ಎಸ್‍ಎಸ್‍ಎಲ್‍ ಸಿ ಫಲಿತಾಂಶದ ಎಸ್‍ಎಂಎಸ್ ಮೊಬೈಲ್ ಗೆ ಬರಲಿದೆ!

Recommended Video

      SSLC Results 2018 : ಮೇ 7ಕ್ಕೆ ಫಲಿತಾಂಶ | ಈಗ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ ಕೂಡ ಬರಲಿದೆ | Oneindia Kannada

      ಬೆಂಗಳೂರು ಮೇ 06 : ಈ ಬಾರಿಯ ಎಸ್‍ಎಸ್‍ಎಲ್‍ ಸಿ ಪರೀಕ್ಷಾ ಫಲಿತಾಂಶವನ್ನು ರಾಜ್ಯ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೋಮವಾರ ಪ್ರಕಟಿಸಲಿದೆ. ಮೇ.23ರಿಂದ ಏಪ್ರಿಲ್ 6ರವರೆಗೆ ನಡೆದ ಎಸ್‍ಎಲ್‍ಎಲ್‍ ಸಿ ಪರೀಕ್ಷೆಯಲ್ಲಿ 8.36 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

      ರಾಜ್ಯ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲ ಪ್ರಕಾರ ಸೋಮವಾರ ಬೆಳಗ್ಗೆ 11 ಗಂಟೆಗೆ, ರಾಜ್ಯ ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಫಲಿತಾಂಶ ಬಿಡುಗಡೆ ಮಾಡುವರು.

      ಮಧ್ಯಾಹ್ನದ ವೇಳೆಗೆ ಫಲಿತಾಂಶ ಅಂತರ್ಜಾಲದಲ್ಲಿ ಪ್ರಕಟಗೊಂಡರೆ, ಮಂಗಳವಾರ ರಾಜ್ಯದ ಎಲ್ಲಾ ಫ್ರೌಡಶಾಲೆಗೆಳಲ್ಲಿ ಫಲಿತಾಂಶದ ಪಟ್ಟಿ ಪ್ರಕಟಿಸಲಾಗುವುದು.

      Results of SSLC can be found on mobile

      ಆದರೆ ಈ ಬಾರಿ ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ, ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟವಾಗುವವರೆಗೆ ಕಾಯಬೇಕಿಲ್ಲ. ಬದಲಿಗೆ ವಿದ್ಯಾರ್ಥಿಗಳ ಫಲಿತಾಂಶ ಅವರ ಮೊಬೈಲ್ ಗೆ ಸಂದೇಶ ರೂಪದಲ್ಲಿ ರವಾನೆಯಾಗಲಿದೆ.

      ವಿ ಸುಮಂಗಲ ಪ್ರಕಾರ, ಈ ಬಾರಿ ಎಸ್‍ಎಸ್‍ಎಲ್ ಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್ ಲೈನ್ ಮೂಲಕ ಸಂಗ್ರಹಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅಥವಾ ಅವರ ಪೋಷಕರ ಮೊಬೈಲ್ ನಂಬರ್ ಕೂಡಾ ಪಡೆದುಕೊಳ್ಳಲಾಗಿತ್ತು.

      ಎನ್‍ಐಸಿ ಮೂಲಕ ಅಭಿವೃದ್ಧಿ ಪಡಿಸಲಾದ ಸಾಫ್ಟ್ ವೇರ್ ಮೂಲಕ ಎಲ್ಲಾ ಮೊಬೈಲ್ ನಂಬರ್ ಗಳಿಗೆ ಆಯಾ ವಿದ್ಯಾರ್ಥಿಗಳ ಫಲಿತಾಂಶ ರವಾನೆಯಾಗಲಿದೆ. ಇದೊಂದು ಕ್ರಾಂತಿಕಾರಿ ಪ್ರಯತ್ನ. ದೇಶದಲ್ಲಿ ಫೌಢಶಾಲಾ ಹಂತದಲ್ಲಿ ಮೊಬೈಲ್ ಗೆ ನೇರವಾಗಿ ಫಲಿತಾಂಶ ರವಾನಿಸುತ್ತಿರುವ ಪ್ರಥಮ ಪ್ರಯತ್ನವಿದು ಎನ್ನುತ್ತಾರೆ ಅವರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+