ದರ್ಶನ್‌ ಪ್ರಕರಣ: ಕೊಲೆಗೂ ಮುನ್ನ ರೇಣುಕಾಸ್ವಾಮಿಯನ್ನು ಮೊದಲಿಗೆ ಕರೆದೊಯ್ದಿದ್ದು ಗೊಡೋನ್‌ಗೆ ಅಲ್ವಂತೆ.. ಮತ್ತೆಲ್ಲಿಗೆ?

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಬಂಧಿಸಲಾಗಿದ್ದು, ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳಲಾಗುತ್ತಿದೆ. ಕೊಲೆಯಾಗುವ ಮುನ್ನ ರೇಣುಕಾಸ್ವಾಮಿ ಅವರನ್ನು ಗೋಡೋನ್‌ ಕರೆದೊಯ್ದಿದ್ದರೂ ಎನ್ನಲಾಗಿತ್ತು. ಆದರೆ ಮೊದಲಿಗೆ ಕರೆದುಕೊಂಡು ಹೋಗಿದ್ದೇ ಬೇರೆ ಕಡೆ ಎಲ್ಲಿಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಇಲ್ಲಿಯವರೆಗೂ ಕೊಲೆಗೂ ಮುನ್ನ ರೇಣುಕಾಸ್ವಾಮಿಯನ್ನು ನೇರವಾಗಿ ಗೋಡೋನ್‌ ಕೆರೆದೊಯ್ಯಲಾಗಿತ್ತು ಎನ್ನಲಾಗಿತ್ತು. ಆದರೆ ಇದೀಗ ಆಶ್ಚರ್ಯ ಎಂಬಂತೆ ರೇಣುಕಾಸ್ವಾಮಿಯನ್ನು ಮೊದಲು ನಟ ದರ್ಶನ್‌ ಮನೆಗೆ ಕರೆದುಕೊಂಡು ಹೋಗಲಾಗಿದ್ದು, ಬಳಿಕ ಗೋಡೋನ್‌ ಕರೆದೊಯ್ದು ನರರಾಕ್ಷರಂತೆ ದರ್ಶನ್‌ ಗ್ಯಾಂಗ್‌ ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯೊಂದು ಹೊಬಂದಿದೆ.

Renukaswamy s was first taken to Actor Dasharn house before murder

ಗೊಡೋನ್‌ಗೆ ಕರೆದೋಯ್ದು ಈ ವೇಳೆ ರೇಣುಕಾಸ್ವಾಮಿ ಮಾಂಸ ತಿನ್ನಲ್ಲ ಅಂದರೂ ಒತ್ತಾಯವಾಗಿ ಬಿರಿಯಾನಿ ತಿನ್ನಿಸಿ ನಟ ದರ್ಶನ್‌ ಮತ್ತು ಗ್ಯಾಂಗ್‌ ಆತನ ಎದೆಗೆ ಒದ್ದು ಹಲ್ಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಇನ್ನು ಅಪಹರಿಸಿದ ಆರೋಪ ಹೊತ್ತಿರುವ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಅವರನ್ನು ಪೊಲೀಸರು ಸ್ಥಳ ಮಹಜರುಗಾಗಿ ನಿನ್ನೆ ತಡರಾತ್ರಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದರು.

ಈ ನಡುವೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಮ್ಮನನಹಳ್ಳಿ ಸೇತುವೆ ಬಳಿಯಿರುವ ಚರಂಡಿಗೆ ಶವವನ್ನು ಎಸೆಯುವಂತೆ ಆರೋಪಿಗಳಿಗೆ ಹೇಳಿದ್ದರು ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ.

ಅಲ್ಲದೆ ರೇಣುಕಾಚಾರ್ಯ ಹೆಣ ಎಸೆಯಲು ನಟ ದರ್ಶನ್‌ ನೀಡಿದ್ದಾರೆ ಎನ್ನಾಲಾದ 30 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆರೋಪಿಗಳು ಕೊಲೆ ಮಾಡಿದ ಬಳಿಕ ಪಿಎಸ್‌ಐಗೆ ಹಣದ ಆಮಿಷವೊಡ್ಡಿ ಸಹಾಯ ಮಾಡಲು ಕರೆ ಮಾಡಿದ್ದರು ಎನ್ನಲಾಗಿದೆ. ಆದರೆ, ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಆರೋಪಗಳನ್ನು ನಿರಾಕರಿಸಿದ್ದಾರೆ.

ಈ ಬಗ್ಗೆ ಬುಧವಾರ ಪರಿಶೀಲಿಸಲಾಗಿದೆ. ಈ ಆರೋಪ ಆಧಾರರಹಿತವೆಂದು ಕಂಡುಬಂದಿದೆ. ಮೃತದೇಹ ಪತ್ತೆಯಾಗುವವರೆಗೂ ಪೊಲೀಸ್ ಠಾಣೆಯ ಯಾವುದೇ ಪಿಎಸ್‌ಐಗೆ ಕೊಲೆಯ ಬಗ್ಗೆ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ಹೇಲಿದ್ದಾರೆ ಅಂತಾ ತಿಳದುಬಂದಿದೆ.

ರೇಣುಕಾಸ್ವಾಮಿ ನಾನು ಮಾಂಸ ತಿನ್ನಲ್ಲ ಸಾರ್‌.. ನನಗೆ ನಾನ್‌ ವೆಜ್‌ ತಿನ್ನಲ್ಲ ಎಂದು ಹೇಳಿದ್ದಾರೆ. ಆದರೂ ಕೂಡ ಅಲ್ಲಿದ್ದ ದರ್ಶನ್‌ ಮತ್ತು ಗ್ಯಾಂಗ್‌ ಆತನಿಗೆ ಒತ್ತಾಯಪೂರ್ವಕವಾಗಿ ಮಾಂಸದ ಮೂಳೆ ತಿನ್ನಿಸಿ ಹಲ್ಲೆ ಮಾಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಹಿರಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+