ರೇಖಾ ಹತ್ಯೆಗೆ ಮಾರ್ಚ್‌ನಲ್ಲೇ ಮುಹೂರ್ತ ಫಿಕ್ಸ್ ಮಾಡಿದ್ದ ಮಾಸ್ಟರ್

ಬೆಂಗಳೂರು, ಜು. 05: ಛಲವಾದಿ ಪಾಳ್ಯ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ರೇಖಾ ಕದಿರೇಶ್ ಸಹೋದರಿ ಮಾಲಾ ಮತ್ತು ಆಕೆಯ ಪುತ್ರ ಅರುಳ್ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಅರೋಪಿಯನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ರೇಖಾ ಹತ್ಯೆಯ ಬಗ್ಗೆ ರೂಪಿಸಿದ್ದ ಸಂಚಿನ ಮೀಟಿಂಗ್ ಈ ಆರೋಪಿ ವಹಿಸಿದ್ದ. ರೇಖಾ ಕದಿರೇಶ್ ಹತ್ಯೆ ಸಂಬಂಧ ಯಾರು ಏನು ಮಾಡಬೇಕು ಎಂಬುದರ ಸ್ಕೆಚ್ ಹಾಕಿಕೊಟ್ಟಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಕಾಟನ್‌ ಪೇಟೆ ಪೊಲೀಸರು ಬಂಧಿಸಿದ್ದಾರೆ.

ಸೆಲ್ವರಾಜ್ ಅಲಿಯಾಸ್ ಪೂಬಾಳನ್, ಮಾಸ್ಟರ್ ಅಲಿಯಾಸ್ ಕ್ಯಾಪ್ಟನ್ ಬಂಧಿತ ಆರೋಪಿ. ಈತ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ರೇಖಾ ಕದಿರೇಶ್ ಇದ್ದರೆ ನಮಗೆ ಉಳಿಗಾಲವಿಲ್ಲ. ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದು ಗೊತ್ತಾದ ಕೂಡಲೇ ರೌಡಿ ಲೇಡಿ ಮಾಲಾ ಹತ್ಯೆಗೆ ಪ್ಲಾನ್ ರೂಪಿಸಿದ್ದಳು.

Rekha Kadiresh Murder Case: Main Accused Selvaraj alias Poobalan arrested by Cottanpete police

ಅದನ್ನು ಕಾರ್ಯಗತಗೊಳಿಸಲು ಮಾಸ್ಟರ್ ಅಲಿಯಾಸ್ ಪೂಬಾಳನ್ ಸಹಾಯ ಪಡೆದಿದ್ದಳು. ಕದಿರೇಶ್ ಹತ್ಯೆ ಬಳಿಕ ರೇಖಾ ವರ್ತನೆಯಿಂದಲೂ ಬೇಸರಗೊಂಡಿದ್ದ ಮಾಲಾ, ಹತ್ಯೆಯೇ ಫರಿಹಾರ ಎಂದು ತೀರ್ಮಾನಿಸಿದ್ದಳು. ಅದಕ್ಕಾಗಿ ಈಜೀಪುರ, ವಿವೇಕನಗರ, ಭಕ್ಷಿಗಾರ್ಡನ್ ಪಾತಕಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದ ಸೆಲ್ವರಾಜ್ ನೆರವು ಪಡೆದಿದ್ದಳು.

ಅದರಂತೆ ಮಾರ್ಚ್‌ನಲ್ಲಿ ಮಾಲಾ ಮನೆಯಲ್ಲಿ ಮೀಟಿಂಗ್ ಸೇರಿ, ಯಾರು ಯಾವ ಕೆಲಸ ಮಾಡಬೇಕು ಎಂಬುದರ ಬಗ್ಗೆ ಸ್ಕೆಚ್ ಹಾಕಿ ಸೆಲ್ವರಾಜ್ ಪ್ಲಾನ್ ಮಾಡಿದ್ದ. ಅದರಂತೆ ಹತ್ಯೆಯಾದ ಬಳಿಕ ಐವರು ಆರೋಪಿಗಳು ಎರಡು ತಂಡಗಳಾಗಿ ಪರಾರಿಯಾಗಲು ಸಲಹೆ ಮಾಡಿದ್ದ. ಅದರಂತೆ ಆರೋಪಿಗಳು ಪರಾರಿಯಾಗಿದ್ದರು. ಪರಾರಿಯಾಗಿದ್ದ ಆರೋಪಿಗಳಿಗೆ ಹಣಕಾಸು ನೆರವು ಎಲ್ಲಿ ಪಡೆಯಬೇಕು ? ಯಾರನ್ನು ಸಂಪರ್ಕಸಿಬೇಕು ಎಂಬುದ್ನು ಕೂಡ ಆರೋಪಿಗಳೀಗೆ ಒದಗಿಸಿದ್ದ.

ರೇಖಾ ಕದಿರೇಶ್ ಹತ್ಯೆ ಪ್ರಮುಖ ಆರೋಪಿ ಪೀಟರ್ ಜತೆ ನಿಕಟ ಸಂಪರ್ಕದಲ್ಲಿದ್ದ ಸೆಲ್ವರಾಜ್ ಅಲಿಯಾಸ್ ಮಾಸ್ಟರ್, ಪಾತಕಿಗಳ ಪಾಲಿನ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡಿದ್ದ.

Recommended Video

      ಒಂದು ದಿನಕ್ಕೆ ಕ್ರಿಕೆಟಿಗ ಪಡೆಯುವ ಸಂಬಳ ಎಷ್ಟು ಗೊತ್ತಾ?ಕೇಳಿದ್ರೆ ಅಚ್ಚರಿಯಾಗುತ್ತೆ!!! | Oneindia Kannada

      ಮೊದಲು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸೆಲ್ವರಾಜ್ ತದನಂತರ ಬೆಂಗಳೂರು ಪಾತಕ ಲೋಕದಲ್ಲಿ ಸಂಪರ್ಕ ಸಾಧಿಸಿ ಮಾಸ್ಟರ್ ಮೈಂಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಬಂಧಿತ ಆರೋಪಿ ಪೀಟರ್ ಮತ್ತು ಮಾಲಾ ವಿಚಾರಣೆ ವೇಳೆ ಹೇಳಿದ ಮಾಹಿತಿ ಆಧರಿಸಿ ಮಾಸ್ಟರ್ ಮೈಂಡ್‌ನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+