Republic Day Lalbagh Flower Show 2023 : ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನ ದಿನಾಂಕ ಪ್ರಕಟ
ಬೆಂಗಳೂರು, ಜನವರಿ 10: ಬೆಂಗಳೂರಿನ ಪ್ರಸಿದ್ಧ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಜನವರಿ 19 ರಿಂದ 29 ರವರೆಗೆ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲು ಸಿದ್ಧವಾಗಿದೆ.
ಇದು ವಾರ್ಷಿಕ ಪ್ರದರ್ಶನದ 213ನೇ ಆವೃತ್ತಿಯಾಗಿದ್ದು, ಲಾಲ್‌ಬಾಗ್ ಉದ್ಯಾನವನದ ಗ್ಲಾಸ್ ಹೌಸ್‌ನಲ್ಲಿ ಹೂವುಗಳನ್ನು ಅಲಂಕರಿಸಲಾಗುತ್ತದೆ. ತೀರಾ ಇತ್ತೀಚೆಗೆ ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅಂತರದ ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ಲಾಲ್‌ಬಾಗ್ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿತ್ತು.
ಲಾಲ್‌ಬಾಗ್ ಗ್ಲಾಸ್ ಹೌಸ್‌ನಲ್ಲಿ ಜನವರಿ 19ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳುವ 10 ದಿನಗಳ ಫಲಪುಷ್ಪ ಪ್ರದರ್ಶನವು ಸಾಮಾನ್ಯವಾಗಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜನಪ್ರಿಯ ಲಾಲ್‌ಬಾಗ್ ಪುಷ್ಟಪ್ರದರ್ಶನಕ್ಕೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪುಷ್ಟ ಪ್ರದರ್ಶನವನ್ನು ನೋಡಲು ಲಾಲ್‌ಬಾಗ್ ಸಂದರ್ಶಕರಿಗೆ ಪ್ರವೇಶ ಶುಲ್ಕವನ್ನು ವಿಧಿಸುತ್ತಿದೆ.

ಈ ವರ್ಷದ ಫಲಪುಷ್ಪ ಪ್ರದರ್ಶನವು ವಿವಿಧ ದೇಶಗಳ ಸಸ್ಯವರ್ಗದ ಜೊತೆಗೆ ಕರ್ನಾಟಕ ಮತ್ತು ಇತರ ಭಾರತೀಯ ರಾಜ್ಯಗಳಿಂದಲೂ ಸಹ ಅನೇಕ ವಿಶೇಷ ಫಲ ಪುಷ್ಟಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ ಎಂದು ವರದಿಗಳು ತಿಳಿಸಿವೆ. ಫಲಪುಷ್ಪ ಪ್ರದರ್ಶನದ ಸಂಘಟಕರು ಡಾರ್ಜಿಲಿಂಗ್, ಪುಣೆ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಹೂವುಗಳನ್ನು ಇಲ್ಲಿ ತಂದು ಪ್ರದರ್ಶಿಸಲಿದ್ದಾರೆ. ಜೊತೆಗೆ ಸುಮಾರು 20 ವಿವಿಧ ವಿಭಿನ್ನ ಹೂವಿನ ಜಾತಿಗಳಾದ ಸ್ಟೇಟಿಸ್, ಕ್ಯಾಲ್ಲಾ ಲಿಲ್ಲಿಗಳು ಮತ್ತು ಹೈಡ್ರೇಂಜಗಳನ್ನು ಇಲ್ಲಿ ಬಳಸಲಾಗುತ್ತದೆ.
ಲಾಲ್‌ಬಾಗ್ ಪುಷ್ಪ ಪ್ರದರ್ಶನದಲ್ಲಿ 97 ಬಗೆಯ ಹೂವುಗಳನ್ನು ಪ್ರದರ್ಶಿಸುವ ಮೂರು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳೂ ಇರುತ್ತವೆ. ಕೃಷಿಯನ್ನು ಉತ್ತೇಜಿಸಲು ತೋಟಗಾರಿಕಾ ಇಲಾಖೆಯು ಜನವರಿ 20 ಮತ್ತು 21ರಂದು ಪ್ರತ್ಯೇಕ ಪ್ರದರ್ಶನವನ್ನು ಆಯೋಜಿಸಿದೆ. ಇಲ್ಲಿ ತೋಟಗಾರಿಕೆ ಸ್ಪರ್ಧೆಯೂ ನಡೆಯಲಿದ್ದು, ಜನವರಿ 28ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಬಹುಮಾನ ವಿತರಿಸಲಾಗುವುದು. ಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಆಸಕ್ತರು ವಿವಿಧ ಸಂಪನ್ಮೂಲಗಳನ್ನು ಸಹ ಕಾಣಬಹುದಾಗಿದೆ.
ತೋಟಗಾರಿಕೆಯನ್ನು ಅಭ್ಯಾಸವಾಗಿ ಪ್ರೋತ್ಸಾಹಿಸುವ ಪ್ರಯತ್ನದ ಭಾಗವಾಗಿ ನಾವು ಮಹಿಳೆಯರು ಮತ್ತು ಮಕ್ಕಳಿಗೆ ಇಕೆಬಾನಾ ಕಲೆಯಲ್ಲಿ ತರಬೇತಿ ನೀಡಿದ್ದೇವೆ. ನಾವು ಅಲಂಕಾರಿಕ ತೋಟಗಾರಿಕೆ ಸ್ಪರ್ಧೆಗಳನ್ನು ಸಹ ನಡೆಸುತ್ತಿದ್ದೇವೆ ಮತ್ತು 150 ಕ್ಕೂ ಹೆಚ್ಚು ಹೊಸಬರಿಗೆ ಸಂಬಂಧಿಸಿದ ಪರಿಕಲ್ಪನೆಗಳಲ್ಲಿ ತರಬೇತಿ ನೀಡಿದ್ದೇವೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ ಎಂ ಜಗದೀಶ್ ಹೇಳಿದ್ದಾರೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications