• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಕ್ಷಿಗಾರ್ಡನ್ ದಾದಗಿರಿ ಹಾಗೂ ಕಾರ್ಪೋರೇಟರ್‌ಗಳ ಸಾವು !

|
Google Oneindia Kannada News

ಬೆಂಗಳೂರು, ಜೂ. 24: ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಜಿ ಸದಸ್ಯೆ ರೇಖಾ ಕದಿರೇಶ್ ತನ್ನ ಕಚೇರಿ ಮುಂದೆ ಹತ್ಯೆಯಾಗಿದ್ದಾರೆ. ಅರೋಪಿಗಳನ್ನು ಹುಡುಕಲಿಕ್ಕೆ ನಾನಾ ಆಯಾಮದಲ್ಲಿ ಎಂಟು ಪೊಲೀಸ್ ತಂಡಗಳು ಕಾರ್ಯ ನಿರತವಾಗಿದೆ. ಲಾಕ್ ಡೌನ್ ಸಡಿಲಗೊಳ್ಳುವುದನ್ನೇ ಕಾಯುತ್ತಿದ್ದ ಹಂತಕರು ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದರೇ ಎಂಬ ವಿಷಯ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಆಕೆ ಮೇಲೆ ಬೆಳಗಿನಿಂದಲೂ ನಿಗಾ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಹಸಿದವರಿಗೆ ಅನ್ನ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರೇಖಾ ಕದಿರೇಶ್ ಮೇಲೆ ಕಿರಾತಕರು ಮುಂಜಾನೆಯಿಂದಲೇ ನಿಗಾ ಇಟ್ಟಿದ್ದರು. ಕಚೇರಿ ಹಾಗೂ ಮನೆ ಸುತ್ತ ಸುತ್ತಾಡಿದ್ದವರು, ಹತ್ಯೆಗೆ ಕಚೇರಿಯನ್ನೇ ನಿಗದಿ ಮಾಡಿದ್ದರು. ಅದಕ್ಕಾಗಿ ಕಚೇರಿಗೆ ಹಾಕಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿ ಬರುವುದನ್ನೇ ಕಾಯುತ್ತಿದ್ದರು. ಬೆಳಗ್ಗೆ 8.30 ರ ಸುಮಾರಿಗೆ ಕಚೇರಿಗೆ ಬಂದಿದ್ದ ರೇಖಾ ಕದಿರೇಶ್ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಏಕಾಏಕಿ ಮೂವರು ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕದಿರೇಶ್ ಪತ್ನಿ ಪಾಲಿಕೆ ಸದಸ್ಯೆ ಆಗುವ ಮುನ್ನ ಅನೇಕರಿಗೆ ಉಪಟಳ ನೀಡಿದ್ದ. ಅದರ ಪ್ರತಿಕಾರಕ್ಕಾಗಿ ಆತನೇ ಜೀವ ಕಳೆದುಕೊಂಡಿದ್ದ. ಇದೀಗ ಏನೂ ಅರಿಯದ ಆತನ ಮುಗ್ಧ ಪತ್ನಿ ಕೂಡ ಭಕ್ಷಿ ಗಾರ್ಡನ್ ಪಾತಕ ಲೋಕಕ್ಕೆ ಬಲಿಯಾಗಿದ್ದಾರೆ.

ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಬರ್ಬರ ಹತ್ಯೆ ,ಆರೋಪಿಗಳು ಪರಾರಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಬರ್ಬರ ಹತ್ಯೆ ,ಆರೋಪಿಗಳು ಪರಾರಿ

