ಬಿಡಿಎ ಹೊಸ ಕಟ್ಟಡ : 171 ಮರಗಳಿಗೆ ಕೊಡಲಿ ಪೆಟ್ಟು, ಸ್ಥಳೀಯರ ವಿರೋಧ

Recommended Video

      ಬಿಡಿಎ ಹೊಸ ಕಟ್ಟಡ ,ವಿರೋಧದ ನಡುವೆ 171 ಮರಗಳಿಗೆ ಕೊಡಲಿ ಪೆಟ್ಟು | Oneindia Kannada

      ಬೆಂಗಳೂರು, ಜು.26: ಇಂದಿರಾನಗರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನೂತನ ಕಟ್ಟಡ ನಿರ್ಮಿಸಲು ಮುಂದಾಗಿದ್ದು ಆ ಜಾಗದಲ್ಲಿದ್ದ171 ಮರಗಳನ್ನು ಕಡಿಯಲು ನಿರ್ಧರಿಸಿದೆ.

      ಬಿಡಿಎಯು ಇಂದಿರಾನಗರದಲ್ಲಿ 657 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ಇದಕ್ಕೆ ಸ್ಥಳೀಯರು ವಿರೋಧಿಸಿದ್ದು, ಕಟ್ಟಡ ನಿರ್ಮಾಣದ ಬಗ್ಗೆ ಆಕ್ಷೇಪವಿಲ್ಲ ಆದರೆ ಅಲ್ಲಿರುವ 171ಕ್ಕೂ ಹೆಚ್ಚು ಮರಗಳನ್ನು ಕಡಿಯಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.

      ಸ್ಥಳೀಯರಾದ ಸ್ವರ್ಣ ವೆಂಕಟರಾಮನ್‌ ಮಾತನಾಡಿ, ಬಿಡಿಎ ಕಾಂಪ್ಲೆಕ್ಸ್‌ ನವೀಕರಣವಾಗುತ್ತಿಲ್ಲ, ಬದಲಾಗಿ ಆ ಕಟ್ಟಡವನ್ನು ಬೀಳಿಸಿ ಹೊಸ ಕಟ್ಟವನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಕಟ್ಟಡ ಸುತ್ತಮುತ್ತಲಿರುವ ಮರಗಳನ್ನು ಕಡಿಯಲಾಗುತ್ತಿದೆ ಇದು ಎಲ್ಲರಿಗೂ ಬೇಸರ ತಂದಿದೆ. ಬೆಂಗಳೂರಿನಲ್ಲಿ ಇರುವ ಮರಗಳೆಲ್ಲವನ್ನು ಕಡಿದು ಇದೀಗ ಶುದ್ಧಗಾಳಿಗೂ ಪರದಾಡುವಂತಾಗಿದೆ. ಇದೀಗ ಇರುವ ಮರಗಳನ್ನೂ ಉಳಿಸಿಕೊಳ್ಳದಿದ್ದರೆ ಜೀವನ ಕಷ್ಟಕರವಾಗಲಿದೆ ಎಂದಿದ್ದಾರೆ.

      Residents oppose proposal to axe 171 trees to rebuild BDA complex

      ಕಟ್ಟಡ ಸುತ್ತಮುತ್ತಲು 70 ವರ್ಷಕ್ಕೂ ಮೇಲ್ಪಟ್ಟ ಸುಮಾರು 200 ಮರಗಳಿವೆ. ಬೇವು, ಪೀಪಲ್‌ ಟ್ರೀ, ಓಕ್‌ ಟ್ರೀ, ಆರ್ಕಿಡ್‌, ಬನ್ಯಾನ್‌, ಚಂಪಕ್‌, ತೆಂಗಿನ ಮರ ಸೇರಿದಂತೆ ಅನೇಕ ಮರಗಳಿವೆ.

      ಈಗಾಗಲೇ ಆ ಪ್ರದೇಶದಲ್ಲಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ. ಬಿಡಿಎ ಅಧಿಕಾರಿಗಳು ಹೇಳುವ ಪ್ರಕಾರ ಬಿಡಿಎ ಕಟ್ಟಡವನ್ನು ನವೀಕರಣ ಮಾಡುವುದರಲ್ಲಿ ಅರ್ಥವಿಲ್ಲ, ಅದನ್ನು ಹೊಸದಾಗಿಯೇ ನಿರ್ಮಿಸಬೇಕಿದೆ.

      ಇದೀಗ ಈ ಕಟ್ಟಡದಿಂದ ಆದಾಯ ಕಡಿಮೆ ಬರುತ್ತಿದೆ. ಇದೀಗ ಖಾಸಗಿ ಸಹಭಾಗಿತ್ವದಲ್ಲಿ 14.9 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಎರಡು ಬ್ಲಾಕ್‌ ನಿರ್ಮಿಸಲಾಗುತ್ತಿದೆ. ಆದರೆ ಹೆಚ್ಚು ಮರಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+