Get Updates
Get notified of breaking news, exclusive insights, and must-see stories!

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನವೀಕರಣಗೊಂಡ ಐತಿಹಾಸಿಕ ಶ್ರೀಕೃಷ್ಣರಾಜ ಪರಿಷ್ಮನಂದಿರ

ಬೆಂಗಳೂರು ಆಗಸ್ಟ್ 25: ಶತಮಾನದಷ್ಟು ಹಳೆಯದಾದ ಕನ್ನಡ ಸಾಹಿತ್ಯ ಪರಿಷತ್ತಿನ 'ಶ್ರೀ ಕೃಷ್ಣರಾಜ ಪರಿಷನ್ಮಂದಿರ'ವು ಒಂಬತ್ತು ದಶಕಗಳಿಂದಲೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಹಲವು ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ಪರಿಷನ್ಮಂದಿರ ಕಟ್ಟಡವು ಸುಸಜ್ಜಿತವಾಗಿ ನವೀರಕರಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ.

ನವೀಕರಣಗೊಂಡು ಕಂಗೊಳಿಸುತ್ತಿರುವ 'ಕೃಷ್ಣರಾಜ ಪರಿಷತ್ತಿನ ಮಂದಿರ' ಹಾಗೂ 'ಆವರಣದ ನವೀಕೃತ ಕಟ್ಟಡ'ವನ್ನು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಇದೇ ಶುಕ್ರವಾರ ಆಗಸ್ಟ್ 26ರಂದು ಸಂಜೆ 5ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.

ಶತಮಾನದಷ್ಟು ಹಳೆಯದಾದ ಕಟ್ಟಡವು ಕಾಲನ ಹೊಡೆತಕ್ಕೆ ಸಿಕ್ಕ ಪರಿಣಾಮ ಶಿಥಿಲಾವಸ್ಥೆ ತಲಪಪಿತ್ತು. ಇದನ್ನು ಕಂಡ ಅನೇಕ ಸಾಹಿತಿಗಳು, ಕಲಾವಿದರು ನವೀಕರಣಗೊಳಿಸಲು ಸೂಚಿಸಿದ್ದರು. ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಮುಂದಾಳತ್ವದಲ್ಲಿ ಮಾರ್ಚ್ 18ರಂದು ನವೀಕರಣ ಕಾಮಗಾರಿ ಆರಂಭಗೊಂಡಿತು.

ಒಟ್ಟು ಸುಮಾರು 90ವರ್ಷಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕದ ಸಾಕಷ್ಟು ಗಮನಾರ್ಹ ಘಟನೆಗಳಿಗೆ ಈ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಾಕ್ಷಿಯಾಗಿದೆ. ಪರಿಷತ್ತಿನ ಈ ಶ್ರೀ ಕೃಷ್ಣರಾಜ ಪರಿಷನ್ಮಂದಿರದ ಐತಿಹ್ಯ, ಅದರ ಸ್ಥಾಪನೆ ಹಾಗೂ ನವೀಕರಣಗೊಂಡ ಕಟ್ಟಡದಲ್ಲಿ ಕಲ್ಪಿಸಲಾದ ವ್ಯವಸ್ಥೆ ಕುರಿತ ಮಾಹಿತಿ ಹೀಗಿದೆ.

ಮೊದಲು ಮನೆಯೊಂದರಲ್ಲಿ ಪರಿಷತ್ತು ಆರಂಭ

ಮೊದಲು ಮನೆಯೊಂದರಲ್ಲಿ ಪರಿಷತ್ತು ಆರಂಭ

ಕನ್ನಡ ಸಾಹಿತ್ಯ, ಭಾಷೆ ಹಾಗೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಆರಂಭವಾಯಿತು. ಆಗ ಚಾಮರಾಜಪೇಟೆಯಲ್ಲೇ ಪರಿಷತ್ತಿಗೆ ಸ್ವಂತ ನಿವೇಶನದ ಕನಸು ಕಂಡವರು ಅಂದು ಪರಿಷತ್ತಿಗೆ ಉಪಾಧ್ಯಕ್ಷರಾಗಿದ್ದ ಕರ್ಪೂರ ಶ್ರೀನಿವಾಸರಾಯರು. ಅದಕ್ಕೆ ಇಂಬು ನೀಡಿದವರು ಅಂದಿನ ದಿವಾನರಾದ ಸರ್. ಮಿರ್ಜಾ ಇಸ್ಮಾಯಿಲ್‌ರವರು. ಈ ಮಹನೀಯರ ಪ್ರಯತ್ನದಿಂದ ಶ್ರೀ ಕೃಷ್ಣರಾಜ ಪರಿಷ್ಮನಂದಿರ (ಪರಿಷತ್ತು ಮಂದಿರ)ಕ್ಕೆ ಈಗಿರುವ ನಿವೇಶನ ದೊರಕಿತು. ಇದು ಮೊದಲು ವಿಶಾಲವಾದ ಬಯಲು ಪ್ರದೇಶವಾಗಿತ್ತು. ಇಲ್ಲಿ ಭಾರತ ಸ್ವಾತಂತ್ರ್ಯ ಚಳವಳಿಯ ಎಲ್ಲ ಸಭೆಗಳೂ ನಡೆಯುತ್ತಿದ್ದವು. ಹೀಗಾಗಿ ಜನರು ಇದನ್ನು 'ಗಾಂಧಿ ಮೈದಾನ' ವೆಂದು ಕರೆಯುತ್ತಿದ್ದರು.

