Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಸಂಬಂಧಿಗಳಲ್ಲಿ ಇದು ಮೂರನೇ ಸಾವು

ಬೆಂಗಳೂರು, ಜುಲೈ 29: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್​ ಆಪ್ತ ಗೆಳೆಯ ಪ್ರದೋಶ್ ಮನೆಯಲ್ಲಿ ಸಾವು ಸಂಭವಿಸಿದೆ. ಪ್ರದೋಶ್ ಅಜ್ಜಿ ನಿಧನರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನಿವಾಸದಲ್ಲಿ ಪ್ರದೋಶ್​ ಅಜ್ಜಿ ನಿಧನರಾಗಿದ್ದು, ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಪ್ರದೋಶ್​ ಅಜ್ಜಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Renukaswamy Murder Case Renuka Swamy s Murder Accused Pradosh Grandmother Dies

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವವರ ಹತ್ತಿರದ ಸಂಬಂಧಿಗಳ ಇದು ಮೂರನೇ ಸಾವು ಆಗಿದೆ. ಈ ಮೊದಲು ಚಿತ್ರದುರ್ಗದಲ್ಲಿ ಆರೋಪಿ ಅನು ತಂದೆ, ಪ್ರಕರಣದ ನಾಲ್ಕನೇ ಆರೋಪಿ ರಾಘು ಅವರ ತಾಯಿ ನಿಧನ ಹೊಂದಿದ್ದರು. ಇದೀಗ 14ನೇ ಆರೋಪಿ ಪ್ರದೋಶ್ ಮನೆಯಲ್ಲೂ ಸಾವು ಸಂಭವಿಸಿದೆ.

ದರ್ಶನ್‌ ಜೊತೆ ಜೈಲು ಸೇರಿದ ಪ್ರದೋಶ್‌ ಯಾರು..?

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್​ ಸ್ಟೂನಿ ಬ್ರೂಕ್​ನ ಮಾಲೀಕರೂ ಸಹ ಆಗಿದ್ದಾರೆ. ಇದೀಗ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರದೋಶ್‌ ಸ್ಯಾಂಡಲ್‌ವುಡ್ ನಟನಾಗಿದ್ದಾನೆ. ಈತ ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ನಟಿಸಿದ್ದಾನೆ. ಇದಲ್ಲದೇ ಬಿಜೆಪಿ ಸಚಿವರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೂಡ ಕೆಲಸ ಮಾಡಿದ್ದ ಎಂದು ವರದಿಯಾಗಿದೆ. ಇನ್ನು ದರ್ಶನ್‌ ಚಿತ್ರಗಳ ಸುದ್ದಿಗೋಷ್ಠಿ ಸೇರಿದಂತೆ ಇತರ ಕಾರ್ಯಕ್ರಮಗಳು ಸ್ಟೂನಿ ಬ್ರೂಕ್ ರೆಸ್ಟೋರೆಂಟ್‌ನಲ್ಲೇ ಮಾಡುತ್ತಿದ್ದರು ಎನ್ನಲಾಗಿದೆ.

ಪ್ರದೋಶ್‌ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ. ರೇಣುಕಾ ಸ್ವಾಮಿ ಮೃತಪಟ್ಟ ಬಳಿಕ ಗಾಬರಿಗೊಂಡ ದರ್ಶನ್‌ 30 ಲಕ್ಷ ರೂ. ನೀಡಿ ಮೃತದೇಹವನ್ನು ಎಲ್ಲಾದರು ಬಿಸಾಕುವಂತೆ ಹೇಳುತ್ತಾರೆ. ಆಗ ತನ್ನ ಆಪ್ತ, ಹೋಟೆಲ್ ಉದ್ಯಮಿ ಪ್ರದೋಶ್‌ ದರ್ಶನ್‌ ಹೇಳಿದಾಗ ಪ್ರದೋಶ್ ಮತ್ತಿತರರು ದೇಹವನ್ನು ಸ್ಕಾರ್ಪಿಯೋ ಕಾರಿನಲ್ಲಿ ಒಯ್ದು ಸುಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಒಂದರ ಮುಂಭಾಗದ ಮೋರಿ ಬಳಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+