ಅಮ್ಮ ಭಯದ ಬಗ್ಗೆ ಹೇಳಿರಲಿಲ್ಲ

ರೇಖಾ ಪುತ್ರ ಹೇಳಿಕೆ: ಪೀಟರ್ ನಮಗೆ ತುಂಬಾ ಆತ್ಮೀಯನಾಗಿದ್ದ. ಪೀಟರ್ ಮತ್ತು ಆತನ ಸಹಚರರು ಕೊಲೆ ಮಾಡಿರುವುದು ಕಾಲ್ ಮಾಡಿದಾಗ ಗೊತ್ತಾಯಿತು. ನನಗೆ ಜೀವ ಭಯವಿದ್ದ ಕಾರಣ ನನ್ನ ಸಹೋದರಿಯ ಮನೆಯಲ್ಲಿಯೇ ಇದ್ದೆ. ಪ್ರತಿ ದಿನ ಕರೆ ಮಾಡಿ ಪೀಟರ್ ಮಾತನಾಡುತ್ತಿದ್ದ. ಊಟ ಹಂಚುವ ಕೆಲಸ ಮಾಡುತ್ತಿದ್ದೆವು. ನಮ್ಮ ತಾಯಿಗೂ ಜೀವ ಭಯವಿತ್ತು. ಈ ವಿಚಾರವನ್ನು ತಾಯಿಗೆ ಹೇಳಿದರೂ, ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದ್ದರು. ಅಮ್ಮನಿಗೆ ಜೀವ ಭಯ ಇರುವ ಬಗ್ಗೆ ಅವರು ಯಾವತ್ತೂ ನಮ್ಮ ಜತೆ ಹೇಳಿಕೊಂಡಿರಲಿಲ್ಲ ಎಂದು ರೇಖಾ ಕದಿರೇಶ್ ಪುತ್ರ ರಾಹುಲ್ ಪ್ರತಿಕ್ರಿಯೆ ನೀಡಿದ್ದಾನೆ.

ಕನಸನ್ನೂ ನಾನೇ ಕಾಡ್ತೀನಿ ಎಂದ ಜಮೀರ್

ರೇಖಾ ನನ್ನ ತಂಗಿ ಇದ್ದ ಹಾಗೆ : ರೇಖಾ ಕದಿರೇಶ್ ಹತ್ಯೆಯಾಗಿರುವುದು ನನಗೆ ಶಾಕ್ ಆಗಿದೆ. ರೇಖಾ ನನ್ನ ತಂಗಿ ತರ ಇದ್ದರು. 2018 ರಲ್ಲಿ ಅವರ ಪತಿ ಕೊಲೆಯಾದರು. ಈಗ ಅವರ ಪತ್ನಿ ಕೊಲೆಯಾಗಿದ್ದಾರೆ. ಜನ ಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ತಪ್ಪಿಸ್ಥರನ್ನು ಹಿಡಿದು ಗಲ್ಲಿಗೇರಿಸಬೇಕು. ರೇಖಾ ನನ್ನ ಸಹೋದರಿ ಇದ್ದಂತೆ. ಅವರ ಮಕ್ಕಳಿಗೆ ಆಸರೆಯಾಗುವೆ. ಅವರ ಮಕ್ಕಳನ್ನು ಕಾಪಾಡುವ ಕೆಲಸ ಮಾಡುತ್ತೇನೆ. ಯಾರದ್ದೋ ದ್ವೇಷಕ್ಕೆ ಯಾರನ್ನು ಬಲಿ ಪಡೆಯುವುದು ಎಷ್ಟು ಸರಿ ಎಂದು ಶಾಸಕ ಜಮೀರ್ ಪ್ರಶ್ನಿಸಿದರು.

   ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಕೇಸ್- ಮಾಹಿತಿ ಕಲೆ ಹಾಕುತ್ತಿರುವ ಪೊಲಿಸ್‌ ಅಧಿಕಾರಿಗಳು | Oneindia Kannada

   ರೇಖಾ ಕದಿರೇಶ್ ಹತ್ಯೆ ಹಿಂದೆ ರಾಜಕೀಯ ಅಡಗಿದೆ ಎಂದು ಎನ್.ಆರ್. ರಮೇಶ್ ಅರೋಪ ಮಾಡಿದ್ದಾರೆ. ರಮೇಶ್‌ಗೆ ನಾನು ಕನಸಲ್ಲಿ ಕಾಡ್ತಾ ಇದ್ದೀನಿ ಅನ್ಸುತ್ತೆ. ವಿನಾಃಕಾರಣ ಆರೋಪ ಮಾಡುವುದು ಸರಿಯಲ್ಲ. ರೇಖಾ ಬಿಜೆಪಿಯಲ್ಲಿದ್ದವರು. ನಾನು ಜೆಡಿಎಸ್‌ನಿಂದ ಗೆದ್ದಿರುವನು. ಚುನಾವಣೆ ವೇಳೆ ರಾಜಕೀಯಕ್ಕೆ ಸೀಮಿತ. ಉಳಿದಂತೆ ನನ್ನ ಸಹೋದರಿ ರೀತಿ ಇದ್ದರು ಎಂದು ಇದೇ ವೇಳೆ ಜಮೀರ್ ಪ್ರತಿಕ್ರಿಯೆ ನೀಡಿದ್ದಾರೆ.

   English summary
   Rakha Kadiresh son Rahul' makes statement on murder of Rekha Kadiresh know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X