1931ರಲ್ಲಿ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ

1931ರಲ್ಲಿ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ

ನಿರಂತರ ಪ್ರಯತ್ನದೊಂದಿಗೆ 1931ಯ ಏಪ್ರಿಲ್ 12ರಂದು ಪರಿಷನ್ಮಂದಿರ ಕಟ್ಟಡದ ಶಂಕುಸ್ಥಾಪನೆ ನೆರವೇರಿತು. ಕಟ್ಟಡದ ವಿನ್ಯಾಸ, ರಚನೆಗೆ ಗಮನ ಕೊಟ್ಟಿದ್ದ ಕರ್ಪೂರ ಶ್ರೀನಿವಾಸರಾಯರು ನಿರ್ಮಾಣಕ್ಕೆ ಹಣ ಸಂಗ್ರಹಿಸಿದರು. ಕಟ್ಟಡದ ನಿಧಿಗಾಗಿ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್ ಮೂರು ಸಾವಿರ ರೂ.ಹಣವನ್ನು ಅಂದು ಪರಿಷತ್ತಿಗೆ ಅಧ್ಯಕ್ಷರಾಗಿದ್ದ ರಾಜಬಂಧು ಎಂ. ಕಾಂತರಾಜ ಅರಸ್ ಅವರು ಐದು ಸಾವಿರ ರೂಪಾಯಿಗಳನ್ನು ಉದಾರವಾಗಿ ದಾನ ನೀಡಿದರು. ನಂತರ ಪ್ರತ್ಯೇಕವಾಗಿ ಸುಮಾರು 2,500 ರೂ. ಸಂಗ್ರಹ ಮಾಡಿತು. ದಿವಾನರಾಗಿದ್ದ ಸರ್.ಮಿರ್ಜಾ ಇಸ್ಮಾಯಿಲ್ ಅವರು ಸರ್ಕಾರದಿಂದ 15,286 ರೂ. ಮಂಜೂರು ಮಾಡಿಸಿದ್ದರು.

ಕಟ್ಟಡ ನಿರ್ಮಾಣಕ್ಕೆ ಕರ್ಪೂರ ಶ್ರೀನಿವಾಸರಾಯರು, ಶ್ರೀ ಬೆಳ್ಳಾವೆ ವೆಂಕಟನಾರಾಯಣಪ್ಪನವರು, ಕಾರ್ಯನಿರ್ವಾಹಕ ಅಭಿಯಂತರರಾದ ಎ. ತಾಂಡೋಣಿರಾಯರ ಸೇವೆ ಸ್ಮರಣೀಯ. ಈ ಮೂವರು ಕಟ್ಟಡ ನೂರಾರು ವರ್ಷಗಳ ಕಾಲ ಸ್ಥಿರವಾಗಿ ನಿಲ್ಲುವಂತೆ ಬುನಾದಿ ಹಾಕಿದವರು. ನಂತರ 1933ರ ಮೇ 26ರಂದು ಶುಕ್ರವಾರವೇ ಕನ್ನಡ ಸಾಹಿತ್ಯ ಪರಿಷ್ಮಂದಿರ ಉದ್ಘಾಟನೆ ಆಗಿತ್ತು.

