ಕೇಂದ್ರ ಬಜೆಟ್ ನ್ನು ಬಣ್ಣಿಸಿದ ಜ್ಯುವೆಲರಿ ಅಸೊಷಿಯೇಷನ್
ಬೆಂಗಳೂರು, ಫೆಬ್ರವರಿ 1 : ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿನ್ನದ ಮೇಲಿನ ಅಮದು ಸುಂಕ ಕಡಿಮೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜ್ಯುವೆಲರಿ ವ್ಯಾಪಾರಿಗಳಿಗೆ ಬಂಬರ್ ಸುಗ್ಗಿ ನೀಡಿದೆ. ಇದರಿಂದ ಪ್ರತಿ ಗ್ರಾಂ ಚಿನ್ನದ ಮೇಲೆ ನೂರು ರೂಪಾಯಿ ಇಳಿಕೆಯಾಗಲಿದ್ದು, ಚಿನ್ನ ಪ್ರಿಯರೂ ಸಂತಸಗೊಂಡಿದ್ದಾರೆ.
ಚಿನ್ನದ ಮೇಲಿನ ಅಮದು ಸುಂಕ ಕಡಿಮೆ ಮಾಡಿರುವ ಬಗ್ಗೆ ಕರ್ನಾಟಕ ಜ್ಯುವೆಲರಿ ಅಸೋಷಿಯೇಷನ್ ಅಧ್ಯಕ್ಷ ಎಸ್. ಶರವಣ ಪ್ರತಿಕ್ರಿಯೆ ನೀಡಿದ್ದಾರೆ. ಚಿನ್ನದ ಮೇಲಿನ ಅಮದು ಸುಂಕ ಮೊದಲು 12. 5 ರಷ್ಟು ಇತ್ತು. ಇದು ಚಿನ್ನದ ಉದ್ಯಮಕ್ಕೆ ನೀಡಿತ್ತು. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅಮದು ಸುಂಕವನ್ನು 7.5 ಕ್ಕೆ ಇಳಿಸಿದ್ದಾರೆ. ಬದಲಿಗೆ ಕೃಷಿ ಸೆಸ್ ಶೇ. 3 ರಷ್ಟು ನೀಡಿದ್ದಾರೆ. ಇದು ಜ್ಯುವೆಲರಿ ಉದ್ಯಮಕ್ಕೆ ದೊಡ್ಡ ಕೊಡುಗೆ ನೀಡಿದಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಣಯ ಐತಿಹಾಸಿಕ ಬಜೆಟ್. ಎಲ್ಲರಿಗೂ ಖುಷಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

Budget 2021 Live Updates : ರಕ್ಷಣಾ ಕ್ಷೇತ್ರಕ್ಕೆ ಶೇಕಡಾ 20ರಷ್ಟು ಅನುದಾನ ಹೆಚ್ಚಳ
ಚಿನ್ನದ ಅಮದು ಸುಂಕ ಕಡಿಮೆ ಮಾಡಿರುವುದರಿಂದ ಚಿನ್ನದ ಪ್ರಿಯರಿಗೆ ಲಾಭವಾಗಲಿದೆ. ಪ್ರತಿ ಗ್ರಾಂ ಚಿನ್ನದ ಮೇಲಿನ ದರ ನೂರು ರೂಪಾಯಿ ಕಡಿಮೆಯಾಗಲಿದೆ. ಜ್ಯುವೆಲರಿ ಮಾಲೀಕರಿಗೂ ಅನುಕೂಲವಾಗಲಿದೆ. ಇನ್ನು ಚಿನ್ನದ ಉದ್ಯಮಕ್ಕೆ ಕೃಷಿ ಸೆಸ್ ಪರಿಚಯಿಸಿದ್ದಾರೆ. ದೇಶದ ಅನ್ನದಾತ ಕಷ್ಟದಲ್ಲಿದ್ದಾನೆ. ಯಾವ ಹೆಸರಿನಲ್ಲಿ ತೆರಿಗೆ ವಸೂಲಿ ಮಾಡಲಾಗುತ್ತಿದೆಯೋ ಅದನ್ನು ಅದೇ ಉದ್ದೇಶಕ್ಕೆ ಬಳಸಬೇಕು ಎಂಬುದು ನನ್ನ ಮನವಿ. ಕೇಂದ್ರ ಸರ್ಕಾರ ಕೃಷಿ ಸೆಸ್ ನ್ನು ಅನ್ನದಾತರಿಗೆ ಬಳಸಬೇಕು ಎಂದು ಶರವಣ ತಿಳಿಸಿದ್ದಾರೆ.












Click it and Unblock the Notifications