೆರೆಯೊಳಗೆ ಶಾಶ್ವತ ರಸ್ತೆ ನಿರ್ಮಿಸುವುದಿಲ್ಲ. ಕಸ ಮತ್ತು ಹೂಳು ತೆಗೆಯಲು ಟಿಪ್ಪರ್‌ಗಳು ಮತ್ತು ಯಂತ್ರಗಳ ಸಂಚಾರಕ್ಕೆ ತಾತ್ಕಾಲಿಕ ಮಣ್ಣಿನ ಗುಡ್ಡಗಳನ್ನು ಮಾತ್ರ ಸಿದ್ಧಪಡಿಸಲಾಗುತ್ತಿದೆ.ಹೂಳು ತೆಗೆದ ನಂತರ ತಾತ್ಕಾಲಿಕ ಮಣ್ಣಿನ ದಿಬ್ಬವನ್ನು ತೆಗೆಯಲಾಗುವುದು ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಸ್ಥಳೀಯ ಪ್ರೀಮಿಯಂ ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳಿಗೆ ಸಹಾಯ ಮಾಡಲು ಬಿಬಿಎಂಪಿಯು ಕೆರೆಯ ಮೂಲಕ 25 ಅಡಿ ಅಗಲದ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪೋಸ್ಟರ್ ಅವರನ್ನು ಗೊಂದಲಕ್ಕೀಡು ಮಾಡುವ ಉದ್ದೇಶವನ್ನು ಹೊಂದಿದೆ. ಪೋಸ್ಟರ್ ಸತ್ಯವನ್ನು "ಮರೆಮಾಡುವ" ಪ್ರಯತ್ನವಾಗಿದೆ. ಕೆರೆಯ ಹೂಳು ತೆಗೆಯಲು ಅದರೊಳಗೆ ಚಲಿಸುವ ಟ್ರಕ್‌ಗಳಿಗೆ ರಸ್ತೆಯಂತಹ ತಾತ್ಕಾಲಿಕ ಬಂಡ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕೆರೆಯ ಹೂಳು ತೆಗೆಯಲು ಅಥವಾ ಜೌಗು ಪ್ರದೇಶಗಳನ್ನು ನಿರ್ಮಿಸಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಕೆಟಿಸಿಡಿಎ) ಬಿಬಿಎಂಪಿ ಕಡ್ಡಾಯವಾಗಿ ಪೂರ್ವಾನುಮತಿಯನ್ನೂ ಪಡೆದಿರಲಿಲ್ಲ. ಕೆಟಿಸಿಡಿಎ ಅನುಮೋದನೆಯಿಲ್ಲದೆ ಕೆರೆಗೆ ಸಂಬಂಧಿಸಿದ ಯಾವುದೇ ಕಾಮಗಾರಿ, ನೀರು ತೆಗೆಯುವುದು ಅಥವಾ ಹೂಳು ತೆಗೆಯುವುದು ಸೇರಿದಂತೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ.
ಬೆಂಗಳೂರಿನ 36 ಕೆರೆಗಳ ಪುನರುಜ್ಜೀವನಕ್ಕಾಗಿ ಬಿಬಿಎಂಪಿ ಇದುವರೆಗೆ ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ಸಲ್ಲಿಸಿದೆ. ಆದರೆ, ಅವುಗಳಲ್ಲಿ ಹೊಸಕೆರೆಹಳ್ಳಿ ಕೆರೆ ಖಂಡಿತವಾಗಿಯೂ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ಪುನಃಸ್ಥಾಪನೆ ಕಾಮಗಾರಿಗೆ ಬಿಬಿಎಂಪಿ ಅನುಮತಿ ಪಡೆದಿಲ್ಲ ಎಂದು ಕರ್ನಾಟಕ ಟ್ಯಾಂಕ್ ಸಂರಕ್ಷಣಾ ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬೆಂಗಳೂರಿನ ಹಳೆಯ ಕೆರೆಗಳಲ್ಲೊಂದಾದ ಹೊಸಕೆರೆಹಳ್ಳಿಯ ಕೆರೆಯ ಮಧ್ಯೆ BBMP ಅಕ್ರಮ ರಸ್ತೆನಿರ್ಮಿಸುತ್ತಿದೆ.ಇದುಅಕ್ಷಮ್ಯ. ಅಪಾರ್ಟ್ಮೆಂಟೊಂದರ ಮೌಲ್ಯ ಹೆಚ್ಚಿಸಲು ಈ ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕ್ಷೇತ್ರದ ಕೆರೆಯನ್ನು ಕಾಪಾಡಬೇಕಾದ ಶಾಸಕ @MunirathnaMLA ಯಾವುದೊ ಕಾಲ್ಪನಿಕ ವ್ಯಕ್ತಿಗಳ ಹಿಂದೆ ಬಿದ್ದಿದ್ದಾರೆ.1/3 pic.twitter.com/dioNkYIi5I
