ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಮಾಡಿ 82 ಲಕ್ಷ ರೂಪಾಯಿ ಸುಲಿಗೆ : ಮೂವರ ಬಂಧನ

ಬೆಂಗಳೂರು: 60 ವರ್ಷದ ನಿವೃತ್ತ ರಾಜ್ಯ ಸರ್ಕಾರಿ ನೌಕರನನ್ನು ಹನಿಟ್ರ್ಯಾಪ್ ಮಾಡಿ 82 ಲಕ್ಷ ರೂಪಾಯಿ ಸುಲಿಗೆ ಮಾಡಿದ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ರೀನಾ ಅನ್ನಮ್ಮ (40), ಸ್ನೇಹ (30) ಮತ್ತು ಸ್ನೇಹಾ ಪತಿ ಲೋಕೇಶ್ (26) ಬಂಧಿತ ಆರೋಪಿಗಳಾಗಿದ್ದಾರೆ.

ಶ್ರೀನಗರದ ನಿವಾಸಿಯೊಬ್ಬರು ಮೋಸಕ್ಕೆ ಬಲಿಯಾಗಿದ್ದಾರೆ. ನಂತರ ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಏಪ್ರಿಲ್‌ನಲ್ಲಿ ತನ್ನ ಸ್ನೇಹಿತರೊಬ್ಬರು ರೀನಾ ಅನ್ನಮ್ಮ ಎನ್ನುವ ಮಹಿಳೆಯನ್ನು ಪರಿಚಯಿಸಿದರು. ಅನ್ನಮ್ಮ ಅವರ ಐದು ವರ್ಷದ ಮಗ ಕ್ಯಾನ್ಸರ್‌ನಿಂದ ಬಳಲುತ್ತಿರುವುದರಿಂದ ಆರ್ಥಿಕವಾಗಿ ಸಹಾಯ ಮಾಡುವಂತೆ ಅವರ ಸ್ನೇಹಿತ ಮನವಿ ಮಾಡಿದ್ದರು.

 Retired Government Employee Loses Rs 82 Lakh in Extortion Scheme Involving Woman

ನರೇಶ್ ಮತ್ತು ಅನ್ನಮ್ಮ ಹೋಟೆಲ್ ಒಂದರಲ್ಲಿ ಭೇಟಿಯಾಗಿ ಅದೇ ದಿನ ಆಕೆಗೆ 5,000 ರೂಪಾಯಿ ನೀಡಿದ್ದಾರೆ. ನಂತರ ಒಂದಲ್ಲ ಒಂದು ಸಮಸ್ಯೆ ಇದೆ ಎಂದು ಹೇಳಿಕೊಂಡು ಹಲವು ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.

ಮೇ ಮೊದಲ ವಾರದಲ್ಲಿ, ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹುಸ್ಕೂರ್ ಗೇಟ್‌ನಲ್ಲಿರುವ ಹೋಟೆಲ್‌ಗೆ ದೂರುದಾರರನ್ನು ರೀನಾ ಅನ್ನಮ್ಮ ಕರೆಸಿದ್ದರು. ಹೋಟೆಲ್‌ನಲ್ಲಿ ತನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಕೇಳಿದ್ದು, ಅದಕ್ಕೆ ನಿರಾಕರಿಸಿದ್ದಾಗಿ ದೂರುದಾರರು ಹೇಳಿದ್ದಾರೆ. ಆದರೆ ಆಕೆ ಬೆದರಿಕೆ ಹಾಕುವ ಮೂಲಕ ಬಲವಂತದಿಂದ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾರೆ. ಅದೇ ಹೋಟೆಲ್‌ನಲ್ಲಿ ಇಬ್ಬರೂ ಅನೇಕ ಬಾರಿ ಸಮಯ ಕಳೆದಿರುವುದಾಗಿ ಹೇಳಿದ್ದಾರೆ.

