ಜನ ಸಂಪರ್ಕಕ್ಕೆ ವೆಬ್ ಸೈಟ್ ಆರಂಭಿಸಿದ ರಿಜ್ವಾನ್
ಬೆಂಗಳೂರು, ಏ. 5 : ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಚುನಾವಣಾ ಪ್ರಚಾರಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಮತದಾರರ ನಿರಂತರ ಸಂಪರ್ಕಕ್ಕೆ ಅನುಕೂಲವಾಗುವಂತೆ ವೆಬ್ ಸೈಟ್ ಆರಂಭಿಸಿದ್ದಾರೆ.
ಶುಕ್ರವಾರ ಪ್ರೆಸ್ ಕ್ಲಬ್ ನಲ್ಲಿ ಸಚಿವ ರೋಷನ್ ಬೇಗ್, ರಿಜ್ವಾನ್ ಅರ್ಷದ್ ಅವರ ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬಿಜೆಪಿ ಆಂತರಿಕ ಜಗಳದಿಂದ ಬೆಂಗಳೂರು ಅಭಿವೃದ್ಧಿಯನ್ನು ಮರೆತು ಹೋಗಿದೆ ಎಂದು ವ್ಯಂಗ್ಯವಾಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಿಜ್ವಾನ್ ಅರ್ಷದ್, ಸಂಸದನಾಗಿ ಆರಿಸಿ ಬಂದರೆ, ನಗರದ ಅಭಿವೃದ್ಧಿಗಾಗಿ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಒಳಗೊಂಡ ವಿಶೇಷ ಸಮಿತಿ ರಚಿಸಲಾಗುವುದು ಎಂದರು. ಚಿತ್ರಗಳಲ್ಲಿ ನೋಡಿ ವೆಬ್ ಸೈಟ್ ಉದ್ಘಾಟನೆ

ರಿಜ್ವಾನ್ ಅರ್ಷದ್ ವೆಬ್ ಸೈಟ್
ಮತದಾರರ ಜೊತೆ ನಿರಂತರ ಸಂಪರ್ಕಕ್ಕಾಗಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನೂತನ ವೆಬ್ ಸೈಟ್ ಆರಂಭಿಸಿದ್ದಾರೆ.

ನಾನು ಸಾಮಾನ್ಯ ಮನುಷ್ಯ
ಮಾಧ್ಯಮಗಳೊಂದಿಗೆ ಮಾತನಾಡಿದ ರಿಜ್ವಾನ್ ಅರ್ಷದ್, ಬಸ್ ದಿನವಾದ ಶುಕ್ರವಾರ ಬಿಎಂಟಿಸಿ ಬಸ್ಸಿನಲ್ಲೇ ಸಂಚರಿಸಿ ಮತ ಹೇಳಿದ್ದೇನೆ. ಬೆಂಗಳೂರಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.

ಹೀಗಿದೆ ವೆಬ್ ಸೈಟ್
ನೂತನ ವೆಬ್ ಸೈಟ್ ನಲ್ಲಿ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ನನಗಿರುವ ಪರಿಕಲ್ಪನೆಯ ಮಾಹಿತಿಯನ್ನು ನೀಡಲಾಗಿದೆ. ಯುವಕರು ವೆಬ್ ಸೈಟ್ ಮೂಲಕ ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ಚುನಾವಣೆ ನಂತರವೂ ಈ ವೆಬ್ ಸೈಟ್ ಕಾರ್ಯನಿರ್ವಹಿಸಲಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದರು.

ಬೆಂಗಳೂರಿನ ಅಭಿವೃದ್ಧಿಗಾಗಿ ಮತನೀಡಿ
ನಾನು ಸಂಸದನಾಗಿ ಆರಿಸಿ ಬಂದರೆ, ನಗರದ ಅಭಿವೃದ್ಧಿಗಾಗಿ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಒಳಗೊಂಡ ವಿಶೇಷ ಸಮಿತಿ ರಚಿಸುತ್ತೇನೆ ಎಂದ ರಿಜ್ವಾನ್ ತಿಳಿಸಿದರು.


Click it and Unblock the Notifications
