ದರ್ಶನ್ ಆಪ್ತೆ ಪವಿತ್ರಾ ಗೌಡ ಕೈದಿ ನಂಬರ್ ಎಷ್ಟು..? ಇದೇ ಸಂಖ್ಯೆ ಯಾಕೆ..?
ಬೆಂಗಳೂರು, ಜೂನ್ 21: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇನ್ನೂ ಕೆಲ ಆರೋಪಿಗಳನ್ನು ಕೋರ್ಟ್ ಆದೇಶದ ಮೇರೆಗೆ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಹೈಫೈ ಜೀವನದಲ್ಲಿದ್ದ ಪವಿತ್ರಾ ಗೌಡ ಇದೀಗ ಜೈಲಿನ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ.
ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದು ನಿನ್ನೆ ಪ್ರಕರಣದ ವಿಚಾರಣೆ ನಡೆಸಿ ಕೋರ್ಟ್ ಪವಿತ್ರಾ ಗೌಡ ಹಾಗೂ ಕೆಲವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಎ1 ಆರೋಪಿ ಪವಿತ್ರಾ ಗೌಡನನ್ನ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿಗೆ ಹಾಕಲಾಗಿದ್ದು, ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ.

ಕೊಲೆ ಪ್ರಕರಣದ ಆರೋಪಿಯಾಗಿ ಜೈಲುಪಾಲಾಗಿರುವ ಪವಿತ್ರಾ ಗೌಡ ವಿಚಾರಣಾಧೀನ (UTP) ಕೈದಿ ನಂಬರ್- 6024 ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳಾ ವಿಭಾಗದ ಡಿ- ಬ್ಯಾರಕ್ನಲ್ಲಿ ಪವಿತ್ರಾ ಗೌಡರನ್ನ ಇರಿಸಲಾಗಿದ್ದು, ಜೈಲಿನ ಊಟೋಪಚಾರ ನೀಡಲಾಗುತ್ತಿದೆ. ಕಳೆದ ಹತ್ತು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಇದೀಗ ಜೈಲುಪಾಲಾಗಿದ್ದಾರೆ. ಬಂಧಿಸಿದ ದಿನದಿಂದ ಪೊಲೀಸರ ಮುಂದೆಯೇ ಕಣ್ಣೀರು ಹಾಕುತ್ತಿದ್ದ ಪವಿತ್ರಾ, ಸದ್ಯ ಮಹಿಳಾ ವಿಭಾಗದ ಕೊಠಡಿಯಲ್ಲಿ ಏಕಾಂಗಿಯಾಗಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ಹೈಫೈ ಜೀವನ ಅನುಭಿಸುತ್ತಿದ್ದ ಪವಿತ್ರಾ ಗೌಡ ಸದ್ಯ ಜೈಲು ಹಕ್ಕಿಯಾಗಿದ್ದಾರೆ. ಜೈಲಿನಲ್ಲಿ ನೀಡಿದ ಊಟ ಸರಿಯಾಗಿ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೇ ಒಂದೇ ರಾತ್ರಿಗೆ ಪವಿತ್ರಾ ಗೌಡ ಒದ್ದಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬೆಳಗ್ಗೆ ಏಳು ಗಂಟೆಗೆ ಏಳಲು ತಕರಾರು ಮಾಡಿದ್ದ ಪವಿತ್ರಾ ಗೌಡ ಇಂದು ಬೆಳಗ್ಗೆ 5 ಗಂಟೆಗೆ ಎಂದಿದ್ದಾರೆ. ಬೆಳಗ್ಗೆ ಸಿಬ್ಬಂದಿ ನೀಡಿದ ಉಪ್ಪಿಟ್ಟು ಹಾಗೂ ಕಾಫಿ ಸೇವಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications