ಕೊವಿಡ್ ಪರೀಕ್ಷೆ ಹಣ ಮರುಪಾವತಿಯಲ್ಲಿ ತಡ: ಖಾಸಗಿ ಲ್ಯಾಬ್‌ಗಳಿಂದ ಬೇಸರ

ಬೆಂಗಳೂರು,ನವೆಂಬರ್ 07: ಕೊವಿಡ್ 19 ಪರೀಕ್ಷೆಯ ಹಣ ಮರುಪಾವತಿ ಮಾಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವ ಕಾರಣ ಖಾಸಗಿ ಲ್ಯಾಬ್‌ಗಳು ಅಸಮಾಧಾನ ವ್ಯಕ್ತಪಡಿಸಿವೆ.

ಅ.16 ರಂದು ಸರ್ಕಾರ ಆರ್ ಟಿ ಪಿಸಿಆರ್ ಪರೀಕ್ಷೆಗೆ 800 ರೂಪಾಯಿ ದರ ನಿಗದಿಪಡಿಸಿತ್ತು. ಸ್ಯಾಂಪಲ್ ಗಳನ್ನು ಸಾರಿಗೆ ಮೂಲಕ ಖಾಸಗಿ ಲ್ಯಾಬ್ ಗಳಿಗೆ ಕಳಿಸುವುದಕ್ಕೆ 400 ರೂಪಾಯಿಗಳಿಗೆ ನಿಗದಿಪಡಿಸಿತ್ತು.

ಲ್ಯಾಬ್ ಸ್ಥಾಪನೆಗೆ 1.5 ಕೋಟಿ ರೂಪಾಯಿ ಖರ್ಚು ಮಾಡಿರುತ್ತೇವೆ, ಸರ್ಕಾರ ಮರುಪಾವತಿ ಮಾಡದೇ ಇರುವುದಕ್ಕೆ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.

Reimbursements For Covid-19 Tests Delayed, Private Labs Cry Foul

ಸರ್ಕಾರದಿಂದ ಕಳಿಸಲಾಗುವ ಕೊವಿಡ್-19 ಪರೀಕ್ಷೆಗಳ ವೆಚ್ಚಗಳಿಗೆ ಸರ್ಕಾರ 800 ರೂಪಾಯಿ ದರ ನಿಗದಿಪಡಿಸಿತ್ತು. ಆದರೆ ಹೆಚ್ಚುವರಿ ಹಣವನ್ನು ಖಾಸಗಿ ಲ್ಯಾಬ್ ಗಳಿಗೆ ಮರುಪಾವತಿ ಮಾಡಬೇಕಿರುವ ಸರ್ಕಾರ ಈ ವರೆಗೂ ಒಂದೇ ಒಂದು ರೂಪಾಯಿಯನ್ನೂ ಪಾವತಿ ಮಾಡಿಲ್ಲ ಎಂದು ಖಾಸಗಿ ಲ್ಯಾಬ್ ಗಳು ಅಸಮಾಧಾನ ವ್ಯಕ್ತಪಡಿಸಿವೆ.

ನಾಲ್ಕು ವಾರಗಳಿಂದ ಸರ್ಕಾರ ಮರುಪಾವತಿ ಮಾಡಿಲ್ಲ ಎಂದು ಖಾಸಗಿ ಲ್ಯಾಬ್ ನ ಸಿಇಒ ಹೇಳಿದ್ದಾರೆ. ಲ್ಯಾಬ್ ಗಳು ಅನೇಕ ಪೂಲ್ ಟೆಸ್ಟ್ ಗಳನ್ನೂ ಮಾಡಿವೆ ಎರಡನೇ ಬಾರಿ ನಡೆಸಿದ ಟೆಸ್ಟ್ ಗಳಿಗೆ ಸರ್ಕಾರ ಹಣ ಕೊಟ್ಟಿಲ್ಲ ಎಂದು ಖಾಸಗಿ ಲ್ಯಾಬ್ ಗಳು ದೂರಿವೆ.

ಈ ಬಗ್ಗೆ ಖಾಸಗಿ ವೈದ್ಯಕೀಯ ಪ್ರಾಂಶುಪಾಲರು ಮಾತನಾಡಿದ್ದು, ತಮ್ಮ ಸಂಸ್ಥೆಗಳೂ ಸಹ ಟೆಸ್ಟಿಂಗ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸರ್ಕಾರ ಈ ವರೆಗೂ 29,700 ರೂಪಾಯಿ ನೀಡಬೇಕಿದೆ ಈ ವರೆಗೂ ಒಂದೇ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.

Recommended Video

      Muniratna vs Kusuma : RR Nagar ಕಣದಲ್ಲಿ ಗೆಲ್ಲೋದು ಯಾರು, ಎರಡೂ ಪಕ್ಷಗಳ ಜಿದ್ದಾಜಿದ್ದಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+