ಪರಿಷತ್ತಿಗೆ ಶುಕ್ರವಾರದ ಶುಭ

ಪರಿಷತ್ತಿಗೆ ಶುಕ್ರವಾರದ ಶುಭ

ಕಾಕತಾಳಿಯವೇನೋ ಎಂಬಂತೆ ಎಂಬಂತೆ ಉದ್ಘಾಟನೆಗೊಂಡಿದ್ದು, ಶುಕ್ರವಾರ ಪರಿಷನ್ಮಂದಿರದ ನವೀಕರಣ ಕಾಮಗಾರಿ ಆರಂಭ ಮಾಡಿದ್ದು ಶುಕ್ರವಾರ (ಕಳೆದ ಮಾರ್ಚ್18). ಇದೀಗ ನವೀಕರಣಗೊಂಡ ನಂತರ ಲೋಕಾರ್ಪಣೆಯಾಗುತ್ತಿರುವುದು ಇದೇ ಆಗಸ್ಟ್ 26ರ ಶುಕ್ರವಾರ. ಈ ದಿನ ಪರಿಷತ್ತಿನ ಮಟ್ಟಿಗೆ ಅವಸ್ಮರಣೀಯವೇ ಆಗಿದೆ. ಒಟ್ಟು ಕೇವಲ 5 ತಿಂಗಳಲ್ಲಿ ನವೀಕರಣ ಪೂರ್ತಿಗೊಂಡಿದೆ. ಮತ್ತೆ ಇಲ್ಲಿ ಯಥಾ ಸ್ಥಿತಿಯ ಕಾರ್ಯ ಚಟುವಟಿಕೆಗಳು ನಡೆಯಲಿವೆ ಎಂದು ಪರಿಷತ್ತಿನ ಅಧಿಕಾರಿಗಳು ತಿಳಿಸಿದ್ದಾರೆ.

ಸುಸಜ್ಜಿತ ವ್ಯವಸ್ಥೆ ಹೊಂದಿರುವ ಪರಿಷನ್ಮಂದಿರ

ಸುಸಜ್ಜಿತ ವ್ಯವಸ್ಥೆ ಹೊಂದಿರುವ ಪರಿಷನ್ಮಂದಿರ

ನವೀರಕಣಗೊಂಡಿರುವ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಹವಾನಿಯಂತ್ರಿತ ಸಭಾಂಗಣ, ಸುಸಜ್ಜಿತ ಆಸನ ವ್ಯವಸ್ಥೆ, ಸಮರ್ಪಕ ಧ್ವನಿವರ್ಧಕ, ಬೆಳಕಿನ ವಿನ್ಯಾಸ ಸೇರಿದಂತೆ ಅತ್ಯಧಿಕ ಮೂಲಸೌಲಭ್ಯಗಳೊಂದಿಗೆ ತಲೆಎತ್ತಿದೆ. ಜತೆಗೆ ಹಿಂದಿನ ಪರಂಪರೆಯ ಕೆಲವು ಗುರುತುಗಳನ್ನು ಉಳಿಸಿಕೊಳ್ಳಲಾಗಿದೆ. ಇದು ಇಂದಿನ ಆಧುನಿಕ ಕಾಲದಲ್ಲಿ ಇತಿಹಾಸ ತಿಳಿಸಲಿದೆ.

ಜನಸಾಮಾನ್ಯರ ಕೈಗೆ ಎಟುಕುವಂತೆ, ಸಾಂಸ್ಕೃತಿಕ ಲೋಕಕ್ಕೆ ಪೂರಕವಾಗುವಂತೆ ನಿರ್ಮಿಸಲಾಗಿದೆ. ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ಹೆಗ್ಗುರುತುಗಳಲ್ಲಿ ಇದು ಒಂದಾಗಲಿದೆ.

ವಿಶಾಲ ಸಭಾಭವನ ಹೊಂದಿರುವ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ 128 ಆಸನಗಳು, 10ಗಣ್ಯರ (ವಿಐಪಿ) ಆಸನ, ಪ್ರತ್ಯೇಕ ಸೋಫಾ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ನಿಯಮಾನುಸಾರ ಬಾಡಿಗೆಗೆ ನೀಡಲು, ಈ ಕುರಿತು ಸಮಿತಿ ರಚಿಸಲು ಪರಿಷತ್ತು ನಿರ್ಧರಿಸಿದೆ. ಇದರ ಜತೆಗೆ ಪರಿಷತ್ತಿನ ಕಟ್ಟಡ ಹಾಗೂ ಆವರಣವನ್ನೂ ಸಂಪೂರ್ಣ ಆಧುನಿಕವಾಗಿ ನವೀಕರಣಗೊಳಿಸಲಾಗಿದೆ.

ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಲೋಕಾರ್ಪಣೆ

ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಲೋಕಾರ್ಪಣೆ

ನವೀಕರಣಗೊಂಡ ಐತಿಹಾಸಿಕ ಕಟ್ಟಡಕ್ಕೆ ಹಿರಿಯ ಸಾಹಿತಿಗಳು ಸಮ್ಮುಖದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವ ಆರ್. ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಆಗಮಿಸಲಿದ್ದಾರೆ.

ವಿಶೇಷ ಅಥಿತಿಗಳಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಪಾಲ್ಗೊಳ್ಳಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+