World Cup 2023: ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ 'ಭಾರತ ಟೀಂ' ಫೈನಲ್ ಗೆಲ್ಲುತ್ತಿತ್ತು: ಚೇತನ್ ಅಹಿಂಸಾ
ಬೆಂಗಳೂರು, ನವೆಂಬರ್ 20: ಬಹುನಿರೀಕ್ಷೆಯ ವಿಶ್ವ ಕಪ್ 2023 (World Cup 2023) ಅಂತಿಮ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರಿಗೆ ವಿಫಲವಾಗಿದ್ದಾರೆ. ಈ ಬಾರಿ ಕಪ್ ಆಸ್ಟ್ರೇಲಿಯಾ ಪಾಲಾಗಿದೆ. ಭಾರತ ಪಂದ್ಯ ಸೋತ ತಕ್ಷಣ ವಿಮರ್ಶೆ, ವಿಶ್ಲೇಷಣೆ, ಕಾರಣಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಸೋಲಿನ ಕುರಿತು ನಟ ಚೇತನ್ ಅಹಿಂಸಾ ನೀಡಿರುವ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಫೈನಲ್ ಪಂದ್ಯಕ್ಕೂ ಮುನ್ನ ಸಂಭ್ರಮಾಚರಣೆಗೆ ಸಜ್ಜಾಗಿದ್ದ ಕ್ರಿಕೆಟ್ ಅಭಿಮಾನಿಗಳು ಭಾರತ ಸೋತ ಬಳಿಕ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರತ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋಲಿಗೆ ಫಿಲ್ಡಿಂಗ್, ಬೌಲಿಂಗ್, ಪಿಚ್, ಟಾಸ್ಕ್ ಇನ್ನಿತರ ವಿಚಾರಗಳ ಬಗ್ಗೆ ಆರೋಗ್ಯಯುತ ಚರ್ಚೆ ಹಲವರು ನಡೆಸಿದ್ದಾರೆ.

ಈ ಸಾಮಾಜಿಕ ಕಾರ್ಯಕರ್ತ ಮತ್ತು ನಟ ಅಹಿಂಸಾ ಚೇತನ್ ಅವರು ತಮ್ಮ ಟ್ವೀಟ್ ನಲ್ಲಿ 'ಭಾರತೀಯ ತಂಡದ ಮೀಸಲಾತಿ ಇರಬೇಕಿತ್ತು ಎಂದು ಪೋಸ್ಟ್ ಮಾಡಿದ್ದಾರೆ. ನಾನು ಮತ್ತೆ ಹೇಳುತ್ತಿದ್ದೇನೆ. ಕ್ರಿಕೇಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ ಅನ್ನು ಗೆಲ್ಲುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಎಷ್ಟು ಪಂದ್ಯ ಗೆದ್ದಿದೆ: ನಟನಿಗೆ ಪ್ರಶ್ನೆ
ಚೇತನ್ ಅವರ ಈ ಟ್ವೀಟ್‌ಗೆ ಕ್ರಿಕೆಟ್ ಅಭಿಮಾನಿಗಳು ಕೆಂಡವಾಗಿದ್ದಾರೆ. ಅವರ ಹೇಳಿಕೆಯನ್ನು ಬಹುತೇಕರು ಖಂಡಿಸಿದ್ದಲ್ಲದೇ ಕೆಲವರು ತಿರುಗೇಟು ನೀಡಿದ್ದಾರೆ. ಸದ್ಯ ಮೀಸಲಾತಿ ಇಟ್ಟುಕೊಂಡು ಆಟವಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಎಷ್ಟು ಪಂದ್ಯಾವಳಿಯಲ್ಲಿ ಗೆದ್ದು ಬೀಗಿದೆ? ಎಂದು ಪ್ರಶ್ನಿಸಿದ್ದಾರೆ.

ದೇಶಕ್ಕಾಗಿ ಇಷ್ಟು ವರ್ಷ ಆಟವಾಡಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಭಾರತ ಕ್ರಿಕಿಟ್ ತಂಡಕ್ಕೆ ಬೆಲೆ ಇಲ್ಲವೇ. ಇಂದಿನ ಒಂದು ಸೋಲಿಗೆ ಈ ರೀತಿ ಹೇಳಿಕೆ ಸರಿಯೇ ಎಂದು ನಟನ ನಡೆಯನ್ನು ಟೀಕಿಸಿದ್ದಾರೆ.