ಯುವತಿಯ ಪರಿಚಯ; ವಿಡಿಯೊ ತೋರಿಸಿ ಬೆದರಿಕೆ

ಅಣ್ಣಮ್ಮ ತನ್ನ ಸ್ನೇಹಿತೆ ಸ್ನೇಹಾಳನ್ನು ದೂರುದಾರರಿಗೆ ಪರಿಚಯಿಸಿದಳು, ಮತ್ತು ಸ್ನೇಹಾ ಕೂಡ ಅವನಿಂದ ಹಣವನ್ನು ಪಡೆಯಲು ಪ್ರಾರಂಭಿಸಿದಳು. ಅನ್ನಮ್ಮ ಖಾಸಗಿ ಕ್ಷಣಗಳ ವಿಡಿಯೋ ಹೊಂದಿರುವುದಾಗಿ ಬೆದರಿಸಿ ಆತನಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಸ್ನೇಹಾ ಕೂಡ ಈ ವಿಡಿಯೋಗಳನ್ನು ಸಂಬಂಧಿಕರಿಗೆ ಕಳುಹಿಸುತ್ತೇವೆ ಎಂದು ಬೆದರಿಸಲು ಆರಂಭಿಸಿದ್ದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ದೂರುದಾರರಿಂದ 75 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ವಾಟ್ಸ್‌ಆ್ಯಪ್‌ನಲ್ಲಿ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಕಳುಹಿಸಿದ್ದರು. ತಂತಡ ದೂರುದಾರರು ತಮ್ಮ ಭವಿಷ್ಯ ನಿಧಿಯಿಂದ 82 ಲಕ್ಷ ರೂ.ಗಳನ್ನು ಹಿಂತೆಗೆದುಕೊಂಡು ಅದನ್ನು ಸ್ನೇಹಾ ಮತ್ತು ಅನ್ನಮ್ಮ ಅವರಿಗೆ ನೀಡಿದ್ದಾರೆ. ಸುಲಿಗೆ ಮಾಡಿದ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ದೂರುದಾರರ ಮಗಳ ಮೇಲೆ ಅತ್ಯಾಚಾರ ಮಾಡುವುದಾಗಿ ಇಬ್ಬರೂ ಬೆದರಿಕೆ ಹಾಕಿದ್ದಾರೆ.

ಮತ್ತೆ ಹಣಕ್ಕಾಗಿ ಬೇಡಿಕೆ

ಅದಾದ ಕೆಲವು ದಿನಗಳ ನಂತರ ಮಹಿಳೆಯರು ಮತ್ತೆ 42 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ಕಿರುಕುಳ ಸಹಿಸಲಾಗದೆ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಉದ್ದೇಶಪೂರ್ವಕ ಅವಮಾನದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೂವರು ಆರೋಪಿಗಳನ್ನು ಬಂಧಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 25 ಲಕ್ಷ ರೂ. ಜಪ್ತಿ ಮಾಡಿದ್ದೇವೆ. ಸುಮಾರು 300 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮೂವರೂ ಕೊಡಗಿನವರು ಎಂದು ಡಿಸಿಪಿ (ದಕ್ಷಿಣ) ಪಿ ಕೃಷ್ಣಕಾಂತ್ ತಿಳಿಸಿದ್ದಾರೆ. ಈ ಮೂವರು ಈ ಮೊದಲು ಹಲವರನ್ನು ವಂಚಿಸಿದ್ದಾರೆ ಎಂದು ಪೊಲೀಸರು ಅನುಮಾನಿಸಿದ್ದಾರೆ.

ಲೋಕೇಶ್ ಮಡಿಕೇರಿಯ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಸ್ನೇಹಾ ಒಂದು ವರ್ಷದ ಮಗುವಿನ ತಾಯಿ. ಕೆಲವು ವರ್ಷಗಳ ಹಿಂದೆ ತನ್ನ ಪತಿ ತೀರಿಕೊಂಡಿದ್ದಾನೆ ಎಂದು ಅನ್ನಮ್ಮ ಹೇಳಿಕೊಂಡಿದ್ದಾರೆ. ಆ ಬಳಿಕ ಪುರುಷರೊಂದಿಗೆ ಸ್ನೇಹ ಬೆಳೆಸಿ ಸುಲಿಗೆ ಮಾಡತೊಡಗಿದಳು. ಇಬ್ಬರು ಮಹಿಳೆಯರ ಅಪರಾಧ ಚಟುವಟಿಕೆಗಳಲ್ಲಿ ಲೋಕೇಶ್ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+