— Janata Dal Secular (@JanataDal_S) March 21, 2023
ಯಾವುದೇ ಕೆರೆ ಅಭಿವೃದ್ಧಿ ಕಾಮಗಾರಿಗೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಕೆಟಿಸಿಡಿಎ ತೆರವುಗೊಳಿಸಬೇಕಾಗಿದೆ. ''ಬಿಬಿಎಂಪಿ ನಮ್ಮ ಅನುಮತಿ ತೆಗೆದುಕೊಂಡಿಲ್ಲ. ನಮ್ಮ ತಾಂತ್ರಿಕ ತಂಡವು ಕೆಹೊಸಕೆರೆಹಳ್ಳಿ ರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲಿದೆ ಎಂದು ಕೆಟಿಸಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾರ್ವಜನಿಕರನ್ನು ಮೂರ್ಖರನ್ನಾಗಿಸಲು ಬಿಬಿಎಂಪಿ ಯತ್ನಿಸುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೆರೆಯ ಮಧ್ಯದಲ್ಲಿ ರದ್ತೆ ನಿರ್ಮಾಣ ವಿಷಯಕ್ಕೆ ಜೆಡಿಎಸ್ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. "ಬೆಂಗಳೂರಿನ ಹಳೆಯ ಕೆರೆಗಳಲ್ಲೊಂದಾದ ಹೊಸಕೆರೆಹಳ್ಳಿಯ ಕೆರೆಯ ಮಧ್ಯೆ ಬಿಬಿಎಂಪಿ ಅಕ್ರಮ ರಸ್ತೆನಿರ್ಮಿಸುತ್ತಿದೆ. ಇದುಅಕ್ಷಮ್ಯ. ಅಪಾರ್ಟ್ಮೆಂಟೊಂದರ ಮೌಲ್ಯ ಹೆಚ್ಚಿಸಲು ಈ ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕ್ಷೇತ್ರದ ಕೆರೆಯನ್ನು ಕಾಪಾಡಬೇಕಾದ ಶಾಸಕ ಮುನಿರತ್ನ ಯಾವುದೊ ಕಾಲ್ಪನಿಕ ವ್ಯಕ್ತಿಗಳ ಹಿಂದೆ ಬಿದ್ದಿದ್ದಾರೆ" ಎಂದು ಕಿಡಿಕಾರಿದೆ.
"ಕೆರೆಗಳು ನಗರದ ಜೀವಸೆಳೆ, ಅದನ್ನು ರಕ್ಷಿಸಬೇಕೆ ವಿನಃ ಹಾಳುಗೆಡವುದಲ್ಲ. ಕೆರೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆ, ಆದರೆ ಕೆರೆಯಿನ್ನೂ ದುರ್ನಾತ ಬೀರುತ್ತಿದೆ. ಕೆರೆಗೆ ಈಗಾಗಲೆ ಖರ್ಚು ಮಾಡಲಾದ ಹಣವನ್ನು ಏನು ಮಾಡಲಾಗಿದೆ ಎಂದು ಶಾಸಕ ಮುನಿರತ್ನ ಹೇಳಬೇಕಾಗಿದೆ. ಕೆರೆ ಮಧ್ಯೆ ರಸ್ತೆ ನಿರ್ಮಿಸಲು ಬಿಬಿಎಂಪಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಅನುಮೋದನೆ ಕೂಡಾ ಪಡೆದಿಲ್ಲ ಎಂಬ ವರದಿಯಿದೆ. ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರೇ ಕಮಿಷನ್ ದಂಧೆ ಬಿಟ್ಟು ಇತ್ತ ಕಡೆ ತಲೆ ಹಾಕಿ. ಕಾನೂನು ಮುರಿದು ಕರೆ ಮಧ್ಯೆ ರಸ್ತೆ ನಿರ್ಮಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ" ಎಂದು ಒತ್ತಾಯಿಸಿದೆ.












Click it and Unblock the Notifications