ಕ್ರಿಕೆಟಿಗರಿಂದ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ಇಲ್ಲ: ಚೇತನ
ಇದಕ್ಕು ಮೊದಲು ಪೋಸ್ಟ್ ಮಾಡಿದ್ದ ನಟ ಚೇತನ್ ಅವರು 'ಭಾರತೀಯ ಕ್ರಿಕೇಟಿಗರು ಚೆಂಡನ್ನು ಹೊಡೆಯಬಹುದು, ಹಿಡಿಯಬಹುದು,ಎಸೆಯಬಹುದುಷ್ಟೇ, ಆದರೆ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ಏನು ನೀಡುವುದಿಲ್ಲ' ಎಂದು ಹೇಳಿದ್ದರು.
ಶತಮಾನದ ಹಿಂದೆ ಪಲ್ವಾಂಕರ್ ಬಾಲೂ ಧಾರವಾಡದ ಬೌಲರ್, ನಂಬರ್ ಒನ್ ದಲಿತ ಕ್ರಿಕೆಟಿಗರ ಕುರಿತು ಪ್ರಸ್ತಾಪಿಸಿದ ಚೇತನ್ ಭಾರತಕ್ಕೆ ಕಾಳಜಿ ವಹಿಸುವ ಕ್ರಿಕೆಟಿಗರ ಅಗತ್ಯವಿದೆ, ಹಣದ ವೈಭವವಲ್ಲ ಎಂದು ಬರೆದುಕೊಂಡಿದ್ದರು.
I repeat, India needs reservations in cricket
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) November 19, 2023
If India had cricket reservations, India would’ve easily won this #WorldCup
ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ
ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು
ಚೇತನಗೆ ತರಾಟೆ ತೆಗೆದುಕೊಂಡ ಅಭಿಮಾನಿಗಳು
ಕ್ರಿಕೆಟ್ ಕುರಿತಾದ ನಟನ ಪೋಸ್ಟ್‌ಗಳಿಗೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನೀನು ಯಾವ ಮೀಸಲಾತಿ ಬಳಸಿಕೊಂಡು ಜನ್ಮ ಪಡೆದಿದ್ದೀಯಾ? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ದೇಶದ ಕ್ರೀಡೆ ಬಗ್ಗೆ ಮಾತನಾಡಲು ನಿಮಗೇನು ಹಕ್ಕಿದೆ. ಇಲ್ಲಿನ ಅನ್ನ ತಿಂದು ಮನೆ ಮುರಿಯೋ ಕೆಲಸ ಮಾಡಬೇಡಿ. ನಿಮ್ಮ ನಡೆ ಹೀಗೆ ಮುಂದುವರಿದರೆ ದೇಶದ ಜನರೇ ಮುಖಕ್ಕೆ ಉಗಿದು ನಿನ್ನ ದೇಶದಿಂದ ಓಡಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.
ನೀವು ಎಂತೆಂತಹ ಮನೋ ರೋಗಿಗಳನ್ನು ಗುಣಪಡಿಸಿದ್ದೀರಿ. ಸಾಧ್ಯವಾದರೆ ಇವರನ್ನು ಗುಣಪಡಿಸಿ, ಏಕೆಂದರೆ ಇಂತಹ ಪ್ರತಿಭೆ ನಮ್ಮನ್ನು ಬಿಟ್ಟು ಹೋಗಬಾರದು ಎಂದು ನಿಮ್ದಾನಸ್‌ಗೆ ಟ್ಯಾಗ್ ಮಾಡಿ ಚೇತನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಮೀಸಲಾತಿ ಕ್ರಿಕೆಟ್‌ನಲ್ಲಿ ಬೇಕು ಎಂದು ಡಾ.ಬಿ.ಆರ್ ಅಂಬೇಡ್ಕರ್ ಹೇಳಿದ್ದರಾ? ಇಲ್ಲಾ ಪರಿಯಾರ್ ಹೇಳಿದ್ದರಾ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications